Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 18ರ ಶುಕ್ರವಾರದ ನಿಮ್ಮ ರಾಶಿಫಲ ಇಲ್ಲಿದೆ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 18ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲದ ದಿನ ನಿಮ್ಮ ಅನೇಕ ಕೆಲಸಗಳಲ್ಲಿ ಇಂದು ಸುಲಭಕ್ಕಿಂತ ಕಷ್ಟಗಳು ಹೆಚ್ಚಾಗಲಿವೆ. ಆದ್ರೆ ನಿಮ್ಮ ಬುದ್ದಿವಂತಿಕೆಯ ಕಾರಣ ನೀವು ಯಶಸ್ಸು ಗಳಿಸಬಹುದು. ಪ್ರಯಾಣಗಳಲ್ಲಿ ನೀವು ತೊಡಗಬೇಕಾಗುತ್ತದೆ. ಸಂಬಂಧಿಕರ ಭೇಟಿಯಾಗುವ ಸಾಧ್ಯತೆ ಇದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಈ ದಿನ ಬಹಳ ಸಮಯದವರೆಗೂ ಓಡಾಟ ಅಥವಾ ಕೆಲಸದಲ್ಲೇ ಭಾಗಿಯಾಗುತ್ತೀರಿ. ನಿಮ್ಮ ಕೆಲಸ ಕಾರ್ಯಗಳನ್ನು ಅಂದುಕೊಂಡ ಸಮಯದೊಳಗೆ ಮುಗಿಸುತ್ತೀರಿ. ಪ್ರೀತಿಯ ವಿಚಾರದಲ್ಲಿ ಉತ್ತಮ ದಿನ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರ ದಿನ ಎನ್ನಬಹುದು. ವ್ಯಾಪಾರಿಗಳು ಲಾಭ ಮಾಡುವಂತಹ ದಿನ ಎನ್ನಬಹುದು, ಸುಲಭವಾಗಿ ಸಿಗುವ ಯಶಸ್ಸಿನಿಂದ ನಿಮಗೆ ತೃಪ್ತಿ ಇರುವುದಿಲ್ಲ. ಗೃಹಿಣಿಯರಲ್ಲಿ ಧನ ಲಾಭದ ನಿರೀಕ್ಷೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನ ಬಹಳ ಅನುಕೂಲ ಇರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಧನಾತ್ಮಕ ದಿನ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ಬಹಳ ಸಮಯದ ಬಳಿಕ ನಿಮ್ಮ ಕೈ ಸೇರಲಿದೆ. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಅಗತ್ಯ. ಆರೋಗ್ಯದ ಕಡೆ ಗಮನವಿಡುವುದು ಒಳಿತು.
ಸಿಂಹ ರಾಶಿ
ನಿಮಗಿಂದು ಹೂಡಿಕೆ ಮಾಡಿದ್ದ ಹಣದಲ್ಲಿ ಲಾಭ ಮಾಡುವ ದಿನ. ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹೊಸ ಉದ್ಯೋಗಗಳು ನಿಮ್ಮನ್ನು ಹುಡುಕಿ ಬರಲಿದೆ. ದಾಂಪತ್ಯ ಹಾಗೂ ಪ್ರೀತಿಯ ವಿಚಾರವಾಗಿ ಬಹಳ ಉತ್ತಮ ದಿನ. ಅವಿವಾಹಿತರಲ್ಲಿ ಇಂದು ಖರ್ಚು ಹೆಚ್ಚಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯುವ ದಿನ. ಮಹಿಳೆಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಬಹಳ ದಿನದಿಂದ ಆರ್ಥಿಕ ಸಮಸ್ಯೆ ಎದುರಿಸಿದ್ದರೆ ನಿವಾರಣೆಯಾಗುವ ಸಂಭವವಿದೆ. ಮನೆ ನಿರ್ಮಾಣ ಮಾಡುವವರ ಚಿಂತೆಯೊಂದು ದೂರಾಗಲಿದೆ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನ ಬಹಳ ಸಮಸ್ಯೆಗಳು, ಚಿಂತೆ ಎದುರಾಗುವ ದಿನ. ದಾಂಪತ್ಯ ವಿಚಾರವಾಗಿ ನಿಮಗೆ ಬಹಳ ಚಿಂತೆ ಕಾಡಬಹುದು, ಮಕ್ಕಳ ವಿಚಾರವಾಗಿ ನಿಮಗೆ ಹೊಸ ರೀತಿ ಸಮಸ್ಯೆ ಬರಬಹುದು. ವಾಹನ ವಿಚಾರವಾಗಿ ಖರ್ಚು ಹೆಚ್ಚಾಗುವ ಸಂಭವವಿದೆ. ಮಹಿಳಾ ಉದ್ಯಮಿಗಳಿಗೆ, ಇಲ್ಲವೆ ಸ್ವಂತ ವ್ಯವಹಾರ ನಡೆಸುವವರಲ್ಲಿ ಹಣಕಾಸು ವ್ಯತ್ಯಯ ಕಂಡುಬರಲಿದೆ.
