Dina Bhavishya: ಜುಲೈ 16ರ ಬುಧವಾರದಂದು ಯಾರಿಗೆ ಒತ್ತಡದ ದಿನ?

ವೈದಿಕ ಶಾಸ್ತ್ರದ ಪ್ರಕಾರ ಜುಲೈ 16ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಈ ದಿನದಂದು ಬಹಳ ಅನುಕೂಲಕರ ಕೆಲಸಗಳ ನೋಡಬಹುದು. ನಿಮ್ಮ ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ನಿಮಗೆ ಲಾಭದಾಯಕ ದಿನವಾಗುತ್ತದೆ. ಹಲವು ವರ್ಷದ ಹೂಡಿಕೆಯೊಂದು ಲಾಭವಾಗಿ ಪರಿವರ್ತನೆಯಾಗಲಿದೆ. ಕುಟುಂಬದಲ್ಲಿ ಸಂತಸ ನೋಡಬಹುದು.

ವೃಷಭ ರಾಶಿ

ನಿಮಗಿಂದು ಅತ್ಯಂತ ಶುಭಕರ ದಿನ. ವ್ಯಾಪಾರಿಗಳು ಹೆಚ್ಚಿನ ಶ್ರಮ ಹಾಕುವುದರಿಂದ ಲಾಭವಿದೆ. ಮಹಿಳಾ ಉದ್ಯಮಿಗಳಿಗೆ ದಿಢೀರ್ ಲಾಭಗಳ ನೋಡುವ ದಿನ. ಮಕ್ಕಳಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆ ಮುಂದೂಡಬೇಕಾಗಬಹುದು.

July-16-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಳಲ್ಲಿ ಅಡೆತಡೆ ನೋಡುವಿರಿ. ವೇತನ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು, ಇದು ನಿಮಗೆ ಒತ್ತಡ ತರಬಹುದು. ದಾಂಪತ್ಯದಲ್ಲಿನ ಸಂತಸ ದೂರಾಗುವ ದಿನ, ಹಣಕಾಸು ವ್ಯವಹಾರ ನೀವು ಅಂದುಕೊಂಡಂತೆ ನಡೆಯದೆ ಇರಬಹುದು.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯಬೇಕಾಗಬಹುದು. ನಿಮ್ಮ ಪ್ರಯಾಣಗಳು ಲಾಭಕರವಾಗಬಹುದು. ವ್ಯಾಪಾರಿಗಳು ಬುದ್ದಿವಂತಿಕೆಯಿಂದ ಕೆಲಸಗಳಲ್ಲಿ ಭಾಗಿಯಾಗಿ. ಕುಟುಂಬ ವಿಚಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ.

ಸಿಂಹ ರಾಶಿ

ಸಿಂಹ ರಾಶಿಯ ಮಂದಿಗೆ ಈ ದಿನವು ಬಹಳ ತೃಪ್ತಿ ತರುವ ದಿನ. ನಿಮ್ಮ ಹಣಕಾಸು ವ್ಯವಹಾರದಲ್ಲಿ ನೆಮ್ಮದಿ ಇರಲಿದೆ. ವ್ಯಾಪಾರಿಗಳ ಶ್ರಮವು ಆರ್ಥಿಕ ಬಲ ನೀಡುವತ್ತ ಸಾಗಲಿದೆ. ಬಹಳ ದಿನದಿಂದ ಬಯಸಿದ್ದ ವಸ್ತು ಖರೀದಿಸಬಹುದು. ಮನೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಮಿಶ್ರ ಫಲದ ದಿನ. ಗೃಹಿಣಿಯರಲ್ಲಿ ಈ ದಿನ ಬಹಳ ಸಮಸ್ಯೆಗಳ ನೋಡಬಹುದು. ನಿಮ್ಮ ಓಡಾಟಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ನಿತ್ಯದ ಕೆಲಸವು ಅಡೆತಡೆಯ ಕಾರಣದಿಂದ ತಡವಾಗಬಹುದು. ವಾಹನ ಸಂಬಂಧಿ ಸಮಸ್ಯೆಗೆ ನೀವು ಒಳಗಾಗಬಹುದು.

