Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಜ್ಯೋತಿಷ್ಯ ಪ್ರಕಾರ ಈ ವಾರ (ಜುಲೈ 19-26) 12 ರಾಶಿಗಳ ರಾಶಿಫಲ
ವೈದಿಕ ಶಾಸ್ತ್ರದ ಪ್ರಕಾರ ಈ ವಾರ (ಜುಲೈ 19-26) ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಈ ವಾರ ಮೇಷ ರಾಶಿಯವರು ಈ ವಾರ ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು. ಕೆಲಸ ಕಾರ್ಯಕ್ಕಾಗಿ ಪ್ರಯಾಣ ಮಾಡಬೇಕಾಗುವುದು. ಸಂಬಂಧದಲ್ಲಿ ಇ ದಿನ ಉತ್ತಮವಾಗಿದೆ. ವಾರದ ಕೊನೆ ನಿಮಗೆ ಉತ್ತಮವಾಗಿದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಯಶಸ್ಸು ದೊರೆಯಲಿದೆ.
ಈ ವಾರ ಹೊಸ ಯೋಜನೆ ಪ್ರಾರಂಭಿಸುವಾಗ ನಿಮಗೆ ಕೆನೆ ಬಣ್ಣ, 11 ಸಂಖ್ಯೆ, ಬುಧವಾರದ ದಿನ ಶುಭವಾಗಿದೆ.

ವೃಷಭ ರಾಶಿ
ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಆರೋಗ್ಯ ಸಮಸ್ಯೆಯಿಂದಾಗಿ ಪ್ರಮುಖ ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲಸದ ಚಿಂತೆಯೆಲ್ಲಾ ಬಿಟ್ಟು ಮೊದಲು ಆರೋಗ್ಯದ ಕಡೆಗೆ ಗಮನಹರಿಸಿ, ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಸರಿಯಾಗಲಿದೆ. ಇನ್ನು ಹಣದ ಬಗ್ಗೆ ನೋಡುವುದಾದರೆ ಯಾವುದೇ ದೊಡ್ಡ ಸಮಸ್ಯೆವಿಲ್ಲ, ಆದರೆ ನೀವು ಹೆಚ್ಚು ಖರ್ಚು ಮಾಡದಿರುವುದು ಒಳ್ಳೆಯದು. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಕೆಲಸದ ಪ್ರಯತ್ನದಲ್ಲಿ ಯಶಸ್ಸು ದೊರೆಯಲಿದೆ.
ಈ ವಾರ ನಿಮಗೆ ಬಿಳಿ ಬಣ್ಣ, 32 ಸಂಖ್ಯೆ, ಶುಕ್ರವಾರದ ದಿನ ಅದೃಷ್ಟಕರವಾಗಿದೆ.
ಮಿಥುನ ರಾಶಿ
ಕುಟುಂಬ ಜಿವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ನಿಮಗೆ ಉತ್ತಮವಾಗಿದೆ. ಇನ್ನು ಸ್ವಲ್ಪ ಸಮಯದಿಂದ ನೀವು ವಿದೇಶಕ್ಕೆ ಹೋಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದರೆ ಈ ಅವಧಿ ನಿಮಗೆ ಫಲಪ್ರದವಾಗಿದೆ. ವ್ಯಾಪಾರಿಗಲು ವ್ಯವಹಾರದ ಕಡೆಗೆ ಗಮನಹರಿಸಬೇಕು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ಈ ವಾರ ನಿಮಗೆ ಕೆಂಪು ಬಣ್ಣ, 24 ಸಂಖ್ಯೆ, ಮಂಗಳವಾರ ಶುಭ ದಿನವಾಗಿದೆ.
ಕರ್ಕ ರಾಶಿ
ಈ ವಾರ ಕರ್ಕ ರಾಶಿಯವರಿಗೆ ಶುಭವಾಗಿದೆ, ನೀವು ನಿಮ್ಮ ಗುರಿಮುಟ್ಟುವತ್ತ ತುಂಬಾನೆ ಗಮನಹರಿಸುತ್ತೀರಿ, ಆರೋಗ್ಯದ ಕಡೆಗೆ ಗಮನಹರಿಸಿ, ನೀವು ವ್ಯಾಪಾರಿಗಳಾಗಿದ್ದರೆ ನಿಮ್ಮ ವ್ಯಾಪಾರ ಯೋಜನೆಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಒಳ್ಳೆಯ ಹೊಂದಾಣಿಕೆ ಇರಲಿದೆ.
