Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 17ರ ಗುರುವಾರ ನಿಮಗೆ ಯಾವ ರೀತಿ ಶುಭವಿದೆ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 17ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಇಂದು ಸವಾಲುಗಳು ಎದುರಾಗಬಹುದು. ಹಲವು ರೀತಿಯ ವ್ಯವಹಾರಗಳಲ್ಲಿ ಶುಭವಾದರು ಅದರ ಫಲಿತಾಂಶದಿಂದ ತೃಪ್ತಿ ಇರುವುದಿಲ್ಲ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಈ ದಿನ ಒತ್ತಡದಲ್ಲಿ ಕಳೆಯಬಹುದು. ಸವಾಲಿನ ದಿನವಾದರು ಎಲ್ಲಾ ವಿಚಾರದಲ್ಲೂ ನಿಮಗೆ ಶುಭಕರ ಸ್ಥಿತಿ ಇರಲಿದೆ. ಕುಟುಂಬದಲ್ಲಿ ನಿಮ್ಮ ಪರವಾದ ಬೆಂಬಲ ನೋಡಬಹುದು. ಆಪ್ತರೊಂದಿಗೆ ಪ್ರವಾಸ ತೆರಳಬಹುದು. ಪ್ರಯಾಣಗಳಲ್ಲಿ ಸುಖವಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಅನುಕೂಲಕರವಾಗಿರಲಿದೆ. ಪ್ರಯಾಣಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನಿಮ್ಮ ಹಣಕಾಸು ವಿಚಾರವಾಗಿ ಕಷ್ಟಕರ ದಿನ. ವ್ಯಾಪಾರಿಗಳಿಗೆ ಉತ್ತಮ ದಿನವಾದರೂ ಖರ್ಚು ಕೂಡ ಹೆಚ್ಚಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಇಂದು ಸುಲಭದ ಹಾದಿ. ನಿಮ್ಮ ಕೆಲಸಗಳು ಅಡೆತಡೆ ಇಲ್ಲದೆ ನಡೆಯಲಿದೆ. ದೂರ ಪ್ರಯಾಣಗಳಲ್ಲಿ ಸುಖ ಇರಲಿದೆ. ಆಪ್ತರೊಬ್ಬರ ಅನಾರೋಗ್ಯ ಸಂಬಂಧ ನಿಮಗೆ ಓಡಾಟ ಇರಬಹುದು. ವ್ಯವಹಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ ಇರಲಿದೆ. ನೀವು ಇಂದು ಶಾಪಿಂಗ್ ಅಥವಾ ವಸ್ತು ಖರೀದಿಯಲ್ಲಿ ತೊಡಗಬಹುದು, ದಾಂಪತ್ಯ, ಪ್ರೀತಿಯ ವಿಚಾರದಲ್ಲಿ ಉತ್ತಮ ದಿನವಾಗಲಿದೆ. ಆರೋಗ್ಯ ಸುಧಾರಣೆ, ವ್ಯಾಪಾರ ಲಾಭ ನೋಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಅನುಕೂಲ. ನವವಿವಾಹಿತರಲ್ಲಿ ಶುಭ ಸುದ್ದಿ ಕೇಳಬಹುದು. ಮನೆ, ಆಸ್ತಿ ವಿಚಾರವಾಗಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಪ್ರಯಾಣ ಮಾಡಬೇಕಾಗುತ್ತದೆ. ಪ್ರಮುಖ ದಿನಾಂಕಗಳ ಮರೆಯಬೇಡಿ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳು ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಬಹಳ ವಿಚಾರಗಳಲ್ಲಿ ನಿಮಗೆ ಗೊಂದಲ ಇರಬಹುದು, ಆದ್ರೆ ಎಲ್ಲಾ ವಿಚಾರಗಳನ್ನು ನಿಭಾಯಿಸುತ್ತೀರಿ. ಗೃಹಿಣಿರ ಆರೋಗ್ಯದಲ್ಲಿ ಏರುಪೇರು ಸಂಭವ.
ವೃಶ್ಚಿಕ ರಾಶಿ
ಈ ರಾಶಿಯವರು ಇಂದು ಎಚ್ಚರಿಕೆಯಿಂದ ಎಲ್ಲಾ ಕೆಲಸಗಳ ಮಾಡಿ ಮುಗಿಸಿ. ನಿಮ್ಮಲ್ಲಿ ಬಹಳ ಒತ್ತಡ ಇರಬಹುದು, ದಾಂಪತ್ಯದಲ್ಲಿ ಪ್ರಣಯದ ದಿನ. ಚಿಂತೆ ಕಾಡುವಂತಹ ವಿಚಾರಗಳು ನಡೆಯಬಹುದ. ಶುಭ ಕಾರ್ಯ ಸಂಬಂಧವಾಗಿ ಮಾತುಕತೆಯಲ್ಲಿ ನೀವು ತೊಡಗಬಹುದು. ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ.
ಧನು ರಾಶಿ
ಧನು ರಾಶಿಯ ಮಂದಿಗೆ ಇಂದು ಅನುಕೂಲಕರ ದಿನ. ಗೃಹಿಣಿಯರು ಪ್ರಯಾಣದಲ್ಲಿ ತೊಡಗಬಹುದು. ಮಕ್ಕಳ ಕುರಿತಾದ ಚಿಂತೆಯಿಂದು ಹೆಚ್ಷಾಗಬಹುದು. ವ್ಯಾಪಾರಿಗಳು ಪರಿಣಾಮಕಾರಿ ಕೆಲಸದಲ್ಲಿ ಭಾಗಿಯಾಗುತ್ತೀರಿ. ಸ್ವಂತ ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯ ಮಂದಿ ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಆಪ್ತರ ನೆರವಿನಿಂದಾಗಿ ಉತ್ತಮ ಅವಕಾಶಗಳು ಸಿಗಬಹುದು. ಆಹಾರ ಸಂಬಂಧಿ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯದ ಕಡೆಗೆ ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿಯರಿಗೆ ಮಿಶ್ರ ಫಲದ ದಿನ ಎನ್ನಬಹುದು ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ನೀವು ಅಂದುಕೊಂಡಂತೆ ಈ ದಿನ ಕಳೆಯಲಿದ್ದೀರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಉತ್ತಮ ದಿನ. ಒತ್ತಡಗಳು ಕಡಿಮೆಯಾಗುವಂತಹ ಸ್ಥಿತಿ ಇರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಸಾಮಾನ್ಯವಾಗಿರಲಿದೆ. ಈ ದಿನ ನಿಮ್ಮ ಹಲವು ಕೆಲಸಗಳ ಪೂರ್ಣ ಮಾಡುವಿರಿ. ಹಿರಿಯರ ಮಾರ್ಗದರ್ಶನದಂತೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನ.



Click it and Unblock the Notifications