Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 26ರ ಶನಿವಾರದಂದು ಯಾರಿಗಿದೆ ಶುಭಕಾಲ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 26ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳು ಸಮಯದಲ್ಲಿ ಮುಗಿಯಲಿದೆ. ಪ್ರಯಾಣ ಸಂಬಂಧವಾಗಿ ಖರ್ಚು ಇರಲಿದೆ. ವ್ಯವಹಾರ ಸಂಬಂಧವಾಗಿ ನಿಮಗೆ ಬೇರೊಬ್ಬರಿಂದ ಹಣ ನಿಮ್ಮ ಕೈ ಸೇರಬಹುದು. ಮೂಳೆ ಸಂಬಂಧಿ, ಮಧುಮೇಹ ಸಂಬಂಧಿ ಸಮಸ್ಯೆ ಹೊಂದಿರುವವರು ಎಚ್ಚರ ವಹಿಸಬೇಕಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಈ ದಿನ ಶುಭ ಸುದ್ದಿ ಬರುವ ದಿನ. ವಾಹನ ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಶುಭಕಾಲ. ಮನೆಯ ವಿಚಾರದಲ್ಲಿ, ಜಮೀನು ವಿಚಾರವಾಗಿ ನಿಮಗೆ ಧನಾತ್ಮಕ ವಿಚಾರಗಳಿವೆ. ಸಜ್ಜನರ ಸಂಘದಿಂದ ನಿಮಗೆ ಲಾಭದಾಯಕ ದಿನವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಮಿಶ್ರ ಫಲದಿಂದ ತುಂಬಿರಲಿದೆ. ನಿಮ್ಮ ಕೆಲಸ ಸಂಬಂಧ ಒತ್ತಡ ಹೆಚ್ಚಾಗುತ್ತದೆ. ಹಣಕಾಸು ವಿಚಾರವಾಗಿ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಸಭೆ ಸಮಾರಂಭದಲ್ಲಿ ನೀವು ಭಾಗಿಯಾಗಬಹುದು. ಯಾರಿಂದಾದರು ಕೆಲಸದ ಸಂಬಂಧವಾಗಿ ಸಲಹೆ ಪಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನ ಋಣಾತ್ಮಕ ದಿನ. ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿ ನೋಡಬಹುದು. ದೊಡ್ಡ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗದೆ ಇರಬಹುದು. ಪ್ರಯಾಣಗಳು ಕೂಡ ಫಲ ನೀಡುವುದಿಲ್ಲ. ಆರೋಗ್ಯದಲ್ಲಿನ ಏರುಪೇರು ನಿಮ್ಮಲ್ಲಿ ಚಿಂತೆ ಮೂಡಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡುವ ದಿನ. ದಿನದ ಆರಂಭದಲ್ಲಿ ಒತ್ತಡವಿದ್ದರೂ ದಿನದ ಅಂತ್ಯದಲ್ಲಿ ಬಹಳ ಅನುಕೂಲಕರವಾಗಿರಲಿದೆ. ಆದಾಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಶಾಪಿಂಗ್, ಸಿನಿಮಾದಂತಹ ವಿಚಾರದಲ್ಲಿ ಖರ್ಚು ಮಾಡುತ್ತೀರಿ. ದಾಂಪತ್ಯದಲ್ಲಿ ಸಂತಸ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ಖರ್ಚು ಮಾಡುವ ದಿನ. ಬಹುತೇಕ ಸಮಯ ನೀವು ಮನೆಯೊಂದ ಹೊರ ಉಳಿಯುತ್ತೀರಿ. ಆಹಾರ ಸಂಬಂಧವಾಗಿ ಖರ್ಚು ಮಾಡುತ್ತೀರಿ, ಪ್ರುಯಾಣದ ಅಂತ್ಯವು ನಿಮಗೆ ನೆಮ್ಮದಿ ತರಲಿದೆ. ಉದ್ಯೋಗ ಸಂಬಂಧವಾಗು ಶುಭ ಸುದ್ದಿ ಕೇಳುವಿರಿ.