ಈ ವಾರ ನಿಮಗೆ ನೀಲಿ ಬಣ್ಣ, 8 ಸಂಖ್ಯೆ, ಶನಿವಾರದ ದಿನ ಅದೃಷ್ಟಕರ.
ಸಿಂಹ ರಾಶಿ
ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಕಡಿಮೆ ಶ್ರಮದಿಂದ ಒಳ್ಳೆಯ ಹಣ ಗಳಿಸಬಹುದು. ಈ ಸಮಯದಲ್ಲಿ ಕೆಲಸದಲ್ಲಿ ತುಂಬಾನೇ ಒತ್ತಡ ನಿರಲಿದೆ. ಇನ್ನು ಯಾವುದೇ ಹೊಸ ಕೆಲಸಕ್ಕೆ ಆತುರಬೇಡ, ಅದರ ಬಗ್ಗೆ ಚೆನ್ನಾಗಿ ವಿಚಾರಿಸಿದ ಬಳಿಕವಷ್ಟೆ ಮುಂದುವರೆಯಿರಿ, ಕುಟುಂಬದಲ್ಲಿ ಕೆಲ ಭಿನ್ನಾಬಿಪ್ರಾಯಗಳಿರಬಹುದು, ಯಾವುದೆ ಪ್ರಮುಖ ನಿರ್ದಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಮನೆಯವರ ಜೊತೆ ಚರ್ಚಿಸಿ, ಇನ್ನು ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.
ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬಣ್ಣ ಗುಲಾಬಿ, 25 ಅದೃಷ್ಟ ಸಂಖ್ಯೆ, ಸೋಮವಾರದ ದಿನ ಶುಭವಾಗಿದೆ.
ಕನ್ಯಾ ರಾಶಿ
ಈ ವಾರ ವೈಯಕ್ತಿಕ ದೃಷ್ಟಿಯಿಂದ ಒಳ್ಳೆಯದಿದೆ. ಆತಂತರಿಕ ಸಮಸ್ಯೆ ಬಗೆಹರಿಯಲಿದೆ, ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ. ಅಲ್ಲದೆ ಆರ್ಥಿಕವಾತಗಿಯ ಉತ್ತಮವಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಅತಿ ಹೆಚ್ಚಾಗಿ ಖರ್ಚು ಮಾಡಲು ಹೋಗಬೇಡಿ. ವ್ಯಾಪಾರಿಗಳಿಗೆ ಈ ಸಮಯ ಒಳ್ಳೆಯದಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಈ ವಾರ ನಿಮಗೆ ಅದೃಷ್ಟ ಬಣ್ಣ ಕೆಂಪು, 7 ಅದೃಷ್ಟದ ಸಂಖ್ಯೆ, ಭಾನುವಾರ ಶುಭ ದಿನವಾಗಿದೆ.
ತುಲಾ ರಾಶಿ
ನೀವು ಕೆಟ್ಟದರ ಬಗ್ಗೆ ಆಲೋಚನೆ ಮಾಡದೆ ಸಕಾರಾತ್ಮಕ ಅಂಶಗಳತ್ತ ಗಮನ ಹರಿಸಬೇಕು. ವೃತ್ತಿ ಬದುಕಿನ ಸವಾಲುಗಳು ಶೀಘ್ರದಲ್ಲಿಯೇ ದೂರಾಗಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು, ಹಣದ ವಿಚಾರದಲ್ಲಿ ಆತುರಪಡಬೇಡಿ. ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ನೀವು ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸುವುದು ಒಳ್ಳೆಯದು.
ಈ ವಾರ ನಿಮಗೆ ಅದೃಷ್ಟ ಬಣ್ಣ ಹಸಿರು, ಅದೃಷ್ಟದ ಸಂಖ್ಯೆ 49, ಸೋಮವಾರ ಶುಭ ದಿನವಾಗಿದೆ.
