Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 11ರ ಆಷಾಢ ಶುಕ್ರವಾರದಂದು ಯಾರಿಗೆ ಶುಭ ದಿನ
ವೈದಿಕ ಶಾಸ್ತ್ರದ ಪ್ರಕಾರ ಜುಲೈ 11ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಆಡಾಢ ಮಾಸದ 3ನೇ ಶುಕ್ರವಾರ ನಿಮಗೆ ಅತ್ಯುತ್ತಮವಾಗಿರಲಿದೆ. ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಸಿಗಬಹುದು. ಹಾಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸ ಮಾಡಬಹುದು. ಪ್ರಯಾಣಗಳಲ್ಲಿ ಧನಾತ್ಮಕ ಫಲಿತಾಂಶ ನೋಡಬಹುದು. ಖಾಸಗಿ ಸಂಸ್ಥೆ ನೌಕರರಲ್ಲಿ ವೇತನ ಸಂಬಂಧಿ ಸಂತೋಷ ಹೆಚ್ಚಾಗಲಿದೆ.
ವೃಷಭ ರಾಶಿ
ಈ ದಿನ ನೀವು ಸಾಲ ಮುಕ್ತರಾಗಬಹುದು. ಸಂಬಂಧಗಳ ವಿಚಾರವಾಗಿ ನಿಮಗೆ ಬಹಳ ಉತ್ತಮ ದಿನವಾಗುತ್ತದೆ. ಮನೆಗೆ ಹೊಸ ಅತಿಥಿಯ ಆಗಮನವಾಗಬಹುದು. ವ್ಯಾಪಾರಿಗಳು ತರಾತುರಿಯ ನಿರ್ಧಾರ ಷೇರು ಮಾರುಕಟ್ಟೆಗೆ ಸಂಬಂಧಿದ ಜನರಲ್ಲಿ ಇಂದು ಉತ್ತಮ ದಿನವಾಗುತ್ತದೆ.

ಮಿಥುನ ರಾಶಿ
ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿರುತ್ತೀರಿ. ವಾಹನ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ. ಜವಾಬ್ದಾರಿಗಳು ಹೆಚ್ಚಾಗುವುದರಿಂದ ಒತ್ತಡ ಕೂಡ ಹೆಚ್ಚಾಗಲಿದೆ.
ಕರ್ಕ ರಾಶಿ
ಇಂದು ನಿಮಗೆ ಪ್ರಮುಖ ದಿನವಾಗಿರುತ್ತದೆ. ಹಠಾತ್ ಆರ್ಥಿಕ ಲಾಭದಿಂದಾಗಿ ನಿಮ್ಮ ಸಂತೋಷಕ್ಕೆ ಮಿತಿಯಿಲ್ಲ. ಕೌಟುಂಬಿಕ ಸಮಸ್ಯೆ ದೂರಾಗಬಹುದು. ಬಹಳ ಸಮಯದಿಂದ ಖರೀದಿಸಬೇಕಿದ್ದ ವಸ್ತುವೊಂದರ ಕುರಿತಾಗಿ ನಿಮಗೆ ಚಿಂತೆ ಕಾಡಬಹುದು. ವ್ಯಾಪಾರಿಗಳಿಗೆ ಉತ್ತಮ ದಿನ.
ಸಿಂಹ ರಾಶಿ
ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಯಾವುದಾದರೂ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ, ಅವು ಸಹ ಪರಿಹರಿಸಲ್ಪಡುತ್ತವೆ. ನೀವು ನಿಮ್ಮ ಸರ್ಕಾರಿ ಕೆಲಸಕ್ಕಾಗಿ ಓಡಾಡಬೇಕಾಗುತ್ತದೆ. ನಿಮ್ಮ ಪ್ರಗತಿ ಸಂಬಂಧ ಅಡತಡೆ ಕಾಡಬಹುದು. ದೀರ್ಘಕಾಲದ ಯಾವುದಾದರು ಅನಾರೋಗ್ಯದಿಂದ ಮುಕ್ತರಾಗಬಹುದು.
ಕನ್ಯಾ ರಾಶಿ
ಇಂದು ನೀವು ಜಾಗರೂಕರಾಗಿರಬೇಕಾದ ದಿನವಾಗಿರುತ್ತದೆ. ವ್ಯವಹಾರದಲ್ಲಿ ಆತುರಪಡಬೇಡಿ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ವಾಹನ ಸಂಬಂಧವಾಗಿ ಹಾಗೆ ಆಹಾರ ಸಂಬಂಧಿ ಖರ್ಚು ಇರಬಹುದು. ಗೃಹಿಣಿಯರು ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ಮನೆಯಲ್ಲಿ ಒತ್ತಡ ನಿವಾರಣೆಯಾಗಲಿದೆ.
