Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 21ರ ಸೋಮವಾರ ಯಾರಿಗೆ ಅನುಕೂಲಕರ ದಿನ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 21ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನವು ಮಿಶ್ರಫಲದಿಂದ ಕೂಡಿರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಶುಭ ತರುವ ದಿನ. ಅನೇಕ ಕೆಲಸಗಳು ನಿಮ್ಮ ಬಯಕೆಯಂತೆ ಈಡರಲಿದೆ. ಪ್ರವಾಸಗಳ ತೆರಳುವ ತಯಾರಿ ನಡೆಸುತ್ತೀರಿ. ಬಹಳ ಸಮಯದ ಬಳಿಕ ಆಪ್ತರೊಬ್ಬರ ಭೇಟಿಯಾಗುವ ಅವಕಾಶ ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿ, ಆರೋಗ್ಯ ಸುಧಾರಣೆ ಇದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ದೊಡ್ಡ ಕೆಲಗಳಗಳಲ್ಲಿ, ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ವಾಹನ ಸಂಬಂಧಿ ಖರ್ಚು ಇರಲಿದೆ. ಮನೆಯಲ್ಲಿನ ಕೆಲಸಗಳು ಹೆಚ್ಚಾಗಲಿವೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನ ಬಹಳ ಉತ್ತಮವಾಗಿರಲಿದೆ. ನಿಮ್ಮ ಅನೇಕ ಕೆಲಸಗಳು ನೀವು ಅಂದುಕೊಂಡಂೆ ನಡೆಯಲಿದೆ. ದೂರ ಪ್ರಯಾಣಗಳಲ್ಲಿ ನೀವು ಭಾಗಿಯಾಗುತ್ತೀರಿ. ಆಪ್ತರೊಬ್ಬರಿಂದ ನಿಮ್ಮ ಕೆಲಸದಲ್ಲಿ ಸಹಕಾರ ಇರಲಿದೆ. ದೇವಾಲಯ ಭೇಟಿ ಸಂಭವವಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಇಂದು ಖರ್ಚಿನ ದಿನ. ನೀವು ಅಗತ್ಯ ಹಾಗೂ ಅನಗತ್ಯ ವಸ್ತಗಳಿಗೆ ಖರ್ಚು ಮಾಡಬಹುದು. ಕುಟುಂಬಸ್ಥರಿಂದ ಹಣಕಾಸು ವಿಚಾರವಾಗಿ ನಿಮಗೆ ಒತ್ತಡ ಇರಬಹುದು. ಬಹಳ ಸಮಯದ ಬಳಿಕ ನಿಮಗೆ ಬೇಕಿದ್ದ ವಸ್ತು ಖರೀದಿಸಬಹುದು. ಆನ್‌ಲೈನ್ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವಾಗಿಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿವೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬೇರೆಯವರಿಂದ ಪಡೆದಿರುವ ವಸ್ತುವನ್ನು ಹಿಂತಿರುಗಿಸುವುದು ಒಳಿತು. ನಿರುದ್ಯೋಗಿಗಳು ಅವಕಾಶಗಳ ಪಡೆಯಬಹುದು. ವಾಹನ ಸವಾರರು ಎಚ್ಚರಿಕೆ ವಹಿಸಬಕಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಅನುಕೂಲ. ನಿಮ್ಮ ಬಹಳ ದಿನಗಳ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ. ಮಕ್ಕಳ ಭವಿಷ್ಯ ಕುರಿತ ಚಿಂತೆಯೊಂದು ಪರಿಹಾರ ನಿವಾರಣೆಯಾಗಬಹುದು. ವಾಹನ ಸಂಬಂಧವಾಗಿ ಇಲ್ಲವೆ ಮನೆ ವಿವಾರವಾಗಿ ಖರ್ಚು ಮಾಡುತ್ತೀರಿ. ದಾಂಪತ್ಯ ವಿಚಾರವಾಗಿ ಚಿಕ್ಕ ಮುನಿಸು ಕಾಡಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ದಿನ ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರುತ್ತಾರೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪುರಸ್ಕಾರ ಸಿಗಲಿದೆ. ಸರಳ ಸಮಸ್ಯೆಗಳನ್ನು ದೊಡ್ಡದಾಗಲು ಬಿಡಬೇಡಿ. ಸ್ವಂತ ಉದ್ಯೋಗಿಗಳಿಗೆ ಉತ್ತಮ ದಿನ. ಪ್ರಯಾಣಗಳಲ್ಲಿ ಎಚ್ಚರಿಕೆ ವಹಿಸಿ.
