Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
Dina Bhavishya: ಜುಲೈ 22ರ ಮಂಗಳವಾರ ಯಾರಿಗೆಲ್ಲಾ ಮಂಗಳಕರ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 22ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಸಮಸ್ಯೆಗಳಿಂದ ತುಂಬಿದ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ಆತಂಕಗಳಿರಲಿದೆ. ದೈನಂದಿನ ಕೆಲಸಗಳಲ್ಲಿ ಹಣಕಾಸು ವಿಚಾರವಾಗಿ ಸಮಸ್ಯೆಗಳು ಎದುರಾಗಬಹುದು. ಬಹಳ ದಿನದಿಂದ ಮಾಡಬೇಕಿದ್ದ ಕೆಲಸದಲ್ಲಿ ದೊಡ್ಡ ಅಡಚಣೆ ಎದುರಾಗಬಹುದು. ನಿಮ್ಮ ಪ್ರಾಮಾಣಿಕತೆಯನ್ನು ಯಾರಾದರು ಪ್ರಶ್ನಿಸಬಹುದು.
ವೃಷಭ ರಾಶಿ
ಇಂದು ನಿಮ್ಮ ಕೆಲಸದಲ್ಲಿ ದೊಡ್ಡ ಲಾಭದಾಯಕ ದಿನ. ಸವಾಲುಗಳ ಎದುರಿಸಲು ನೀವು ಸಿದ್ದರಾಗಬೇಕಿದೆ. ಕುಟುಂಬದಲ್ಲಿ ನಿಮ್ಮ ಹಣಕಾಸು ಸವಾಲುಗಳ ಕುರಿತಾಗಿ ಮಾತುಕತೆ ನಡೆಯಬಹುದು. ದೂರ ಪ್ರಯಾಣಗಳಿಗೆ ತಯಾರಿ ನಡೆಸುತ್ತೀರಿ. ದಾಂಪತ್ಯದಲ್ಲಿ ಉತ್ತಮ ದಿನ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಶ್ರಮ ಹಾಕುತ್ತೀರಿ. ಆದ್ರೆ ಪ್ರತಿಫಲದಲ್ಲಿ ತೃಪ್ತಿ ಇರುವುದಿಲ್ಲ. ಪ್ರಯಾಣಗಳಲ್ಲಿ ದೊಡ್ಡ ಲಾಭವಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಇಂದು ಕಷ್ಟದ ದಿನ ಎನ್ನಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ. ನಿಮ್ಮ ಮನೆಯ ವಿಚಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತೀರಿ. ಪ್ರಯಾಣಗಳಲ್ಲಿ ಸವಾಲುಗಳು ಎದುರಾಗಬಹುದು. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನ. ಬ್ಯಾಂಕಿಂಗ್ ವಿಚಾರದಲ್ಲಿ ಉತ್ತಮ ದಿನ. ನಿಮಗೆ ಯಾರಿಂದಾದರು ಹಣ ಬರಬೇಕಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನ ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸುಖಕರವಾಗಿರಲಿದೆ. ಹಣಕಾಸು ವಿಚಾರವಾಗಿಯೂ ನಿಮಗೆ ಉತ್ತಮ ದಿನವಾಗಿರಲಿದೆ. ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲ ಇರಲಿದೆ. ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡಬೇಕಾಗಬಹುದು. ಸಮಸ್ಯೆಯಿಂದ ಹೊರಬರಲು ಹಣ ಖರ್ಚು ಮಾಡಬೇಕಾಗಿ ಬರಬಹುದು. ನಿಮ್ಮ ಉದ್ಯೋಗ ಸಂಬಂಧಿ ಕಷ್ಟಗಳು ನಿವಾರಣೆಯಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ದಿನ ಉತ್ತಮ ಪ್ರತಿಫಲ ಪಡೆಯುವ ದಿನ. ಬಹಳ ದಿನದಿಂದ ಬಯಸಿದ್ದ ವಸ್ತು ಪಡೆಯಬಹುದು, ಹಾಗೆ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಅನ್ಯರ ಮಾತಿನಂತೆ ನಿಮ್ಮ ನಿರ್ಧಾರಗಳ ಬದಲಾಯಿಸಲು ಮುಂದಾಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಅನಗತ್ಯ ಖರ್ಚು ಮಾಡುತ್ತೀರಿ. ಅದರ ಪ್ರತಿಫಲ ನಿಮಗೆ ತೃಪ್ತಿ ತರುವುದಿಲ್ಲ. ಬೀದಿ ಬದಿಯ ವ್ಯಾಪಾರಿಗಳಿಗೆ, ಹೋಟೆಲ್ ಉದ್ಯಮಿಗಳಿಗೆ ಬಹಳ ಶುಭಕರ ದಿನ. ಹಣಕಾಸು ಕುರಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಕುಟುಂಬಸ್ಥರ ಜೊತೆಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ.