ತುಲಾ ರಾಶಿ
ಆದಾಯ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಬಾಕಿ ಇರುವ ಯಾವುದೇ ಕೆಲಸ ಪೂರ್ಣಗೊಳ್ಳುತ್ತದೆ. ನಿಮಗೆ ಯಾರಿಂದಾದರು ಹಣ ಬರಬೇಕಿದ್ದರೆ ಈ ಸಮಯದಲ್ಲಿ ಪಡೆಯಬಹುದು. ನೀವು ಯಾರ ಬಳಿಯಾದರು ಹಣ ಪಡೆದಿದರೆ ಮರಳಿಸಬೇಕಾಗಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾನ ಕಾಡಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಸಂತೋಷದಾಯಕ ದಿನವಾಗಲಿದೆ. ನೀವು ಹೊಸ ಆಸ್ತಿ ಅಥವಾ ವಸ್ತು ಖರೀದಿಸಬಹುದು. ವ್ಯಾಪಾರಿಗಳಿಗೆ ಇಂದು ಆರಾಮದಾಯಕ ದಿನ. ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಬಹುದು. ಕೆಲಸದ ಕುರಿತು ಗಮನ ಹರಿಸಿ. ಅಮೂಲ್ಯ ವಸ್ತುಗಳ ಖರೀದಿಗಾಗಿ ನೀವು ಹಣ ಒಗ್ಗೂಡಿಸಬೇಕಾಗಬಹುದು.
ಧನು ರಾಶಿ
ಇಂದು ನಿಮಗೆ ಗೌರವ ಹೆಚ್ಚಾಗುತ್ತದೆ. ಶ್ರಮದಾಯಕ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ, ಗೃಹಿಣಿಯರು ಕೆಲಸದ ಸ್ಥಳದಲ್ಲಿ ಇಂದು ಎಚ್ಚರಿಕೆ ವಹಿಸಬೇಕಿದೆ. ಹಣಕಾಸು ವಿಚಾರವಾಗಿ ಇಂದು ಮಿಶ್ರಫಲ ನೀಡುವಂತಹ ದಿನವಾಗಿರಲಿದೆ. ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಅನಗತ್ಯ ಚರ್ಚೆಗಳಿಗೆ ತೊಡಗಬೇಡಿ.
ಮಕರ ರಾಶಿ
ಆಸ್ತಿಯ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಹಲವು ದಿನಗಳಿಂದ ಯಾವುದಾದರು ಇಲಾಖೆ ವಿಚಾರವಾಗಿ ನೀವು ಓಡಾಡುತ್ತಿದ್ದರೆ ಇಂದು ಧನಾತ್ಮಕ ಫಲಿತಾಂಶ ಪಡೆಯಬಹುದು. ಪ್ರಯಾಣಗಳಲ್ಲಿ ನೀವು ತೊಡಗಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳ ಎದುರಿಸಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಸಹೋದರರು ಅಥವಾ ಮನೆಯವರಿಂದ ಹಣಕಾಸು ವಿಚಾರವಾಗಿ ಮನವಿ ಬರಬಹುದು. ವ್ಯಾಪಾರಿಗಳು ದೊಡ್ಡ ಮಟ್ಟದ ಒಪ್ಪಂದ ಅಥವಾ ವ್ಯವಹಾರ ವಿಸ್ತರಣೆಗೆ ಮುಂದಾಗಬೇಡಿ.
ಮೀನ ರಾಶಿ
ಮೀನ ರಾಶಿಯವರು ಬಹಳ ಉತ್ತಮ ದಿನ. ದಿನದ ಆರಂಭದಲ್ಲಿ ನಿಮಗೆ ಧನಲಾಭದ ನಿರೀಕ್ಷೆ ಇಡಬಹುದು. ದೊಡ್ಡ ಮಟ್ಟದಲ್ಲಿ ಶ್ರಮ ಹಾಕುವುದು ದಿನದ ಅಂತ್ಯದಲ್ಲಿ ಆಯಾಸಕ್ಕೆ ಕಾರಣವಾಗಬಹುದು, ಪ್ರೀತಿಯ ವಿಚಾರದಲ್ಲಿ ನಿಮಗೆ ಉತ್ತಮ ದಿನವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ.



Click it and Unblock the Notifications