ವೃಶ್ಚಿಕ ರಾಶಿ
ಇಂದು ನೀವು ಕಷ್ಟಕರ ದಿನವಾಗಿ ನೋಡಬಹುದು. ನಿಮ್ಮ ಅನೇಕ ಆರ್ಥಿಕ ವಿಚಾರಗಳಲ್ಲಿ ಒತ್ತಡ ಎದುರಾಗಬಹುದು. ಪ್ರಯಾಣಗಳಲ್ಲಿ ಶುಭಕರ ಲಾಭವಿದೆ. ಹಳೆಯ ಸಾಲ ಮತ್ತೆ ಹೆಚ್ಚಾಗಬಹುದು. ವೃತ್ತಿ ಸಂಬಂಧಿತ ಒತ್ತಡ ಹೆಚ್ಚಾಗುವ ದಿನ. ಹಣವನ್ನು ಖರ್ಚು ಮಾಡುವಾಗ ಆಲೋಚಿಸಬೇಕಿದೆ.
ಧನು ರಾಶಿ
ಧನು ರಾಶಿಯವರಿಗೆ ಮಿಶ್ರ ಫಲದ ದಿನ. ಪ್ರಯಾಣಗಳಲ್ಲಿ ನೀವು ತೊಡಗಬೇಕಾಗುತ್ತದೆ. ಶಾಪಿಂಗ್, ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಸಾಲ ಮರುಪಾವತಿಗೆ ಉತ್ತಮ ಸಮಯ. ವ್ಯಾಪಾರಿಗಳಿಗೆ ಆದಾಯದಷ್ಟೇ ಖರ್ಚು ಇರಲಿದೆ. ನಿಮ್ಮ ಸರ್ಕಾರಿ ದಾಖಲಾತಿ, ಕೆಲಸಗಳ ಸಂಬಂಧ ಓಡಾಟಗಳು ಇರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಬಹಳ ಉತ್ತಮ ಕಾಲ. ಹೊಸ ವಸ್ತು ಖರೀದಿಯ ಸಂಭವವಿದೆ. ಮನೆಯಲ್ಲಿ ಶಾಂತಿ ಇರಲಿದೆ. ಮನೆಗೆ ಅತಿಥಿಗಳ ಆಗಮನ ಆಗಬಹುದು. ಉದ್ಯೋಗಸ್ಥರಿಗೆ ಬಡ್ತಿ, ವೇತನ ಹೆಚ್ಚಳ ಕುರಿತಾದ ಶುಭ ಸುದ್ದಿ ಕಾದಿರಲಿದೆ. ಕೆಲಸದ ಸಂಬಂಧ ನೀವು ಪ್ರಯಾಣ ಮಾಡಬೇಕಾಗಿ ಬರಬಹದು.
ಕುಂಭ ರಾಶಿ
ಕುಂಭ ರಾಶಿಯವರು ಇಂದು ಹಣಕಾಸು ವಿಚಾರವಾಗಿ ಎಚ್ಚರದಿಂದ ಇರಬೇಕು. ನಿಮ್ಮ ಹಲವು ಕೆಲಸಗಳು ಹಣಕಾಸು ವಿಚಾರವಾಗಿ ನಿಧಾನವಾಗಬಹುದು. ಹಾಗೆ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ. ಆಪ್ತರಿಂದ ನಿಮ್ಮ ಕೆಲಸಕ್ಕೆ ಸಹಕಾರ ಇರಲಿದೆ.
ಮೀನ ರಾಶಿ
ಮೀನ ರಾಶಿ ಮಂದಿಗೆ ಈ ದಿನ ಶುಭಕರವಾಗಿರಲಿದೆ. ನಿಮ್ಮ ಹಲವು ಪ್ರಯತ್ನಗಳು ಫಲ ನೀಡಲಿವೆ. ಆರೋಗ್ಯಕ ಅಭ್ಯಾಸ ಇಂದು ಆರಂಭಿಸುತ್ತೀರಿ. ಕುಟುಂಬದಲ್ಲಿ ನಿಮಗೆ ದೊಡ್ಡ ಮಟ್ಟದ ಅಚ್ಚರಿ ಕಾದಿದೆ. ವಾಹನ ಚಾಲನೆ ಮಾಡವಾಗ ಎಚ್ಚರಿಕೆ ಅಗತ್ತ.



Click it and Unblock the Notifications