Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
Dina Bhavishya: ಜುಲೈ 25ರ ಶುಕ್ರವಾರ ಇವರಿಗಿದೆ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 25ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಸಮಸ್ಯೆಗಳು ಎದುರಾಗುವ ದಿನ. ನಿಮಗೆ ಹಣಕಾಸು ವಿಚಾರದಲ್ಲಿ ಬಹಳ ಒತ್ತಡ ಎದುರಾಗಲಿದೆ. ಹಳೆಯ ತಪ್ಪುಗಳನ್ನು ಮತ್ತೆ ಮಾಡಲು ಮುಂದಾಗಬೇಡಿ. ಅನೇಕ ಕೆಲಸಗಳಲ್ಲಿ ಹಿನ್ನಡೆ ಅನುಭವಿಸಬಹುದು. ಪ್ರಯಾಣ ಮಾಡಬೇಕಾಗಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ಮಿಶ್ರ ಫಲ ಅನುಭವಿಸುತ್ತೀರಿ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ನಿಮ್ಮ ವ್ಯಾಪಾರ ಸಂಬಂಧ ಹಲವು ವಿಚಾರಗಳಲ್ಲಿ ನೀವು ಪ್ರಯಾಣಿಸಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಗೆ ಈ ದಿನ ಬಹಳ ಅನುಕೂಲಕ ಇರಲಿದೆ. ನಿಮ್ಮ ದಾಂಪತ್ಯ ವಿಚಾರದಲ್ಲಿ ಇದ್ದ ಮನಸ್ತಾಪ ದೂರಾಗಲಿದೆ. ಆಸ್ತಿ ವಿಚಾರವಾಗಿ ನೀವು ಹಿರಿಯರೊಬ್ಬರ ಜೊತೆಗೆ ಮಾತುಕತೆಗೆ ಮುಂದಾಗಬಹುದು. ಸರ್ಕಾರಿ ನೌಕರರು ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಆಪ್ತರೊಬ್ಬರ ಸಹಕಾರ ಇರಲಿದೆ. ವ್ಯಾಪಾರಿಗಳಿಗೆ ಬಹಳ ಉತ್ತಮ ದಿನ. ಯಂತ್ರೋಪಕರಣ ವ್ಯಾಪಾರಿಗಳು, ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರವಾಗಿ ಚಿಂತೆ ಕಾಡಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ ದಿನ. ನಿಮ್ಮ ಪ್ರೀತಿ, ದಾಂಪತ್ಯದ ವಿಚಾರವಾಗಿ ಇಂದು ನೀವು ಅಂದುಕೊಂಡಂತೆ ನಡೆಯಲಿದೆ. ವ್ಯವಹಾರ ಸಂಬಂಧ ತಾಳ್ಮೆ ಕಳೆದುಕೊಳ್ಳಬೇಡಿ. ಹಿರಿಯರ ಆರೋಗ್ಯ ಕುರಿತು ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೆಲಸ ಸಂಬಂಧ ಓಡಾಟ ಮಾಡಬಹುದು. ನಿಮ್ಮ ದೊಡ್ಡ ಕೆಲಸಗಳಲ್ಲಿ ಹಿರಿಯರ ಅಥವಾ ಕುಟುಂಬಸ್ಥರ ಸಹಕಾರ ಪಡೆಯಲಿದ್ದೀರಿ. ವಾಹನ ಸಂಬಂಧ ಖರ್ಚು ಮಾಡಬೇಕಾಗುತ್ತದೆ. ಯಾರ ಬಳಿಯಾದರು ಸಾಲ ಮಾಡಿದ್ದರು ವಾಪಾಸು ನೀಡಲು ಇಂದು ಉತ್ತಮ ಸಮಯ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಇಂದು ಸವಾಲಿನ ದಿನ. ನಿರುದ್ಯೋಗಿಗಳಲ್ಲಿ ಒತ್ತಡ ಹೆಚ್ಚಾಗುವ ದಿನ. ಆಪ್ತರೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವು ಸಮಸ್ಯೆ ತಂದುಕೊಳ್ಳಬಹುದು. ಪಂಚೇಂದ್ರಿಯ ಸಂಬಂಧಿ ಅನಾರೋಗ್ಯ ಕಾಡಬಹುದು.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಔದ್ಯೋಗಿಕ ಲಾಭವಿದೆ. ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಕೆಲಸಗಾರರು ಕೂಡ ಈ ದಿನ ಹೆಚ್ಚು ಶ್ರಮ ಹಾಕುತ್ತೀರಿ. ಇದರಿಂದ ಲಾಭ ಹೆಚ್ಚಾಗಲಿದೆ. ನೀವು ಕೆಲಸದ ಸಂಬಂಧ ಮಾಡುವ ಪ್ರಯಾಣವು ಫಲಪ್ರದವಾಗಿರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿಯವರ ಸಾರಿಗೆ ವೆಚ್ಚ ಹೆಚ್ಚಾಗಬಹುದು. ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳ ಸಂಬಂಧ ಖರ್ಚು ಮಾಡಬೇಕಾಗಬಹುದು. ನಿತ್ಯದ ಕೆಲಸದಲ್ಲಿ ಹೆಚ್ಚು ಶ್ರಮ ಹಾಕಬೇಕಿದೆ. ಭವಿಷ್ಯದ ವಿಚಾರವಾಗಿ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮಿಂದಾಗಿ ಇತರರಲ್ಲಿ ಸಂತಸ ಮೂಡಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕ ಇರಲಿದೆ. ನಿಮ್ಮ ಹಣಕಾಸು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಪ್ರಯಾಣಗಳಲ್ಲಿ ಯಶಸ್ಸು ಸಿಗಲಿದೆ, ಬಹಳ ಸಮಯದಿಂದ ನಿಮಗೆ ಸಿಗಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಆರೋಗ್ಯ ಸುಧಾರಿಸಲಿದೆ.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಲ್ಲಿ ಸವಾಲಿನ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಚಿಂತೆ ಇರಬಹುದು. ಚಿನ್ನ ಬೆಳ್ಳಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಮನೆಗಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ಉದ್ಯೋಗ ಹುಡುಕುತ್ತಿದ್ದರೆ ಶ್ರಮ ಹಾಕಬೇಕಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನವು ಮಿಶ್ರ ಫಲದಿಂದ ತುಂಬಿರಲಿದೆ. ನಿಮ್ಮ ಪ್ರಯಾಣಗಳಲ್ಲಿ ಬಯಸಿದ್ದ ಫಲಿತಾಂಶ ಸಿಗದೆ ಇರಬಹುದು. ಆರೋಗ್ಯದಲ್ಲಿ ಏರುಪೇರು ಕಾಡಲಿದೆ. ನೀವು ಅಂದುಕೊಂಡಿದ್ದ ಕೆಲಸದಲ್ಲಿ ಹಿನ್ನಡೆ ಅನುಭವಿಸುತ್ತೀರಿ, ಬೀದಿ ಬದಿಯ ವ್ಯಾಪಾರಿಗಳಲ್ಲಿ ಹಣಕಾಸು ಸಮಸ್ಯೆ ಬರಬಹುದು.



Click it and Unblock the Notifications











