Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 19ರ ಶನಿವಾರ ಯಾರಿಗೆಲ್ಲಾ ಅದ್ಭುತ ದಿನ ನೋಡಿ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 19ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮಗೆ ಸೌಕರ್ಯ ಮತ್ತು ಐಷಾರಾಮಿ ದಿನ ಎನ್ನಬಹುದು. ನೀವು ಇಂದು ನಿಮ್ಮ ಅಗತ್ಯತೆ ಗಳಿಗೆ ಅನುಗುಣವಾಗಿ ಖರ್ಚು ಮಾಡುತ್ತೀರಿ. ನೀವು ಭೌತಿಕ ಸೌಕರ್ಯಗಳಲ್ಲಿಯೂ ಹೆಚ್ಚಳವನ್ನು ಪಡೆಯುತ್ತೀರಿ. ದಾಂಪತ್ಯದಲ್ಲಿ ಸಂತಸದ ದಿನ ಆಗಿರಲಿದೆ.
ವೃಷಭ ರಾಶಿ
ಇಂದು ನಿಮಗೆ ತೊಡಕುಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಮಕ್ಕಳಿಂದ ಸಮಸ್ಯೆಗಳು ಬರಬಹುದು. ವಾಹನ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಕುಟುಂಬದಲ್ಲಿ ಹಣಕಾಸು ವಿಚಾರವಾಗಿ ಒತ್ತಡಗಳು ಕಾಡಬಹುದು. ವ್ಯಾಪಾರಿಗಳಿಗೆ ಮಿಶ್ರ ಫಲದ ದಿನವಿದು.

ಮಿಥುನ ರಾಶಿ
ಇಂದು ನಿಮಗೆ ಮೋಜಿನ ದಿನ ಎನ್ನಬಹುದು. ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಅವಕಾಶ ಸಿಗಬಹುದು. ಆಪ್ತರೊಬ್ಬರ ಸಹಕಾರದಿಂದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ದಾಂಪತ್ಯ ವಿಚಾರವಾಗಿ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ.
ಕರ್ಕ ರಾಶಿ
ಇಂದು ನಿಮಗೆ ವಿಶೇಷ ದಿನವಾಗಿರುತ್ತದೆ. ನೀವು ಕೆಲವು ಪ್ರಮುಖ ಕೆಲಸಗಳಿಗಾಗಿ ಹಲವರನ್ನು ಭೇಟಿಯಾಗುತ್ತೀರಿ. ನ್ಯಾಯಾಲಯ, ಆಸ್ತಿ ಸಂಬಂಧವಾಗಿ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ಸಾಲ ಮರುಪಾವತಿಯಾಗಲಿದೆ. ನಿಮ್ಮ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಸಿಂಹ ರಾಶಿ
ಅದೃಷ್ಟದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ವ್ಯಾಪಾರ ಮಾಡುವ ಜನರು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ. ನಿಮ್ಮ ತಂದೆ ನಿಮಗೆ ದೊಡ್ಡ ಜವಾಬ್ದಾರಿಯನ್ನು ನೀಡಬಹುದು. ಹಣಕಾಸು ವಿಚಾರದಲ್ಲಿ ನಿಮಗೆ ಉತ್ತಮ ದಿನವಾಗಿರಲಿದೆ.
ಕನ್ಯಾ ರಾಶಿ
ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಂದು ನಿಮಗೆ ದುರ್ಬಲ ದಿನವಾಗಲಿದೆ. ಯಾರನ್ನಾದರೂ ಕೇಳಿ ವಾಹನ ಚಲಾಯಿಸಬೇಡಿ. ನೀವು ಪ್ರವಾಸಕ್ಕೆ ತೆರಳುವ ತಯಾರಿ ನಡೆಸುತ್ತೀರಿ. ಕುಟುಂಬದಲ್ಲಿ ದೊಡ್ಡ ವಿಚಾರವಾಗಿ ಚರ್ಚೆ ಇರಬಹುದು.
ತುಲಾ ರಾಶಿ
ಆದಾಯ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಹಲವು ವಿಚಾರದಲ್ಲಿ ನಿಮಗೆ ಧನಾತ್ಮಕ ಸಮಯ ಎನ್ನಬಹುದು. ಪ್ರಯಾಣಗಳು ಉತ್ತಮ ಫಲಿತಾಂಶ ನೋಡಬಹುದು. ಹಿರಿಯರ ಸಲಹೆಯನ್ನು ತಿರಸ್ಕರಿಸದೆ ಪಾಲಿಸುವುದು ಉತ್ತಮ.
ವೃಶ್ಚಿಕ ರಾಶಿ
ಇಂದು ನಿಮಗೆ ಸಮಸ್ಯೆಗಳನ್ನು ತರಲಿದೆ, ಏಕೆಂದರೆ ನಿಮ್ಮ ಶತ್ರುಗಳು ಹೆಚ್ಚಾಗಬಹುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಮಕ್ಕಳ ಕುರಿತಾದ ಚಿಂತೆ ದೂರಾಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಧನು ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಅನೇಕ ದಿನಗಳ ಆಸೆಯೊಂದನ್ನು ಈಡೇರಿಸಿಕೊಳ್ಳಬಹುದು. ಉದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಹಣಕಾಸು ವಿಚಾರದಲ್ಲಿ ಮಿಶ್ರಫಲದ ದಿನ.
ಮಕರ ರಾಶಿ
ಇಂದು ನಿಮಗೆ ಹೊಸ ಮನೆ ಮತ್ತು ವಾಹನ ಇತ್ಯಾದಿಗಳ ಖರೀದಿಸಲು ಒಳ್ಳೆಯ ದಿನ. ಅದಾಯ ಹೆಚ್ಚಳದ ಸಂಭವವಿದೆ. ಪ್ರಯಾಣಗಳು, ಹೂಡಿಕೆಗಳಲ್ಲಿ ಲಾಭವಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ದಿನ ಬಹಳ ಅನುಕೂಲ ನೋಡಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಿದೆ. ದೊಡ್ಡ ಒಪ್ಪಂದಗಳು, ವ್ಯವಹಾರಗಳಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು. ದಾಂಪತ್ಯ ಸಂಬಂಧ ಗಟ್ಟಿಯಾಗಲಿದೆ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಇಂದು ವ್ಯಾಪಾರ, ವ್ಯವಹಾರ ಪ್ರಗತಿಯ ದಿನ. ಪ್ರಯಾಣಗಳ ಮಾಡಬೇಕಾಗುತ್ತದೆ. ಗೃಹಿಣಿಯರಿಗೆ ಈ ದಿನ ಬಹಳ ಖರ್ಚಾಗಬಹುದು, ಆದ್ರೆ ಆ ಖರ್ಚುಗಳ ನಿಮಗೆ ಲಾಭ ತರಬಹುದು. ಆರೋಗ್ಯದ ಕಡೆ ಗಮನವಿಡಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications