Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
Dina Bhavishya: ಜುಲೈ 24ರ ಗುರುವಾರ ಯಾರ ಮೇಲಿದೆ ಗುರುವಿನ ಕೃಪೆ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 24ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಆಪ್ತರ ಸಹಕಾರ ನೋಡಬಹುದು. ಹಣಕಾಸು ವಿಚಾರವಾಗಿ ಎದುರಾದ ಸಮಸ್ಯೆಗಳು ಪರಿಹಾರ ಆಗಲಿದೆ. ಸಮಯಕ್ಕೆ ತಕ್ಕಂತೆ ನಿಮ್ಮ ಕೆಲಸಗಳು ಕೂಡ ಮುಗಿಯಲಿವೆ. ಪ್ರಯಾಣಗಳಲ್ಲಿ ಎಚ್ಚರಿಕೆ ಇಡಿ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರ. ನಿಮ್ಮ ಪ್ರೀತಿಯ ವಿಚಾರವಾಗಿ ಧನಾತ್ಮಕ ವಿಚಾರಗಳು ನಡೆಯಲಿವೆ. ಗೃಹಿಣಿಯರಿಗೆ ಈ ದಿನ ಬಹಳ ಲಾಭದಾಯಕ, ನಿಮ್ಮ ಬಹಳ ಸಮಯದ ಬೇಡಿಕೆಯೊಂದು ಈಡೇರಬಹುದು. ಆರೋಗ್ಯದಲ್ಲಿ ಸಣ್ಣಪುಟ್ಟ ಸವಾಲು ಇರಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಲಾಭದಾಯಕ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸವಾಲುಗಳಿರುವುದಿಲ್ಲ. ವ್ಯಾಪಾರಿ ವರ್ಗಕ್ಕೆ ಶುಭ ಸುದ್ದಿ ಇದೆ. ನಿಮ್ಮಲ್ಲಿದ್ದ ಆತಂಕವೊಂದು ದೂರಾಗಲಿದೆ. ಮಾನಸಿಕ ಪ್ರಗತಿಗೆ ಬೇಕಿದ್ದ ವಿಚಾರವೊಂದು ನಡೆಯಲಿದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿವೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನ ಅನುಕೂಲಕರವಾಗಿದೆ. ನಿಮ್ಮ ಅನೇಕ ಹೂಡಿಕೆಗಳು, ಉಳಿತಾಯದಲ್ಲಿ ಹೆಚ್ಚಳ ಗಮನಿಸಬಹುದು. ಪತಿ-ಪತ್ನಿ ಸಂಬಂಧದಲ್ಲಿ ಸಂತಸ ಇರಲಿದೆ. ಪ್ರವಾಸ ತೆರಳುವ ಕುರಿತಾದ ತಯಾರಿಯಲ್ಲಿ ನೀವು ತೊಡಗಬಹುದು.
ಸಿಂಹ ರಾಶಿ
ಈ ರಾಶಿಯ ಗೃಹಿಣಿಯರಿಗೆ ಈ ದಿನವು ಬಹಳ ಅದ್ಭುತವಾಗಿರಲಿದೆ, ನೀವು ಬಯಸಿದ್ದ ವಸ್ತು ಅಥವಾ ಕನಸೊಂದನ್ನು ಈಡೇರಿಸಿಕೊಳ್ಳಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಬಹುದು. ಸರ್ಕಾರಿ ನೌಕರರಿಗೆ ಇದು ಬಹಳ ಉತ್ತಮ ದಿನ. ಯಾವುದೇ ಸವಾಲನ್ನು ನೀವು ಎದುರಿಸಿ. ಹಣಕಾಸು ವಿಚಾರವಾಗಿಯೂ ನಿಮಗೆ ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಈ ದಿನವು ಮಿಶ್ರ ಫಲ ತರುವ ದಿನ. ನಿಮ್ಮ ಕೆಲಸಗಳಿಗೆ ಅನಾರೋಗ್ಯ ಸಮಸ್ಯೆಯೊಂದು ಅಡ್ಡಿಯಾಗಬಹುದು. ಏಕಾಂತ ಕಾಡಬಹುದು. ಕುಟುಂಬದಲ್ಲಿ ಹಣಕಾಸು ವಿಚಾರವಾಗಿ ಕಲಹಗಳು ಇರಬಹುದು. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ.
