Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
Dina Bhavishya: ಜುಲೈ 14ರ ಸೋಮವಾರ ಯಾರ ದಾಂಪತ್ಯದಲ್ಲಿ ಮನಸ್ತಾಪ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 14ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹಲವು ದಿನದಿಂದ ಮಾಡಲು ಯತ್ನಿಸುತ್ತಿದ್ದ ಕೆಲಸ ಫಲದಾಯಕವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು ದೊಡ್ಡ ಒತ್ತಡ ಕಡಿಮೆ ಮಾಡಲಿದೆ. ಹಠಾತ್ ಆರೋಗ್ಯದಲ್ಲಿನ ಏರಿಳಿತವು ನಿಮಗೆ ಸಮಸ್ಯೆ ತರಬಹುದು. ಒಡಹುಟ್ಟಿದವರ ಜೊತೆ ವಾಗ್ವಾದ ಏರ್ಪಡಬಹುದು.
ವೃಷಭ ರಾಶಿ
ಇಂದು ನಿಮಗೆ ಸಂಪತ್ತಿನ ಹೆಚ್ಚಳ ನೋಡಬಹುದು. ನೀವು ಬಯಸಿದ ಕೆಲಸದಲ್ಲಿ ಉತ್ತಮ ಪ್ರಗತಿ ನೋಡುವಿರಿ, ಆದ್ರೆ ವಾಹನ ಸಂಬಂಧ ದೊಡ್ಡ ಹೊಡೆತ ಬೀಳಬಹುದು. ಅದರಲ್ಲಿ ಖರ್ಚು ಹೆಚ್ಚಾಗುವಂತಹ ಕೆಲಸ ನಡೆಯಬಹುದು. ದಾಂಪತ್ಯ ವಿಚಾರವಾಗಿ ಸಮಸ್ಯೆ ಕಾಡಬಹುದು.

ಮಿಥುನ ರಾಶಿ
ಇಂದು ಯಾವುದೇ ಹೂಡಿಕೆ ಮಾಡಲು ಒಳ್ಳೆಯ ದಿನವಾಗಿರುತ್ತದೆ. ಬ್ಯಾಂಕಿಂಗ್ ವಿಚಾರಗಳಲ್ಲು ನಿಮಗೆ ಯಶಸ್ಸು ಸಿಗಬಹುದು. ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ದಿನ. ಹಣಕಾಸು ವಿಚಾರದಲ್ಲಿ ಆಪ್ತರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳುವುದು ಉತ್ತಮ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು.
ಕರ್ಕ ರಾಶಿ
ಇಂದು ನೀವು ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕಾದ ದಿನವಾಗಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳು ಹುಡುಕಿ ಬರಲಿವೆ. ಗೃಹಿಣಿಯರು ಓಡಾಟದಲ್ಲಿ ನಿರತರಾಗಬಹುದು. ನಿಮ್ಮ ಬಹಳ ದಿನದ ಆಸೆ ಈಡೇರಿಸಿಕೊಳ್ಳಬಹುದು. ಸರ್ಕಾರಿ ನೌಕರರಿಗೆ ಇಂದು ಒತ್ತಡದ ದಿನವಾಗಲಿದೆ.
ಸಿಂಹ ರಾಶಿ
ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಅದ್ಭುತ ದಿನವಾಗಿರಲಿದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ವ್ಯಾಪಾರಿಗಳು ಈ ದಿನ ಲಾಭ ಮಾಡಬಹುದು. ಬಹಳ ದಿನಗಳಿಂದ ಒತ್ತಡಕ್ಕೆ ಕಾರಣವಾಗಿದ್ದ ವಿಚಾರದಲ್ಲಿ ನಿರಾಳತೆ ನೋಡುವಿರಿ. ನಿಮ್ಮ ವಹಿವಾಟಿಗೆ ಸಂಬಂಧಿಸಿದ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಿ.
ಕನ್ಯಾ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಒಳ್ಳೆಯ ಚಿಂತನೆಯು ನಿಮಗೆ ಉತ್ತಮ ದಿನ ಲಾಭ ಪಡೆಯಲು ಸಹಾಯ ಮಾಡಲಿದೆ. ಸ್ವಂತ ಉದ್ಯೋಗ ಮಾಡುತ್ತಿದ್ದವರು ಈ ದಿನ ಉತ್ತಮ ದಿನ ನೋಡುವಿರಿ. ಪ್ರಯಾಣಗಳು ಯಶಸ್ಸು ತರಲಿವೆ. ಪ್ರವಾಸಗಳಿಗಾಗಿ ನಿಮ್ಮ ಸಿದ್ಧತೆ ಹೆಚ್ಚಾಗುತ್ತದೆ. ಆರೋಗ್ಯ ಸುಧಾರಿಸಲಿದೆ.
