Dina Bhavishya: ಜುಲೈ 09ರ ಬುಧವಾರ ಯಾರಿಗೆ ಸಂಕಷ್ಟಕರ ದಿನ!

ವೈದಿಕ ಶಾಸ್ತ್ರದ ಪ್ರಕಾರ ಜುಲೈ 09ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮಗೆ ಗೌರವ ಮತ್ತು ಸ್ವಾಭಿಮಾನ ಹೆಚ್ಚಾಗುವಂತಹ ದಿನವಾಗಿರಲಿದೆ. ನಿಮ್ಮಲ್ಲಿ ಸಂತೋಷದ ಕ್ಷಣಗಳಿಗೆ ಕಾರಣವಾಗುವಂತಹ ಹಲವು ವಿವಾರಗಳ ನೋಡುವಿರಿ. ನಿಮ್ಮ ಮಕ್ಕಳ ಕುರಿತಾದ ವಿಚಾರದಲ್ಲಿ ನಿಮಗೆ ಅತ್ಯಧಿಕ ಸಂತೋಷ ಲಭಿಸಲಿದೆ. ಆರ್ಥಿಕ ವಿಚಾರಗಳಲ್ಲಿ ಹಿನ್ನಡೆ ಅನುಭವಿಸಬಹುದು. ಜವಾಬ್ದಾರಿಗಳು ಹೆಚ್ಚಾಗಬಹುದು.

ವೃಷಭ ರಾಶಿ

ಇಂದು ವ್ಯವಹಾರಗಳ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕಾದ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲಸದ ಬಗ್ಗೆ ನೀವು ನಿಮ್ಮ ಅಧಿಕಾರಿಗಳೊಂದಿಗೆ ಮನಸ್ತಾಪ ಮೂಡದಂತೆ ನೋಡಿಕೊಳ್ಳಿ. ನಿಮ್ಮ ಆಲೋಚನೆ ಹಾಗೂ ಕೆಲಸಗಳಿಗೆ ಕುಟುಂಬಸ್ಥರಿಂದ ಬೆಂಬಲ ಸಿಗಲಿದೆ. ದೂರ ಪ್ರಯಾಣದಲ್ಲಿ ಶುಭವಿದೆ.

July-09-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಉತ್ತಮವಾಗಲಿದೆ. ಇಂದು ನೀವು ಪಾಲುದಾರಿಕೆಯಲ್ಲಿ ಕೆಲವು ಕೆಲಸಗಳನ್ನು ಮಾಡುವ ದಿನವಾಗಿರುತ್ತದೆ. ಕುಟುಂಬದಲ್ಲಿ ಯಾವುದೇ ಸದಸ್ಯರೊಂದಿಗೆ ಬಿರುಕು ಇದ್ದರೆ ಅದು ಸಹ ಪರಿಹರಿಸಲ್ಪಡುತ್ತದೆ. ಹಣಕಾಸಿನ ವಿಚಾರವಾಗಿ ಎಚ್ಚರಿಕೆಯಿಂದ ಇರಿ. ಮೂಳೆ ಸಂಬಂಧಿ ನೋವು ಕಾಡಬಹುದು.

ಕರ್ಕ ರಾಶಿ

ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ನೀವು ಸರ್ಕಾರಿ ಕೆಲಸದಲ್ಲಿದ್ದರೆ ಈ ದಿನ ಬಹಳ ಸಮಸ್ಯೆ ಎದುರಾಗಬಹುದು. ಮನೆಗೆ ಹೊಸ ವಸ್ತು ಖರೀದಿಸುವ ಆಲೋಚನೆ ಮತ್ತೆ ಮುಂದೂಡುತ್ತೀರಿ. ತಂದೆ ತಾಯಿಯ ಮಾತಿನ ವಿರುದ್ಧವಾಗಿ ನಡೆದುಕೊಳ್ಳಬೇಡಿ. ದೇವಾಲಯ ಭೇಟಿಯ ಸಾಧ್ಯತೆ ಇದೆ.

ಸಿಂಹ ರಾಶಿ

ಇಂದು ನಿಮಗೆ ಮಿಶ್ರ ದಿನವಾಗಲಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಸ್ನೇಹಿತರು ಆಪ್ತರಿಂದ ಹಣಕ್ಕಾಗಿ ಮನವಿ ಬರಬಹುದು. ಆಹಾರ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಕೆಲಸದಲ್ಲಿನ ಸಮಸ್ಯೆಗಳ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ಸಣ್ಣಪುಟ್ಟ ವಿಚಾರಗಳಲ್ಲಿ ಹಠ ಹಿಡಿದು ಕೂರಬೇಡಿ.

