Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
Dina Bhavishya: ಜುಲೈ 08ರ ಮಂಗಳವಾರ ಯಾರಿಗೆ ಶುಭ ತರುವ ದಿನ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 08ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಉತ್ತಮವಲ್ಲ. ನಿಮ್ಮ ಹಣಕಾಸು ವಿಚಾರವಾಗಿ ಬಹಳ ಕಠಿಣ ದಿನ. ಇಷ್ಟು ದಿನಗಳಿಂದ ