Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 23ರ ಬುಧವಾರ ಯಾರಿಗೆ ಧನ ಪ್ರಾಪ್ತಿ?
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಅನುಕೂಲಕರ ದಿನವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ದಿನವಾಗಿರಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ವಿವಾಹ ಸಂಬಂಧಿ ವಿಚಾರಗಳ ಚರ್ಚೆಯಲ್ಲಿ ನೀವು ತೊಡಗಬಹುದು. ಸಹೋದರರೊಂದಿಗಿನ ಬಾಂಧವ್ಯ ಹೆಚ್ಚಾಗುವಂತಹ ಕೆಲಸ ಮಾಡುವಿರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಮಿಶ್ರಫಲ. ಈ ದಿನ ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ಆತಂಕಗಳು ಬರಬಹುದು. ಅದ್ರಲ್ಲೂ ಹಣಕಾಸು ಸಂಬಂಧವಾಗಿ ನೀವು ಬಹಳ ಕಷ್ಟದ ಅಥವಾ ಸವಾಲಿನ ದಿನ ನೋಡಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನವು ಸಾಮಾನ್ಯವಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಹೊಸ ವಸ್ತುಗಳ ಖರೀದಿ ಸಂಬಂಧವಾಗಿ ನೀವು ಹಣ ಒಟ್ಟುಗೂಡಿಸಲು ಮುಂದಾಗಬಹುದು. ಆಪ್ತರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಗೃಹಿಣಿಯರಲ್ಲಿ ಇಂದು ಶ್ರಮದಾಯಕ ದಿನ, ನೀವು ಓಟಾಡದಲ್ಲಿ ಕಳೆಯಬೇಕಾಗಬಹುದು. ಪ್ರಯಾಣಗಳ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಕುಟುಂಬದಲ್ಲಿ ಹಣಕಾಸು ಕುರಿತಾದ ಒತ್ತಡ ಇರಬಹುದು. ಕಚೇರಿ ವಿಚಾರವಾಗಿ ನಿಮ್ಮ ಮೇಲೆ ಆರೋಪಗಳು ಬರಬಹುದು. ತಾಳ್ಮೆಯಿಂದ ಕೆಲಸಗಳಲ್ಲಿ ಭಾಗಿಯಾಗಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಇಂದು ಅನುಕೂಲಕರ ದಿನ. ಪ್ರೀತಿ, ದಾಂಪತ್ಯ ವಿಚಾರವಾಗಿ ಧನಾತ್ಮಕ ದಿನವಾಗಿರಲಿದೆ. ಉದ್ಯೋಗ ಬದಲಾವಣೆಗೆ ಸೂಕ್ತ ದಿನ, ಮೇಲಧಿಕಾರಿಗಳಿಂದ ಪ್ರಶಂಸೆ ಇರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಶುಭ ಕಾರ್ಯ ಸಂಬಂಧ ನೀವು ತಯಾರಿಯಲ್ಲಿ ತೊಡಗಬಹುದು. ಅನಗ್ಯ ಚರ್ಚೆಗಳಿಂದ ದೂರ ಇರುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಶ್ರಮದಾಯಕ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ದೊಡ್ಡ ಸವಾಲು ಎದುರಿಸಬಹುದು. ವ್ಯಾಪಾರಿಗಳು ಬೇರೊಂದು ವಿಚಾರದಲ್ಲಿ ಪ್ರಯಾಣ ಮಾಡಬೇಾಗಿ ಬರಬಹುದು. ನಿತ್ಯದ ಕೆಲಸಗಳು ನಿಧಾನವಾಗಲಿದೆ. ಮನೆಯ ವಾತಾವರಣ ಹಾಳಾಗುವ ವಿಚಾರಗಳು ನಡೆಯಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನವು ಅತ್ಯಂತ ಶುಭಕರಾಗಿರಲಿದೆ. ನವವಾಹಿತರಲ್ಲಿ ಶುಭ ಸುದ್ದಿಯ ಕೇಳಬಹುದು. ನೀವು ಅಂದುಕೊಂಡ ಕೆಲಸ ಮಾಡಿ ಮುಗಿಸಬಹುದು. ಪ್ರಯಾಣಿಸಬೇಕಾಗಬಹುದು. ಸಂಜೆ ವೇಳೆ ಖರ್ಚು ಹೆಚ್ಚಾಗಬಹುದು. ಆರೋಗ್ಯದ ಕಡೆಗೂ ಗಮನವಿಡಬೇಕಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಮಿಶ್ರ ದಿನ. ನಿಮ್ಮ ಅನಾರೋಗ್ಯ ಸಂಬಂಧವಾಗಿ ಕೆಲಸ ಕಾರ್ಯಗಳಲ್ಲಿ ಅಡ್ಡಿ ಎದುರಾಗಬಹುದು. ನಿಮ್ಮ ಮನೆಯಲ್ಲಿ ವಿವಾಹ ಸಂಬಂಧ ಅಥವಾ ಯಾವುದಾದರು ಶುಭ ಕಾರ್ಯ ಸಂಬಂಧವಾಗಿ ಮಾತುಕತೆ ನಡೆಯಬಹುದು. ಬಹಳ ಸಮಯದಿಂದ ನಿಮ್ಮ ಕೈ ಸೇರದ ಬಾಕಿ ಉಳಿದ ಹಣ ನಿಮಗೆ ಸಿಗಬಹುದು.
