Dina Bhavishya: ಜುಲೈ 15ರ ಮಂಗಳವಾರ ಈ ರಾಶಿಯವರು ಎಚ್ಚರಿಕೆಯಿಂದ ವಾಹನ ಚಲಾಯಿಸಿ!

ವೈದಿಕ ಶಾಸ್ತ್ರದ ಪ್ರಕಾರ ಜುಲೈ 15ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಸಮಸ್ಯೆಗಳ ದಿನವಾಗಿರಲಿದೆ. ನಿಮ್ಮ ಹಣದ ವಿಚಾರದಲ್ಲಿ ಬಹಳ ಅನಾನುಕೂಲಗಳ ನೋಡಬಹುದು. ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಇರಬಹುದು. ಪ್ರಯಾಣಗಳ ಮಾಡುವಾಗ ಎಚ್ಚರ ವಹಿಸಬೇಕಾಗುತ್ತದೆ. ಅನಾರೋಗ್ಯ ಸಂಬಂಧವಾಗಿ ನೀವು ವೈದ್ಯರ ಬಳಿ ತೆರಳಬೇಕಾಗಬಹುದು.

ವೃಷಭ ರಾಶಿ

ಇಂದು ನಿಮಗೆ ದೊಡ್ಡ ಮಟ್ಟದ ಕೆಲಸಗಳಲ್ಲಿ ಶ್ರಮ ಹಾಕಬೇಕಾಗುತ್ತದೆ. ಕಚೇರಿ ಕೆಲಸಗಳಲ್ಲಿ ಸವಾಲುಗಳು ಇರಬಹುದು. ಹಲವು ಸಮಯದಿಂದ ಬಯಸಿದ್ದ ವಸ್ತು ಖರೀದಿಸಲು ಮತ್ತಷ್ಟು ದಿನ ಕಾಯಬೇಕಾಗುತ್ತದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.

July-15-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಸವಾಲಿನ ದಿನ. ನಿಮ್ಮ ಹಣದ ವಿಚಾರವಾಗಿ ಇಂದು ದೊಡ್ಡ ಮಟ್ಟದ ಸವಾಲು ಎದುರಿಸುತ್ತೀರಿ. ಆಪ್ತರೊಬ್ಬರಿಂದ ಬರಬೇಕಿದ್ದ ಹಣಕಾಸು ಸಹಾಯ ಸಿಗದೆ ಇರಬಹುದು. ಕುಟುಂಬಸ್ಥರು ನಿಮ್ಮಿಂದ ಬೇಸರಕ್ಕೊಳಗಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಮನೆಯೊಂದ ಹೊರಗೆ ಕಳೆಯುತ್ತೀರಿ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿರಲಿದೆ. ನಿಮ್ಮ ಆದಾಯದ ಗಮನದಲ್ಲಿಟ್ಟಿಕೊಂಡು ಖರ್ಚುನ್ನು ನಿಭಾಯಿಸಿ. ದಾಂಪತ್ಯದಲ್ಲಿ ಮನಸ್ತಾಪವಿದೆ. ಮಕ್ಕಳ ಓದಿನ ಕುರಿತು ನೀವು ಗಮನಹರಿಸಬೇಕಿದೆ.

ಸಿಂಹ ರಾಶಿ

ಸಿಂಹ ರಾಶಿಯ ಮಂದಿಗೆ ಇಂದು ಸವಾಲಿನ ದಿನ. ನಿಮ್ಮ ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಯಾವುದೇ ಕೆಲಸವನ್ನಾಗಿ ಇಂದು ಬಹಳ ಎಚ್ಚರಿಕೆಯಿಂದ ಮಾಡಿ ಮುಗಿಸಿ. ಹಣಕಾಸು ವಿಚಾರವಾಗಿ ನೆಮ್ಮದಿ ಇದ್ದರೂ ಒತ್ತಡ ಸಹ ಇರಲಿದೆ. ಮನೆಗಾಗಿ ಖರ್ಚು ಮಾಡಬೇಕಾಗಿ ಬರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ. ಓಡಾಟಗಳಲ್ಲಿ ಯಶಸ್ಸು ಸಿಗಲಿದೆ. ಆಸ್ತಿ ಕುರಿತ ವಿಚಾರವಾಗಿ ಧನಾತ್ಮಕ ಬದಲಾವಣೆ ಇರಲಿದೆ. ವ್ಯಾಪಾರಿಗಳಲ್ಲಿ ಪ್ರಗತಿ ನೋಡಬಹುದು. ಆರೋಗ್ಯದ ಕಡೆಗೆ ಗಮನ ಹರಿಸಬೇಕಿದೆ.

ತುಲಾ ರಾಶಿ

ತುಲಾ ರಾಶಿಯವರು ಈ ದಿನ ಬಹಳ ಜಾಗರೂಕರಾಗಿರಬೇಕಿದೆ, ಅದ್ರಲ್ಲೂ ವಾಹನ ಸವಾರರು ಹಾಗೆ ಅಪಾಯಕಾರಿ ಕೆಲಸಗಳಲ್ಲಿ ತೊಡಗುವವರು ಇಂದು ಎಚ್ಚರಿಕೆ ವಹಿಸಿ. ಗೃಹಿಣಿಯರಲ್ಲಿ ಇಂದು ಅಧಿಕ ಖರ್ಚಿನ ದಿನ. ಹಳೆಯ ಅನಾರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ಪರಿಹಾರ ಹುಡುಕುವುದು ಉತ್ತಮ.

ವೃಶ್ಚಿಕ ರಾಶಿ

ಇಂದು ನೀವು ಸಾಲ ಮಾಡಬೇಕಾಗಿ ಬರುವಂತಹ ಸಂದರ್ಭ ಬರಬಹುದು. ಹಾಗೆ ತರಾತುರಿಯಲ್ಲಿ ಯಾವುದೇ ನಿರ್ಧಾರಕ್ಕೆ ಮುಂದಾಗಬೇಡಿ. ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಸಾಮಾನ್ಯ ದಿನ. ಸ್ವಂತ ಉದ್ಯೋಗ ಮಾಡುವವರಿಗೆ ಮಿಶ್ರಫಲವಿದೆ. ದಾಂಪತ್ಯ ಸುಖಕ್ಕಾಗಿ ಸೂಕ್ತ ರೀತಿ ಮಾತುಕತೆ ಅಗತ್ಯವಿದೆ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಅನುಕೂಲಕರ ದಿನವಾಗಲಿದೆ. ನಿಮ್ಮ ಅದೃಷ್ಟ ಖುಲಾಯಿಸುವ ಹಲವು ಕೆಲಸದಲ್ಲಿ ಭಾಗಿಯಾಗುತ್ತೀರಿ. ಹಲವು ರೀತಿಯಾಗಿ ನೀವು ಇಂದು ಒತ್ತಡಕ್ಕೆ ಒಳಗಾಗಬಹುದು. ಕುಟುಂಸ್ಥರಿಂದ ಹಣಕಾಸು ಸಂಬಂಧವಾಗಿ ನೀವು ಒತ್ತಡಕ್ಕೆ ಒಳಗಾಗಬಹುದು.

ಮಕರ ರಾಶಿ

ಮಕರ ರಾಶಿಯವರು ಈ ದಿನ ಬಹಳ ಆರಾಮದಾಯಕ ದಿನ ಎನ್ನಬಹುದು. ನೀವು ಬಯಸಿದಂತೆ ಹಣಕಾಸಿನ ವಿಚಾರಗಳು ನಡೆಯಲಿದೆ. ನಿರುದ್ಯೋಗಿಗಳಿಗೆ ಈ ದಿನ ಬಹಳ ಉತ್ತಮ. ಹಿರಿಯೊಬ್ಬರ ಮಾರ್ಗದರ್ಶನವು ನಿಮ್ಮ ಸಮಸ್ಯೆಯೊಂದಕ್ಕೆ ಪರಿಹಾರ ನೀಡಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ಮಿಶ್ರ ಫಲ ನೋಡುವಿರಿ. ಯಾರೊಂದಿಗೂ ಹಣಕಾಸು ವಿವಾರವಾಗಿ ಚರ್ಚೆ ಅಥವಾ ವಾಗ್ವಾದಕ್ಕೆ ಮುಂದಾಗಬೇಡಿ. ಸಹೋದರರೊಂದಿಗಿನ ಸಂಬಂಧದಲ್ಲಿ ಇಲ್ಲವೆ ಕುಟುಂಬ ಸದಸ್ಯರೊಬ್ಬರಲ್ಲಿ ಮನಸ್ತಾಪ ಮೂಡುವಂತಹ ಘಟನೆಗಳು ನಡೆಯಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಸಮಸ್ಯೆಗಳ ತರುವ ದಿನ. ಗೃಹಿಣಿಯರ ಆದಾಯದಲ್ಲಿ ಹೆಚ್ಚಳ ಆಗಬಹುದು. ಮಕ್ಕಳಿಂದಾಗಿ ನಿಮಗೆ ಚಿಂತೆ ಮಾಡಬೇಕಾದ ಸ್ಥಿತಿ ಬರಬಹುದು. ವಾಹನ ಸಂಬಂಧ ಖರ್ಚು ಮಾಡಬೇಕಾಗಬಹುದು. ಸಾಲ ಮಾಡಿದ್ದರೆ ಅದನ್ನು ತೀರಿಸುವ ಕುರಿತಾಗಿ ಇಂದು ಆಲೋಚಿಸುವುಸು ಉತ್ತಮ.

English summary

July-15-2025-daily-horoscope-prediction-for-12-zodiac-signs-in-kannada

Here is July 15 daily horoscope prediction for 12 zodiac signs read on...
Story first published: Tuesday, July 15, 2025, 5:01 [IST]
X
Desktop Bottom Promotion