Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಜುಲೈ 10ರ ಗುರುವಾರ ಈ ರಾಶಿಯವರಿಗೆ ವಾಹನ ಸಂಬಂಧಿ ಸಮಸ್ಯೆ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 10ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮಗೆ ಕೆಲವು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನೀವು ಕುಟುಂಬ ಸದಸ್ಯರೊಂದಿಗೆ ವಾದಕ್ಕೆ ಇಳಿಬಹುದು. ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತದೆ. ಅತಿಥಿಯೊಬ್ಬರು ನಿಮ್ಮ ಮನೆಗೆ ಬರಬಹುದು. ಹೊಸದನ್ನು ಮಾಡಲು ನೀವು ಮಾಡುವ ಪ್ರಯತ್ನಗಳು ಹೆಚ್ಚು ಉತ್ತಮವಾಗಿರುತ್ತವೆ. ಆರೋಗ್ಯ ಕಡೆ ಗಮನವಿಡಿ.
ವೃಷಭ ರಾಶಿ
ಇಂದು ನಿಮಗೆ ಬಹಳ ಉತ್ತಮ ದಿನವಾಗಿರಲಿದೆ. ಹಣಕಾಸು ವಿಚಾರವಾಗಿ ನೀವು ಅಂದುಕೊಂಡಂತೆ ಪ್ರಗತಿ ನೋಡಬಹುದು. ಬೇರೆಯವರಿಗೆ ಹಣಕಾಸಿನ ನೆರವು ನೀಡಬಹುದು. ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ, ಅದರಿಂದ ಹಿಂದೆ ಸರಿಯಬೇಡಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗಬಹುದು.

ಮಿಥುನ ರಾಶಿ
ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ. ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಬಾಕಿ ಉಳಿಸಿಕೊಂಡ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗಿ. ನೆರೆ ಹೊರೆಯವರೊಂದಿಗೆ ಈ ದಿನ ವೈಷಮ್ಯ ಅಥವಾ ಮನಸ್ತಾಪ ಮೂಡಬಹುದು. ಪ್ರೀತಿಯ ವಿಚಾರವಾಗಿ ಇಂದು ಉತ್ತಮ ಆಗಿರಲಿದೆ.
ಕರ್ಕ ರಾಶಿ
ಇಂದು ನೀವು ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಅನಗತ್ಯ ಚರ್ಚೆಗಳು, ವಾದಗಳು, ಅಥವಾ ನಿಮಗೆ ಸಂಬಂಧಿಸದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಕುಟುಂಬ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಲಿದೆ. ವ್ಯಾಪಾರಿಗಳು ತಮ್ಮ ಆಲೋಚನೆಯಲ್ಲಿ ಮುಂದುವರೆಯಬಹುದು.
ಸಿಂಹ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಏಕೆಂದರೆ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಅವಕಾಶವನ್ನು ಬಿಟ್ಟುಕೊಡಬಾರದು. ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಪಡೆಯಬಹುದು. ದಾಂಪತ್ಯದಲ್ಲಿ ಶಾಂತಿ ಇರಲಿದೆ.
ಕನ್ಯಾ ರಾಶಿ
ಇಂದು ನಿಮಗೆ ಕೆಲವು ದೊಡ್ಡ ಕೆಲಸಗಳು ಎದುರಾಗಲಿವೆ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಗೆ ಮುಂದಾಗಬಹುದು. ಖರ್ಚುಗಳನ್ನು ನೀವು ನಿಭಾಯಿಸಬೇಕಾಗುತ್ತದೆ. ಕುಟುಂಬಸ್ಥರೊಂದಿಗೆ ಪ್ರವಾಸ ತೆರಳುವ ಆಲೋಚನೆಯಲ್ಲಿರಬಹುದು. ಸಾಲ ತೀರುಸುವ ಕೆಲಸ ಮಾಡಬಹುದು.
ತುಲಾ ರಾಶಿ
ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಮನೆಯಲ್ಲಿ ಹೊಸ ವಸ್ತು ಖರೀದಿಗೆ ಚರ್ಚೆ ಮಾಡಬಹುದು. ಬೇರೆಯವರ ವಾಹನ ಚಲಾಯಿಸುವುದು ತಪ್ಪಿಸುವುದು ಉತ್ತಮ.
ವೃಶ್ಚಿಕ ರಾಶಿ
ಇಂದು ನೀವು ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವ ದಿನವಾಗಿರುತ್ತದೆ. ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಇಂದು ಬಹಳ ಖರ್ಚು ಉಂಟಾಗಬಹುದು. ನಿಮ್ಮದಲ್ಲದ ವಿಚಾರವಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ಗೃಹಿಣಿಯರಲ್ಲಿ ಹಣ ಖರ್ಚು ಹೆಚ್ಚಾಗಬಹುದು.
ಧನು ರಾಶಿ
ಇಂದು ನೀವು ಕಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ದಿನವಾಗಿರುತ್ತದೆ. ವ್ಯವಹಾರಿಕ ಈ ದಿನ ಬಹಳ ಉತ್ತಮ ದಿನವಾಗಿರಲಿದೆ. ಕುಟುಂಬದ ಸದಸ್ಯರ ಆರೋಗ್ಯ ಕ್ಷೀಣಿಸುವುದರಿಂದ ನೀವು ಒತ್ತಡದಿಂದ ಕೂಡಿರುತ್ತೀರಿ. ಕೆಲಸದಲ್ಲಿ ಶ್ರಮ ಹಾಕಬೇಕಾಗುತ್ತದೆ. ಪ್ರಯಾಣದಲ್ಲಿ ಉತ್ತಮ ಫಲಿತಾಂಶ ಇರುವುದಿಲ್ಲ.
ಮಕರ ರಾಶಿ
ಇಂದು ನಿಮಗೆ ಸಂತೋಷದಿಂದ ಕೂಡಿದ ದಿನವಾಗಲಿದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಮಾತುಗಳ ಕೇಳಬಹುದು, ಪ್ರಯಾಣ ಮಾಡುವವರು ಎಚ್ಚರದಿಂದ ಇರಬೇಕು. ವರ್ಗಾವಣೆ, ಬಡ್ತಿ ವಿಚಾರದಲ್ಲಿ ಶುಭಕರ ದಿನವಾಗಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಲ್ಲಿ ಉತ್ತಮ ದಿನವಾಗುತ್ತಿದೆ. ನಿಮ್ಮ ದೈನಂದಿನ ಕಲಸಗಳಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು., ಅವಿವಾಹಿತರಿಗೆ ಧನಲಾಭದ ನಿರೀಕ್ಷೆ ಇದೆ. ವಾಹನ ಸಂಬಂಧವಾಗಿ ಬಹಳ ಎಚ್ಚರಿಕೆ ಅಗತ್ಯ. ನಿಮ್ಮ ಹಳೆಯ ಅನಾರೋಗ್ಯದಿಂದ ಮತ್ತೆ ಸಮಸ್ಯೆ ಕಾಡಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ. ನಿಮ್ಮ ಆಸೆಯಂತೆ ಉಳಿತಾಯಕ್ಕೆ ಮುಂದಾಗಬಹುದು, ಇದು ನಿಮ್ಮಲ್ಲಿ ಹಣಕಾಸು ವಿಚಾರವಾಗಿ ಬಹಳ ಸಂತಸಕ್ಕೆ ಕಾರಣವಾಗಲಿದೆ. ಆಪ್ತರ ಭೇಟಿಯಿಂದ ನಿಮಗೆ ಅನುಕೂಲ ಇರಲಿದೆ.



Click it and Unblock the Notifications