ಧನು ರಾಶಿ
ಧನು ರಾಶಿಯ ಮಂದಿಗೆ ಈ ದಿನವು ಅನುಕೂಲಕರ ಸಮಯವಾಗಿರಲಿದೆ. ನಿಮ್ಮ ಹಲವು ಕೆಲಸಗಳು ಈ ಸಮಯದಲ್ಲಿ ಯಶಸ್ವಿಯ ಹಾದಿ ತುಳಿಯಲಿದೆ. ನಿಮ್ಮ ಆಪತ್ತಿನ ಕಾಲಕ್ಕಾಗಿ ಇಟ್ಟಿರುವ ಹಣವನ್ನು ನೀವು ಬೇರೊಂದು ಕೆಲಸಕ್ಕೆ ಬಳಸಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಅನುಕೂಲಕರ ದಿನ ನೋಡಬಹುದು. ನಿಮ್ಮ ಹಲವಾರು ಕೆಲಸಗಳಲ್ಲಿ ಅಡ್ಡಿಗಳು ಎದುರಾಗಬಹುದು. ಸಾಮಾನ್ಯ ಕೆಲಸಗಳು ಕೂಡ ವಿಶೇಷ ರೀತಿಯಲ್ಲಿ ಮುಗಿಯಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯ ಏರುಪೇರು ಸಂಭವವಿದೆ.
ಕುಂಭ ರಾಶಿ
ಇಂದು ನಿಮ್ಮ ಕೆಲಸದಲ್ಲಿ ದೊಡ್ಡ ಲಾಭದಾಯಕ ದಿನ. ಕುಟುಂಬದಲ್ಲಿ ನಿಮ್ಮ ಹಣಕಾಸು ಸವಾಲುಗಳ ಕುರಿತಾಗಿ ಮಾತುಕತೆ ನಡೆಯಬಹುದು. ದೂರ ಪ್ರಯಾಣಗಳಿಗೆ ತಯಾರಿ ನಡೆಸುತ್ತೀರಿ. ಸವಾಲುಗಳ ಎದುರಿಸಲು ನೀವು ಸಿದ್ದರಾಗಬೇಕಿದೆ. ನಿಮಗಾಗಿ ಶುಭ ಸುದ್ದಿ ಇರಲಿದೆ.
ಮೀನ ರಾಶಿ
ಮೀನ ರಾಶಿಯ ಮಂದಿ ದೂರದ ಪ್ರಯಾಣಗಳಿಗೆ ತಯಾರಿ ನಡೆಸುತ್ತೀರಿ. ಪ್ರೀತಿಯ ವಿಚಾರದಲ್ಲಿ ಬಹಳ ಅನುಕೂಲಕರ ದಿನ. ಹಣ ಖರ್ಚು ಮಾಡುವ ದಿನ. ಕೆಲಸಗಳಲ್ಲಿ ಉತ್ತಮ ಲಾಭವಿದೆ. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸುವುದು ಸೂಕ್ತ.



Click it and Unblock the Notifications