ವೃಶ್ಚಿಕ ರಾಶಿ
ಈ ವಾರ ಜಾಗ್ರತೆವಹಿಸಿ, ಈ ವಾರ ಒತ್ತಡದಿಂದ ಕೂಡಿರಲಿದೆ. ಒಂದರ ಹಿಂದೆ ಮತ್ತೊಂದು ಎಂಬಂತೆ ಸವಾಲು ಬರಬಹುದು. ಕುಟುಂಬದಲ್ಲಿ ನಿವು ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸಿ, ನಿಮ್ಮ ಮಾತುಗಳಿಂದ ಮನೆಯವರರಿಗೆ ನೋವಾಗದಂತೆ ಜಾಗ್ರತೆವಹಿಸಿ. ಉದ್ಯೋಗಿಗಳಿಗೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡದಂತೆ ಸಲಹೆ ನೀಡಲಾಗುವುದು, ವ್ಯಾಪಾರಿಗಳು ಹಣದ ವ್ಯವಹಾರದಲ್ಲಿ ಜಾಗ್ರತೆವಹಿಸಿ. ಆರೋಗ್ಯಕ್ಕಾಗಿ ಮಾನಸಿಕ ಒತ್ತಡ ಹೊರಹಾಕಲು ಪ್ರಯತ್ನಿಸಿ.
ಈ ವಾರ ನಿಮಗೆ ನೇರಳೆ ಬಣ್ಣ ಅದೃಷ್ಟಕರ, 33 ಸಂಖ್ಯೆ, ಶನಿವಾರ ಅದೃಷ್ಟದ ದಿನವಾಗಿದೆ.
ಧನು ರಾಶಿ
ಧನು ರಾಶಿಯವರೇ ಈ ವಾರ ನಿಮಗೆ ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಈ ವಾರ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಈ ವಾರ ನೀವು ಯಶಸ್ಸನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ. ವೈವಾಹಿಕ ಜಿವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಈ ವಾರ ನಿಮಗೆ ಗೋಲ್ಡನ್ ಬಣ್ಣ, 26 ಅದೃಷ್ಟದ ಸಂಖ್ಯೆ, ಸುಕ್ರವಾರದ ದಿನ ಸುಭವಾಗಿದೆ.
ಮಕರ ರಾಶಿ
ನೀವು ತುಂಬಾ ಸಮಯದಿಂದ ಕೆಲಸ ಹುಡುಕುತ್ತಿದ್ದರೆ ಈ ವಾರ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಲು ಧನ ಲಾಭ ಪಡೆಯುತ್ತೀರಿ, ನೀವು ಕೆಲಸದ ಜೊತೆಗೆ ಕುಟುಂಬದ ಕಡೆಗೆ ಗಮನಹರಿಸಿ. ಆರ್ಥಿಕ ಸ್ಥಿತಿ ತುಮಬಾ ಚೆನ್ನಾಗಿರಲಿದೆ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ.
ಈ ವಾರ ಅದೃಷ್ಟದ ಬಣ್ಣ ಕಿತ್ತಳೆ, ಅದೃಷ್ಟದ ಸಂಖ್ಯೆ10, ಗುರುವಾರದ ದಿನ ಶುಭವಾಗಿದೆ.
ಕುಂಭ ರಾಶಿ
ಈ ವಾರ ತಾಳ್ಮೆ ಮುಖ್ಯ, ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು, ಕೋಪದ ಬದಲಿಗೆ ತಾಳ್ಮೆಯಿಂದ ಬಗೆಹರಿಸಿ. ಆರ್ಥಿಕ ತೊಂದರೆ ದುರಾಗಲಿದೆ. ಪ್ರೇಮಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಇನ್ನು ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಜಾಗ್ರತೆವಹಿಸಿ.
ಈ ವಾರ ನಿಮಗೆ ಅದೃಷ್ಟದ ಬಣ್ಣ ಕಂದು, 6 ಅದೃಷ್ಟದ ಸಂಖ್ಯೆ, ಹಳದಿ ಶುಬ ಬಣ್ಣವಾಗಿದೆ.
ಮೀನ ರಾಶಿ
ಕೆಲಸದ ಬಗ್ಗೆ ಜಾಗ್ರತೆವಹಿಸಿ, ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಅವಿವಾಹಿತರಾಗಿದ್ದರೆ ಒಳ್ಳೆಯ ಮದುವೆ ಪ್ರಸ್ತಾಪ ಬರಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ ಹಳದಿ, ಅದೃಷ್ಟದ ಸಂಖ್ಯೆ: 15, ಅದೃಷ್ಟದ ದಿನ ಗುರುವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