ತುಲಾ ರಾಶಿ

ತುಲಾ ರಾಶಿಯವರು ಈ ದಿನಂದು ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ನಿಮ್ಮದಲ್ಲದ ವಸ್ತುಗಳಿಗೆ ಅಥವಾ ವಿಚಾರಗಳಿಗೆ ನೀವು ಖರ್ಚು ಮಾಡುತ್ತೀರಿ. ಆರೋಗ್ಯ ಸಂಬಂಧ ನಿಗಧಿಯತೆ ತಪಾಸಣೆಗೆ ಒಳಗಾಗುವುದು ಉತ್ತಮ. ವ್ಯಾಪಾರಿಗಳು ಪ್ರಗತಿ ನೋಡುವ ದಿನ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನ ದೊಡ್ಡ ಕೆಲಸ ಮಾಡುವಿರಿ. ಮನೆಗಾಗಿ ಖರ್ಚು ಮಾಡುವಿರಿ. ಕುಟುಂಬದಲ್ಲಿದ್ದ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಬಗೆಹರಿಸುತ್ತೀರಿ. ಮಕ್ಕಳ ಕುರಿತಾದ ಚಿಂತೆ ಹೆಚ್ಛಾಗಬಹುದು. ಪ್ರೀತಿಯ ವಿಚಾರವಾಗಿ ಇಂದು ಉತ್ತಮ ದಿನವಲ್ಲ. ಮಾನಸಿಕ ನೆಮ್ಮದಿ ಹಾಳಾಗುವ ವಿಚಾರಗಳು ನಡೆಯಬಹುದು.

ಧನು ರಾಶಿ

ಧನು ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ಗೃಹಿಣಿರ ಆರೋಗ್ಯ ಹದ ಗೆಡುವ ಸಾಧ್ಯತೆಗಳಿವೆ. ನಿಮ್ಮ ಅದಾಯದಲ್ಲಿ ಇಂದು ಹೆಚ್ಚಳ ಆಗುವಂತಹ ಅವಕಾಶಗಳು ಇರಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನ ಶುಭಕರವಾಗಿರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಒತ್ತಡ ಹಾಗೂ ಸಮಸ್ಯೆಗಳಿಂದ ಕೂಡಿರುವ ದಿನವಾಗಿರಬಹುದು. ನಿಮ್ಮ ಆರೋಗ್ಯದಲ್ಲಿನ ಏರುಪೇರು, ನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಹೀಗಾಗಿ ನೀವು ಬಯಸಿದಂತಹ ಕೆಲಸದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬರಬಹುದು. ವ್ಯಾಪಾರಿಗಳಿಗೆ ನಷ್ಟ ಸಂಭವವಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನ ಬಹಳ ಅನಾನುಕೂಲಗಳು ಕಾದಿವೆ. ನಿಮ್ಮ ಆರ್ಥಿಕ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು, ನಿಮಗೆ ಬರಬೇಕಿದ್ದ ಬಾಕಿ ಹಣವು ಮತ್ತೆ ವಿಳಂಬವಾಗಬಹುದು. ಸಹೋದರರೊಂದಿಗೆ ನಿಮ್ಮ ಬಾಂಧವ್ಯ ಹದಗೆಡಬಹುದು. ವಾಹನಗಳಿಂದ ಸಮಸ್ಯೆಗೆ ಗುರಿಯಾಗಬಹುದು.

ಮೀನ ರಾಶಿ

ಮೀನ ರಾಶಿಯವರು ಈ ದಿನ ಸರ್ಕಾರಿ ಕೆಲಸ ಸಂಬಂಧವಾಗಿ ಓಡಾಡಬೇಕಾಗುತ್ತದೆ. ನಿಮ್ಮ ದೊಡ್ಡ ಕೆಲಸಗಳನ್ನು ಗಮನವಿಟ್ಟು ಮಾಡಿ. ಮನಸ್ಸಿನಲ್ಲಿ ಹಣಕಾಸು ವಿಚಾರವಾಗಿ ಚಿಂತೆ ಇರಬಹುದು. ಆಹಾರ ಸಂಬಂಧವಾಗಿ ಖರ್ಚು ಮಾಡಬೇಕಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

July-16-2025-daily-horoscope-prediction-for-12-zodiac-signs-in-kannada

Here is July 16 daily horoscope prediction for 12 zodiac signs read on...
Story first published: Wednesday, July 16, 2025, 5:01 [IST]
X
Desktop Bottom Promotion