Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Dina Bhavishya: ಜುಲೈ 28ರ ಸೋಮವಾರ ಯಾರಿಗೆ ಲಾಭದಾಯಕ ದಿನ
ವೈದಿಕ ಶಾಸ್ತ್ರದ ಪ್ರಕಾರ ಜುಲೈ 28ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನವು ಸಾಮಾನ್ಯವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಲಾಭದಾಯಕ ದಿನವಾಗಿದ್ದರೂ ಹಲವು ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಇರಬಹುದು. ಸಾಮಾನ್ಯ ದಿನಕ್ಕಿಂತ ಹೆಚ್ಚ ಖರ್ಚು ಮಾಡುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನವು ಬಹಳ ಕಷ್ಟಕರ ದಿನ ಎನ್ನಬಹುದು. ಈ ದಿನ ನಿಮ್ಮ ಆರ್ಥಿಕ ವಿಚಾರದಲ್ಲಿ ಸಮಸ್ಯೆ ಇರಬಹುದು. ವ್ಯಾಪಾರಿಗಳಿಗೆ ಬಯಸಿದ ಹಣಕಾಸು ಫಲಿತಾಂಶ ಸಿಗದೆ ಇರಬಹುದು. ಗೃಹಿಣಿಯರ ಆರೋಗ್ಯ ಕುರಿತು ಎಚ್ಚರಿಕೆ ವಹಿಸಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಬಹಳ ಅನುಕೂಲಕರವಾಗಿರಲಿದೆ. ದೊಡ್ಡ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ಹಣಕಾಸು ವಿಚಾರವಾಗಿ ನಿಮಗೆ ಬಹಳ ಉತ್ತಮ ದಿನವಗಬಹುದು. ವೇತನ ಸಂಬಂಧಿ, ಸಾಲ ಸಂಬಂಧಿ ವಿಚಾರದಲ್ಲಿ ಧನಾತ್ಮಕ ದಿನ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನವು ಮಿಶ್ರ ಫಲದ ದಿನವಾಗಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇತರರೊಂದಿಗೆ ಬೇಡಿಕೆ ಏನಾದರು ಇಟ್ಟಿದ್ದರೆ ಹಾಗೆ ನಿಮಗೆ ಬರಬೇಕಿದ್ದ ಹಣವು ಇನ್ನಷ್ಟು ದಿನ ಮುಂದೂಡಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಮಯದೊಂದಿಗೆ ನಿಮ್ಮ ಕೆಲಸಗಳನ್ನೂ ಪೂರ್ಣ ಮಾಡುವಿರಿ, ಮನೆಯಲ್ಲೂ ನೆಮ್ಮದಿಯ ವಾತಾವರಣ ಇರಲಿದೆ. ಪ್ರಯಾಣ ಮಾಡಬೇಕಾಗಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲ ಇರಲಿದೆ. ನಿಮ್ಮ ಹೊಸ ವ್ಯಾಪಾರ ಒಪ್ಪಂದಳಿಗೆ ನೀವು ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮಿಂದ ಇತರರಿಗೆ ಹಣಕಾಸು ಸಹಾಯ ಮಾಡುತ್ತೀರಿ. ಆರೋಗ್ಯದಲ್ಲಿ ಪ್ರಗತಿ ಇರಲಿದೆ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನವು ಉದ್ಯೋಗ ಸಂಬಂಧಿ ಒತ್ತಡ ಅಥವಾ ಸಮಸ್ಯೆಗೆ ಕಾರಣವಾಗಬಹುದು. ಕುಟುಂಬಸ್ಥರ ಕಡೆಯಿಂದ ಯಾವುದಾದರು ವಿಚಾರವಾಗಿ ನಿಮ್ಮ ಮೇಲೆ ಒತ್ತಡ ಬರಬಹುದು. ಅನಾರೋಗ್ಯ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ನೀವು ಖರ್ಚು ಮಾಡಬೇಕಾಗಿ ಬರಬಹುದು.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಇಂದು ಪ್ರಯಾಣಗಳ ಕೈಗೊಳ್ಳುವ ದಿನ. ಕೆಲಸ ಸಂಬಂಧವಾಗಿ ಇಲ್ಲವೆ ಯಾವುದಾದರು ವೈಯಕ್ತಿಕ ವಿಚಾರವಾಗಿ ನೀವು ಪ್ರಯಾಣ ಮಾಡುವಿರಿ. ಹಲವು ವಿಚಾರಗಳಲ್ಲಿ ನಿಮಗೆ ಸುಲಭದ ಹಣ ಒಲಿದು ಬರಲಿದೆ. ತಂದೆ ತಾಯಿಯ ಆರೋಗ್ಯದ ಕುರಿತಾಗಿ ಎಚ್ಚರಿಕೆ ಇರಲಿ.
ಧನು ರಾಶಿ
ಧನು ರಾಶಿಯ ಮಂದಿಗೆ ಈ ದಿನ ಸವಾಲುಗಳು ಎದುರಾಗುವ ದಿನ ಯಾರ ಬಳಿಯಾದರು ಹಣ ಪಡೆದಿದ್ದರೆ ಮರಳಿಸುವುದು ಉತ್ತಮ. ಪ್ರೀತಿ, ದಾಂಪತ್ಯ ವಿಚಾರದಲ್ಲಿ ಸಣ್ಣ ಪುಟ್ಟ ಮನಸ್ತಾಪ ಬರಬಹುದು.
ಮಕರ ರಾಶಿ
ಮಕರ ರಾಶಿವರಿಗೆ ಈ ದಿನವು ಮಿಶ್ರ ಫಲಗಳ ತರುವಂತಹ ದಿನ, ನಿಮ್ಮ ಹಲವು ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು, ಆದರೆ ಅದರಿಂದ ನಿಮಗೆ ತೃಪ್ತಿ ಇಲ್ಲದೆ ಇರಬಹುದು. ಆಹಾರ ಸಂಬಂಧಿ ಖರ್ಚು ಅಧಿಕವಾಗಲಿದೆ. ಮನೆಗಾಗಿ ವಸ್ತುಗಳ ನೀವು ಖರೀದಿಸಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿಗೆ ಈ ದಿನವು ಮಿಶ್ರಫಲದಿಂದ ಕೂಡಿರಲಿದೆ. ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ನೀವು ಪ್ರಯಾಣಕ್ಕೆ ಮುಂದಾಗಬಹುದು. ಹಣಕಾಸಿನ ವಿಚಾರವಾಗಿ ಸಮಸ್ಯೆ ಇರಬಹುದು. ವ್ಯಾಪಾರ ವಿಚಾರದಲ್ಲಿ ಹಣಕಾಸು ಕೈಗೂಡದೆ ಇರಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ದೊಡ್ಡ ಸವಾಲು ಎದುರಾಗಬಹುದು. ಅನಗತ್ಯ ವಿಚಾರವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸುವುದು ಉತ್ತಮ. ಆರ್ಥಿಕ ಸಮಸ್ಯೆಯಲ್ಲಿ ಸುಧಾರಣೆ ಇದ್ದರೂ ಅದು ತಾತ್ಕಾಲಿಕವಾಗಿರಲಿದೆ. ಆರೋಗ್ಯದಲ್ಲಿ ಏರುಪೇರು ಸಂಭವ.



Click it and Unblock the Notifications
