Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 20ರ ಭಾನುವಾರ ಯಾರಿಗೆ ತೃಪ್ತಿಕರ ದಿನ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 20ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಅನೇಕ ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು.
ಇಂದು ನಿಮಗೆ ಸಂತೋಷದಾಯಕ ದಿನವಾಗಿರುತ್ತದೆ. ನೀವು ಉತ್ತಮ ಆಹಾರ ಆನಂದಿಸುವಿರಿ ಮತ್ತು ಸಂಪತ್ತಿನ ಹಾದಿಯು ಸುಗಮವಾಗಲಿದೆ.
ವೃಷಭ ರಾಶಿ
ವ್ಯವಹಾರದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಅಗತ್ಯಗಳನ್ನು ಪೂರೈಸುವ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ವಾಹನಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಬಳಸಿ. ಆತುರದಿಂದ ಯಾವುದೇ ಹೆಜ್ಜೆ ಇಡಬೇಡಿ. ವಿಶ್ರಾಂತಿ ಬದಲು ನೀವು ಓಡಾಟದಲ್ಲಿ ಕಳೆಯಬಹುದು.

ಮಿಥುನ ರಾಶಿ
ಇಂದು ನಿಮಗೆ ಚಿಂತೆಯ ದಿನವಾಗಿರುತ್ತದೆ. ಇಂದು ನಿಮಗೆ ಹೆಚ್ಚು ಖರ್ಚು ಉಂಟಾಗುವ ದಿನ. ಕಣ್ಣಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು. ನಿಮ್ಮ ವ್ಯವಹಾರದಲ್ಲಿ ನಷ್ಟದಿಂದಾಗಿ ನೀವು ಸಮಸ್ಯೆಗಳ ಎದುರಿಸಬೇಕಾಗುತ್ತದೆ.
ಕರ್ಕ ರಾಶಿ
ಇಂದು ನಿಮಗೆ ತುಂಬಾ ಫಲಪ್ರದವಾಗಲಿದೆ. ನಿಮ್ಮ ಕೆಲಸಗಳಲ್ಲಿ ನೀವು ಬಯಸಿದಂತಹ ಯಶಸ್ಸು ಪಡೆಯಬಹುದು. ದೀರ್ಘಕಾಲದ ಅನಾರೋಗ್ಯ ಸುಧಾರಿಸಲಿದೆ. ಕೌಟುಂಬಿಕ ವಿಚಾರವಾಗಿ ಇದ್ದ ಸಮಸ್ಯೆಯೊಂದು ಬಗೆಹರಿಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನೀವು ಯಾರಿಂದಾದರು ಹಣಕಾಸಿನ ನೆರವು ಬಯಸಿದ್ದರೆ ನಿಮಗೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮಿಂದಾಗಿ ಇತರರಿಗೂ ಸಹಕಾರಿಯಾಗುವ ದಿನ ಎನ್ನಬಹುದು. ದಾಂಪತ್ಯ, ಪ್ರೀತಿಯ ವಿಚಾರದಲ್ಲೂ ನಿಮಗೆ ಇಂದು ಉತ್ತಮ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಹೆಚ್ಚು ಖರ್ಚು ಇರಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಮಕ್ಕಳ ಕುರಿತು ವಿಶೇಷ ಗಮನ ಹರಿಸಬೇಕಾಗುತ್ತದೆ. ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ. ದಾಂಪತ್ಯದಲ್ಲಿ ಸಂತಸ ಇರಲಿದೆ.
ತುಲಾ ರಾಶಿ
ಇಂದು ನಿಮಗೆ ಅನುಕೂಲಕರ ದಿನ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ತಾಳ್ಮೆ ಕಾಪಾಡಿಕೊಳ್ಳಬೇಕಾಗುತ್ತದೆ. ಮನೆಗಾಗಿ ನೀವು ಬಹುಮುಖ್ಯ ವಸ್ತು ಖರೀದಿಸಬಹುದು. ಮಕ್ಕಳ ಕುರಿತ ಚಿಂತೆ ದೊಡ್ಡದಾಗಬಹುದು, ನಿಮ್ಮ ಉಳಿತಾಯದ ಹಣವನ್ನು ಬಳಸುವ ಮುನ್ನ ಮತ್ತೆ ಆಲೋಚಿಸಿ.
ವೃಶ್ಚಿಕ ರಾಶಿ
ಇಂದು ನೀವು ಹೊಸದನ್ನು ಮಾಡಲು ಉತ್ತಮ ದಿನವಾಗಿರುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಇರಬಹುದು. ಹಣಕಾಸು ವಿಚಾರವಾಗಿ ಉತ್ತಮ ದಿನ. ವ್ಯಾಪಾರಿಗಳು ತುಂಬಾ ಜಾಗರೂಕರಾಗಿರಿ, ಇಲ್ಲದಿದ್ದರೆ ನಷ್ಟ ಸಂಭವವಿದೆ. ಆರೋಗ್ಯದಲ್ಲಿ ಚೇತರಿಕೆ ಇದೆ.
ಧನು ರಾಶಿ
ಇಂದು ನಿಮಗೆ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಏರುಪೇರು ಎದುರಾಗಬಹುದು. ಇಂದು ನಿಮ್ಮ ಶತ್ರುಗಳಿಂದ ದೂರ ಇರುವುದು ಉತ್ತಮ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಕುಟುಂಬಸ್ಥರ ಜೊತೆ ಚಿಕ್ಕ ಪ್ರವಾಸ ಅಥವಾ ಪ್ರಯಾಣದಲ್ಲಿ ನೀವು ಭಾಗಿಯಾಗಬಹುದು. ಖರ್ಚು ಹೆಚ್ಚಾಗುವ ದಿನ.
ಮಕರ ರಾಶಿ
ಇಂದು ನೀವು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುವ ದಿನವಾಗಿರುತ್ತದೆ. ಅನಗತ್ಯ ಚರ್ಚೆಗಳು, ಮಾತುಕತೆಗಳಲ್ಲಿ ಭಾಗಿಯಾಗದೆ ಇರುವುದು ಉತ್ತಮ. ನಿಮ್ಮ ದಾಂಪತ್ಯ ವಿಚಾರವಾಗಿ ಇದ್ದ ಮನಸ್ತಾಪ ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಖರ್ಚು ಹೆಚ್ಚಾಗಿದೆ.
ಕುಂಭ ರಾಶಿ
ಇಂದು ನಿಮ್ಮ ಸುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸುವುದು ಸಹ ನಿಮಗೆ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.
ಮೀನ ರಾಶಿ
ಇಂದು ನೀವು ಬಹಳ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ನೀವು ಕೆಲವು ವಿಶೇಷ ಜನರನ್ನು ಭೇಟಿಯಾಗುತ್ತೀರಿ, ಆದರೆ ವ್ಯವಹಾರದಲ್ಲಿ ನೀವು ರೊಂದಿಗೂ ಪಾಲುದಾರಿಕೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ.



Click it and Unblock the Notifications