ಧನು ರಾಶಿ
ಧನು ರಾಶಿಯ ಮಂದಿ ಈ ದಿನದಂದು ಆಪ್ತರ ಮನೆಗೆ ತೆರಳಬಹುದು. ನಿಮ್ಮ ಮಕ್ಕಳ ಕುರಿತಾಗಿ ಇದ್ದ ಚಿಂತೆ ದೊಡ್ಡದಾಗಬಹುದು. ಗೃಹಿಣಿಯರಲ್ಲಿ ಈ ದಿನ ಅನಾರೋಗ್ಯ ಕಾಡಬಹುದು. ಮನೆಯ ನವೀಕರಣ ಸಂಬಂಧ ಚರ್ಚೆ ನಡೆಯಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆ ವಹಿಸಿ.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಅನಾರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಹೊಂದಿರುವ ಮಂದಿ ದಿನ ಸವಾಲುಗಳ ಎದುರಿಸಬಹುದು. ಪ್ರಯಾಣಿಕರಲ್ಲಿ ಖರ್ಚು ಹಾಗೂ ಆಯಾಸ ಕಾಡಬಹುದು. ಸ್ವಂತ ಉದ್ಯೋಗ ಮಾಡುತ್ತಿದ್ದವರಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿಗೆ ಈ ದಿನ ಅನುಕೂಲಕರ. ಗೃಹಿಣಿಯರ ಆದಾಯ ಹೆಚ್ಚಾಗಬಹುದು. ಮನೆ ಸಂಬಂಧವಾಗಿ ಅಡ್ಡಿ ಆತಂಕಗಳು ದೂರಾಗಹುದು. ಮೂಳೆ ಸಂಬಂಧಿತ ಸಮಸ್ಯೆಗಳಿಂದ ನೀವು ಬಳಲಿದ್ದರೆ ಪರಿಹಾರ ಪಡೆಯಬಹುದು. ಪ್ರಯಾಣಗಳಲ್ಲಿ ಶುಭ ಫಲವಿದೆ.
ಮೀನ ರಾಶಿ
ಮೀನ ರಾಶಿಯವರು ಈ ದಿನ ತಾಳ್ಮೆಯಿಂದ ಎಂತಹ ಪರಿಸ್ಥಿತಿಯನ್ನಾದರು ಎದುರಿಸಿ. ಯಾವುದೇ ಕಾರಣಕ್ಕೂ ದೊಡ್ಡ ಸವಾಲುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಸಂಬಂಧಗಳಲ್ಲಿ ಕಲಹಗಳನ್ನು ತಪ್ಪಿಸುವುದು ಉತ್ತಮ. ಪ್ರಯಾಣಗಳಲ್ಲಿ ನಿಮಗೆ ಶುಭವಾಗುವ ನಿರೀಕ್ಷೆ ಇದೆ.



Click it and Unblock the Notifications











