Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 29ರ ಮಂಗಳವಾರ ಹಬ್ಬದ ದಿನ ಯಾರಿಗೆ ಶುಭ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 29ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಅನುಕೂಲ ತರುವ ದಿನ. ಇಂದು ನಿಮ್ಮ ಹಲವು ಆಸೆಗಳ ಈಡೇರಿಸಿಕೊಳ್ಳುತ್ತೀರಿ. ಹಣಕಾಸಿನ ಸಂಕಷ್ಟದಿಂದ ಖರ್ಚು ಕಡಿಮೆ ಮಾಡುತ್ತೀರಿ. ಅಗತ್ಯ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ದೊಡ್ಡ ಬದಲಾವಣೆ ನೋಡಬಹುದು. ನಿಮ್ಮ ದೈನಂದಿನ ಕೆಲಸದಲ್ಲಿ ಅಡ್ಡಿಗಳ ನೋಡುವಿರಿ. ಆಂತರಿಕ ಅನಾರೋಗ್ಯ ಕಾಡಬಹುದು. ಸರ್ಕಾರಿ ನೌಕರರಲ್ಲಿ ಗೊಂದಲಾತ್ಮಕ ದಿನವಿದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ಕುಟುಂಬದೊಂದಿಗೆ ದೇವಾಲಯ ಭೇಟಿಗೆ ನೀವು ಮುಂದಾಗುತ್ತೀರಿ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಲಿದ್ದೀರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಸಮಸ್ಯೆಗಳ ದಿನ ಎನ್ನಬಹುದು. ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಳೆಯ ಸಾಲಗಳು ತೀರಿಸುವ ಬದಲು ಮತ್ತೆ ಸಾಲ ಮಾಡಬಹುದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಈ ದಿನವು ಮಿಶ್ರಫಲದ ದಿನವಾಗಿರಲಿದೆ. ಸಮಯಕ್ಕೆ ತಕ್ಕಂತೆ ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಹಾಗೂ ಬುದ್ದಿವಂತಿಕೆಯಿಂದ ಮುನ್ನಡೆಯಿರಿ. ವ್ಯಾಪಾರಿಗಳಿಗೆ ಉತ್ತಮ ಸಮಯ. ಅನಗತ್ಯ ವಿಚಾರಗಳು, ಚರ್ಚೆಗಳಿಂದ ದೂರವಿರಿ.
ಕನ್ಯಾ ರಾಶಿ
ಇಂದು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಅವಕಾಶ ಒಲಿದುಬರಲಿದೆ. ವಾಹನ ಸಂಬಂಧಿ ಎಚ್ಚರಿಕೆ ಅಗತ್ಯ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವ. ಗಂಡನ ಮನೆಯಲ್ಲಿ ನಿಮಗೆ ಸಮಸ್ಯೆ ಬರಬಹುದು. ಆಸ್ಪತ್ರೆ ವಿಚಾರವಾಗಿ ನೀವು ಚಿಂತಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಒಂದಿಷ್ಟು ಮಾನಸಿಕ ಅಶಾಂತಿ ತರಬಹುದು. ನಿಮ್ಮ ಉದ್ಯೋಗ, ಮಕ್ಕಳು, ಕುಟುಂಬ ಕುರಿತಾದ ಯಾವುದಾದರು ಚಿಂತೆ ಕಾಡಬಹುದು. ಅಪ್ತರ ಕಡೆಯಿಂದ ನಿಮಗೆ ಕಹಿ ಸುದ್ದಿ ಬರಬಹುದು. ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಉತ್ತಮ ಫಲಿತಾಂಶ ನೋಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಓಡಾಟ, ಪ್ರಯಾಣದಲ್ಲಿ ಭಾಗಿಯಾಗುವ ದಿನವಾಗಿರಲಿದೆ. ಸಮಸ್ಯೆಗಳನ್ನು ದೊಡ್ಡದಾಗಲು ಬಿಡಬೇಡಿ. ಯಾರಿಗೂ ಹಣಕಾಸಿನ ನೆರವು ನೀಡಲು ಮುಂದಾಗದೆ ಇರುವುದು ಉತ್ತಮ.
ಧನು ರಾಶಿ
ಧನು ರಾಶಿಯರಿಗೆ ಈ ದಿನ ಮಿಶ್ರ ಫಲ ತರಲಿದೆ, ಮನೆಯಲ್ಲಿ ಶಾಂತ ವಾತಾವರಣ ಇರಲಿದೆ. ನಿಮ್ಮ ಹಣಕಾಸು ವಿವಾರದಲ್ಲಿ ಮನಸ್ತಾಪಗಳು ಮೂಡುವ ದಿನ ಇರಲಿದೆ. ಕೆಲಸ ಕಾರ್ಯಗಳ ಕುರಿತಾದ ಚಿಂತೆ ಹೆಚ್ಚಾಗಬಹುದು. ಯಾರಿಗೂ ಅಮೂಲ್ಯ ವಸ್ತುಗಳ ನೀಡಬೇಡಿ.
ಮಕರ ರಾಶಿ
ಮಕರ ರಾಶಿಯವರಲ್ಲಿ ಈ ದಿನವು ಉತ್ತಮ ಎನ್ನಬಹುದು. ನಿಮ್ಮ ದಾಂಪತ್ಯ ವಿಚಾರವಾಗಿ ಇಷ್ಟ ದಿನಗಳ ಕಾಲ ಇದ್ದಂತಹ ಯಾವುದಾದರು ಮನಸ್ತಾಪ ನಿವಾರಣೆಯಾಗಲಿದೆ. ಸಾಲ ಮರುಪಾವತಿ ಸಂಬಂಧ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿರಲಿ.
ಕುಂಭ ರಾಶಿ
ಕುಂಭ ರಾಶಿಯ ಮಂದಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಬಹುದು. ದಿಢೀರ್ ಧನಲಾಭದ ನಿರೀಕ್ಷೆ ಇಡಬಹುದು, ವ್ಯಾಪಾರಿಗಳಿಗೆ ಲಾಭದ ದಿನ. ಹೊಸ ಉದ್ಯೋಗ, ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನ ಶುಭಕಾಲ. ಪ್ರಯಾಣ ಮಾಡಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಆರ್ಥಿಕ ಸ್ವಾವಲಂಬನೆಯ ದಿನ. ಗೃಹಿಣಿಯರಲ್ಲಿ ಮಕ್ಕಳ ಕಡೆಯಿಂದ ಸಮಸ್ಯೆ ಬರಬಹುದು, ನಿಮ್ಮ ಭವಿಷ್ಯದ ಆಲೋಚನೆಯೊಂದರ ನಿರ್ಧಾರ ಬದಲಾಯಿಸಬೇಕಾಗಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಿದೆ. ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಉತ್ತಮ ಫಲಿತಾಂಶ ನೋಡಬಹುದು.



Click it and Unblock the Notifications