ಕನ್ಯಾ ರಾಶಿ

ಇಂದು ನೀವು ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಗಮನ ಕೊಡಬೇಕಾದ ದಿನವಾಗಿರುತ್ತದೆ. ವ್ಯವಹಾರ ಸಂಬಂಧ ಸಮಸ್ಯೆಗಳ ಇಂದು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಇಂದು ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ಆಧ್ಯಾತ್ಮಿಕ ವಿಚಾರದಲ್ಲಿ ಇಂದು ಉತ್ತಮ ದಿನ.

ತುಲಾ ರಾಶಿ

ತುಲಾ ರಾಶಿಯ ಮಂದಿ ಇಂದು ಶುಭ ಕೆಲಸಗಳಲ್ಲಿ ಇಂದು ತೊಡಗುತ್ತೀರಿ. ವ್ಯಾಪಾರಿಗಳು ಇಂದು ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಮನಸ್ತಾಪ ಇರಲಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಇಂದು ಅವಕಾಶಗಳು ಬರಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಕೆಲಸದ ಬಗ್ಗೆ ಕೆಲವು ಸಲಹೆಗಳನ್ನು ನೀಡಬಹುದು. ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಲಾಭದಾಯಕ ದಿನ ಎನ್ನಬಹುದು. ಮಕ್ಕಳ ಕುರಿತ ಚಿಂತೆ ದೂರಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ.

ಧನು ರಾಶಿ

ಇಂದು ನಿಮಗೆ ಆದಾಯ ಹೆಚ್ಚಾಗುವ ದಿನವಾಗಿರುತ್ತದೆ. ವ್ಯಾಪಾರಿಗಳಿಗೆ ಲಾಭಕರ, ಉದ್ಯೋಗಿಗಳು ಬೇರೆ ಮೂಲದಿಂದ ಆದಾಯ ಪಡೆಯಲು ಇಂದು ಶುಭಕರ ದಿನ. ಗೃಹಿಣಿಯರಲ್ಲಿ ಸಮಸ್ಯೆಗಳು ನಿವಾರಣೆ ಆಗುವ ದಿನ. ಮಕ್ಕಳ ಆರೋಗ್ಯದ ಕಡೆ ಗಮನವಿಡಿ. ಕೆಲಸ ಸಂಬಂಧ ನೀವು ಪ್ರಯಾಣಿಸಬೇಕಾಗಬಹುದು.

ಮಕರ ರಾಶಿ

ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಬರಲಿವೆ. ನೀವು ಬಯಸದಿದ್ದರೂ ಕೆಲವು ಖರ್ಚುಗಳನ್ ಎದುರಿಸಬೇಕಾಗುತ್ತದೆ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ. ಕೃಷಿಕರಲ್ಲಿ ಲಾಭದಾಯಕ ದಿನ. ವಾಹನ ಸವಾರರು ಎಚ್ಚರ ವಹಿಸಿ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ, ನಿಮ್ಮ ಹಲವು ಕೆಲಸಗಳಲ್ಲಿ ಇಂದು ಲಾಭ ನೋಡುವ ದಿನ. ದೊಡ್ಡ ಕೆಲಸಗಳಲ್ಲಿ ನಿಮಗೆ ಕಷ್ಟಗಳು ಎದುರಾಗುತ್ತವೆ. ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಮಕ್ಕಳ ಕುರಿತ ತುಸು ಹೆಚ್ಚು ಗಮನವಿಡಿ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ಇಂದು ನಿಮ್ಮ ದೈನಂದಿನ ಕೆಲಸದಲ್ಲಿ ಅಡೆತಡೆ ನೋಡಬಹುದು. ಹಣಕಾಸು ವಿಚಾರವಾಗಿ ಆತುರದ ನಿರ್ಧಾರಗಳಿಗೆ ಮುಂದಾಗಬೇಡಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ನೀವು ಒಳಗಾಗುವ ಸಾಧ್ಯತೆ ಇದೆ.

English summary

July-09-2025-daily-horoscope-prediction-for-12-zodiac-signs-in-kannada

Here is July 09 daily horoscope prediction for 12 zodiac signs read on...
Story first published: Tuesday, July 8, 2025, 21:05 [IST]
X
Desktop Bottom Promotion