ತುಲಾ ರಾಶಿ
ತುಲಾ ರಾಶಿಯ ಮಂದಿಗೂ ಈ ಸಮಯದಲ್ಲಿ ಬಹಳ ಸಮಸ್ಯೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಇರಲಿದೆ. ಸಾಲ ಮರುಪಾವತಿಗೆ ಒತ್ತಡ ಬರಬಹುದು. ಹಳೆಯ ವಸ್ತುಗಳ ಕಡೆಗೆ ಗಮನವಿಡಿ. ಮಕ್ಕಳ ಕುರಿತಾದ ಚಿಂತೆ ಸಹ ಕಾಡಬಹುದು.
ವೃಶ್ಚಿಕ ರಾಶಿ
ನಿಮಗಿಂದು ಮಿಶ್ರ ಫಲದ ದಿನ. ಯಾವುದೇ ಕೆಲಸವನ್ನಾದರು ತರಾತುರಿಯಲ್ಲಿ ಇಲ್ಲವೆ, ಗಡಿ ಬಿಡಿಯಿಂದ ಮಾಡಲು ಮುಂದಾಗಬೇಡಿ. ಸಮಸ್ಯೆಗಳ ಎದುರಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ಮನಸ್ತಾಪ ಬರುವಂತಹ ಘಟನೆಗಳು ನಡೆಯಬಹುದು.
ಧನು ರಾಶಿ
ಧನು ರಾಶಿಯ ಮಂದಿಗೆ ಈ ದಿನವು ಅತ್ಯಂತ ಶುಭಕರವಾಗಿರಲಿದೆ. ಬಹಳ ದಿನಗಳಿಂದ ನಿಮ್ಮ ಕೆಲಸಕ್ಕೆ ನೀವು ಓಡಾಡುತ್ತಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಛಾಗಬಹುದು. ಆಪ್ತರೊಬ್ಬರ ಭೇಟಿ ಸಾಧ್ಯತೆ ಇದೆ. ಪ್ರಯಾಣ ಮಾಡುತ್ತೀರಿ.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಈ ದಿನ ಉತ್ತಮ ದಿನವಲ್ಲ, ಹಣಕಾಸು ವ್ಯವಹಾರವು ನಿಮಗೆ ಒತ್ತಡ ತರಬಹುದು. ಅಗತ್ಯ ಕೆಲಸಕ್ಕೆ ನಿಮಗೆ ಹಣಕಾಸಿನ ಕೊರತೆ ಕಾಡಬಹುದು. ವಾಹನ ಸಂಬಂಧಿ ಸಮಸ್ಯೆಗಳು ಬರಬಹುದು. ಕುಟುಂಬದಲ್ಲಿ ನಿಮ್ಮ ಮೇಲೆ ಹಲವು ರೀತಿಯಾದ ಒತ್ತಡ ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಅಂದುಕೊಂಡಿದ್ದ ಕೆಲಸ ಕೈಗೂಡದ ಕಾರಣ ನಿಮ್ಮಲ್ಲಿ ಅಶಾಂತಿ ಮೂಡಬಹುದು. ಹಣಕಾಸಿನ ವ್ಯವಹಾರವಾಗಿ ಚಿಂತೆ ಮಾಡಬೇಕಾಗುತ್ತದೆ. ದಿನದ ಅಂತ್ಯದಲ್ಲಿ ನಿಮಗೆ ಶುಭ ಸುದ್ದಿ ಬರಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ ಆಗಿರಲಿದೆ. ಬಹಳ ದಿನದಿಂದ ಅನುಭವಿಸಿದ್ದ ಹಣಕಾಸಿನ ಸಮಸ್ಯೆ ನಿವಾರಣೆಯಾಗಬಹುದು. ಪ್ರಯಾಣದಲ್ಲಿ ನೀವು ಬಯಸಿದ ಲಾಭವಿದೆ. ವಾಹನ ಲಾಭವಿದೆ. ಸ್ವಂತ ಉದ್ಯೋಗ ಮಾಡುವವರಿಗೆ ದಿಢೀರ್ ಪ್ರಗತಿ ನೋಡಬಹುದು.



Click it and Unblock the Notifications