ತುಲಾ ರಾಶಿ
ತುಲಾ ರಾಶೀಯ ಮಂದಿಗೆ ಸಮಸ್ಯೆಗಳು ಕಾಡಬಹುದು. ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮಗೆ ಚಿಂತೆ ಹೆಚ್ಚಿಸಬಹುದು. ವ್ಯಾಪಾರಿಗಳಿಗೆ ಈ ದಿನವು ಲಾಭದಾಯಕವಾಗಬಹುದು. ಯಾರಿಂದಾದರು ಹಣ ಸಾಲವಾಗಿ ಪಡೆದಿದ್ದರೆ ಇಂದು ಮರಳಿ ನೀಡುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ. ಆಸ್ತಿ, ಹಣಕಾಸಿನ ವಿಚಾರವಾಗಿ ಧನಾತ್ಮಕ ಪರಿಣಾಮಗಳ ನೋಡುವಿರಿ, ಗೃಹಿಣಿಯರಲ್ಲಿ ಈ ದಿನ ಖರ್ಚು ಹೆಚ್ಛಾಗುವ ದಿನವಾಗಿದೆ. ಮನೆಯ ಹಿರಿಯ ಸದಸ್ಯರ ಆರೋಗ್ಯದ ಕಡೆಗೆ ಗಮನವಿಡಿ.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಅನುಕೂಲಕರ. ನಿಮ್ಮ ಹಲವು ರೀತಿಯ ವ್ಯವಹಾರಗಳಲ್ಲಿ ದೊಡ್ಡ ಲಾಭ ಇರಲಿದೆ. ಸಂಬಂಧಿಕರ ಕೆಲಸಕ್ಕಾಗಿ ನೀವು ಪ್ರಯಾಣ ಮಾಡುವಿರಿ. ನೀವು ಹಣಕ್ಕಾಗಿ ಮನವಿ ಮಾಡಿದ್ದರೆ ಈ ದಿನ ಅವರಿಂದ ಫಲ ಪಡೆಯಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇಡಿ.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಈ ದಿನ ಅಚ್ಚರಿಯ ವಿಚಾರಗಳ ತರಬಹುದು. ದಿಢೀರ್ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಅಚ್ಚರಿ ಎಂಬಂತೆ ದೊಡ್ಡ ಲಾಭ ನೋಡಬಹುದು. ಅದರಲ್ಲು ಯಾವುದಾದರು ಬಾಕಿ ಉಳಿದಿರುವ ಹಣಕ್ಕಾಗಿ ನೀವು ಪ್ರಯತ್ನಿಸುತ್ತಿದ್ದರೆ ಅದರಿಂದ ಲಾಭವಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಸಾಮಾನ್ಯವಾಗಿರಲಿದೆ. ನಿಮ್ಮ ವ್ಯಾಪಾರದಲ್ಲಿ ಎಂದಿನ ಸ್ಥಿತಿ ಇರಲಿದೆ. ತಂದೆ ತಾಯಿಯ ಆರೋಗ್ಯದ ಕಡೆಗೆ ಗಮನವಿಡಿ. ದೊಡ್ಡ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೀವು ಪ್ರಯಾಣಿಸಬೇಕಾಗಬಹುದು. ಆಪ್ತರ ಜೊತೆ ದೇವಾಲಯ ಭೇಟಿಯ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲದ ದಿನ. ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸದಿದ್ದರೆ ಮುಂದೆ ಸಮಸ್ಯೆ ಆಗಬಹುದು. ಪ್ರಯಾಣಗಳು ಸುಖಕರವಾಗಿರಲಿದೆ. ಈ ದಿನ ಹೊರಗಿನ ಊಟ ತಿಂಡಿಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವ.



Click it and Unblock the Notifications