ತುಲಾ ರಾಶಿ
ಇಂದು ನೀವು ಜಾಗರೂಕರಾಗಿರಬೇಕಾದ ದಿನವಾಗಿರುತ್ತದೆ. ಹಣಕಾಸು ವಿಚಾರವಾಗಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಸಾಲ ನೀಡುವುದು, ಅನಗತ್ಯ ಖರ್ಚಿಗೆ ಒಳಗಾಗುವ ಮುನ್ನ ಆಲೋಚಿಸಿ. ದಾಂಪತ್ಯದಲ್ಲಿ ಹಣಕಾಸು ವಿಚಾರದಲ್ಲಿ ಮನಸ್ತಾಪಗಳು ಮೂಡಬಹುದು. ಮಕ್ಕಳ ಕುರಿತಾದ ಚಿಂತೆ ದೂರಾಗಲಿದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಮಿಶ್ರ ಫಲ. ಆದಾಯದಷ್ಟೇ ಖರ್ಚು ಕೂಡ ನೋಡಬಹುದು. ಹಾಗೆ ಮನೆಯ ಸದಸ್ಯರೊಬ್ಬರ ಅನರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಕಡೆ ಗಮನ ಹರಿಸಿ. ಪ್ರೀತಿಯ ವಿಚಾರವಾಗಿಯೂ ನೋವು ಕಾಡಬಹುದು. ಬಹಳ ದಿನಗಳ ನಂತರ ಆಪ್ತರೊಬ್ಬರ ಭೇಟಿ ನಿಮಗೆ ನೆಮ್ಮದಿ ತರಬಹುದು.
ಧನು ರಾಶಿ
ಬಹಳ ಸಮಯದಿಂದ ಯಾರ ಕೈಯಲ್ಲಿ ಸಿಲುಕಿದ್ದ ಹಣವೊಂದು ನಿಮಗೆ ಸೇರಬಹುದು. ನಿಮ್ಮ ಪಂಚೇಂದ್ರಿಯ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ಶುಭ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಗೃಹಿಣಿಯರಲ್ಲಿ ಧನಲಾಭದ ನಿರೀಕ್ಷೆ ಇದೆ.
ಮಕರ ರಾಶಿ
ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ವ್ಯಾಪಾರಿಗಳಲ್ಲಿ ಹೊಸ ರೀತಿಯ ಸಮಸ್ಯೆ ಎದುರಾಗಬಹುದು, ಕೃಷಿ ಚಟುವಟಿಕೆಯ ಆರಂಭಿಸಲು ಇಂದು ನಿಮಗೆ ಉತ್ತಮ ದಿನ. ಅವಿವಾಹಿತರಲ್ಲಿ ಅನಗತ್ಯ ಖರ್ಚು ನೋಡಬಹುದು. ಹಣ ನೀರಿನಂತೆ ಖರ್ಚು ಮಾಡುವ ಮುನ್ನ ಎರಡು ಬಾರಿ ಆಲೋಚಿಸಿ. ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ.
ಕುಂಭ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನ ಎನ್ನಬಹುದು. ನಿಮ್ಮಲ್ಲಿ ಹಲವು ರೀತಿಯ ಹಣಕಾಸು ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಇಂದು ಸೂಕ್ತ ದಿನವಾಗಿರಲಿದೆ. ಕಾಲ ಹರಣದಲ್ಲಿ ಭಾಗಿಯಾಗಬೇಡಿ. ತಂದೆ ತಾಯಿಯ ಕಡೆಯಿಂದ ನಿಮ್ಮ ಕೆಲಸಕ್ಕೆ ಬೆಂಬಲ ಸಿಗಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರ. ನಿಮ್ಮ ಆಸ್ತಿ ಸಂಬಂಧಿತ ವಿಚಾರದಲ್ಲಿ ವೇಗ ಪಡೆಯಲಿದೆ. ಸ್ವಂತ ವಾಹನ ಚಾಲಕರಲ್ಲಿ ಖ್ಚು ಹೆಚ್ಚಾಗಲಿದೆ. ದೂರ ಪ್ರಯಾಣಗಳಲ್ಲಿ ಸುಖ ಇರಲಿದೆ. ಮಕ್ಕಳ ಭವಿಷ್ಯದ ವಿಚಾರವಾಗಿ ಒತ್ತಡ ಅಥವಾ ಚಿಂತೆಯಲ್ಲಿ ನೀವು ಮುಳುಗಬಹುದು.



Click it and Unblock the Notifications