ವೃಶ್ಚಿಕ ರಾಶಿ
ನೀವು ಬಹಳ ದಿನಗಳಿಂದ ಮಾಡದೆ ಉಳಿಸಿಕೊಂಡಿದ್ದ ಪ್ರಮುಖ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಬ್ಯಾಂಕಿಂಗ್ ವಿಚಾರವಾಗಿ ನಿಮಗೆ ಬಹಳ ಅನುಕೂಲವಿದೆ. ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಯಾರಿಂದಾದರು ಹಣ ಬಾಕಿ ಇದ್ದರೆ ಇಂದು ಪ್ರಯತ್ನಿಸುವುದರಿಂದ ಮರುಪಾವತಿಯ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿವರಿಗೆ ಈ ದಿನವು ಬಹಳ ಆರಾಮದಾಯಕವಾಗಿರಲಿದೆ. ವ್ಯಾಪಾರಿ ವರ್ಗಕ್ಕೆ ಸಾಮಾನ್ಯ ದಿನವಾಗಿರಲಿದೆ. ಸರ್ಕಾರಿ ನೌಕರರಲ್ಲಿ ಒತ್ತಡದ ದಿನ. ಗೃಹಿಣಿಯರು ಇಂದು ಹಲವು ಕಾರಣಗಳಿಗೆ ಖರ್ಚು ಮಾಡಬೇಕಾಗಬಹುದು. ಆಪ್ತರಿಂದ ಶುಭ ಸುದ್ದಿ ನಿರೀಕ್ಷಿಸಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನ ಮಿಶ್ರ ಫಲ ಇರಲಿದೆ. ವ್ಯಾಪಾರಿಗಳಿಗೆ ಬಹಳ ಅನುಕೂಲ. ನಿಮ್ಮ ಬಹಳ ದಿನದಿಂದ ಇದ್ದ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ವಾಹನ ಸವಾರರಿಗೆ ಶುಭಕರ ದಿನ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ತರಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಮಿಶ್ರಫಲದ ದಿನ. ದೂರ ಪ್ರಯಾಣಗಳು ನಿಮ್ಮಲ್ಲಿ ಶುಭ ತರಲಬಹುದು. ಪ್ರವಾಸಗಳ ಸಂಬಂಧ ತಯಾರಿ ನಡೆಸಬಹುದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗಿರಲಿದೆ. ಗೃಹಿಣಿಯರಿಗೆ ಶುಭಕರ ದಿನ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನವಾಗಲಿದೆ. ಈ ದಿನ ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಬಹಳ ಅನುಕೂಲಕರ ವಾತಾವರಣ ಇರಲಿದೆ. ಹಿರಿಯರೊಬ್ಬರ ಆರೋಗ್ಯ ಸುಧಾರಿಸಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ.



Click it and Unblock the Notifications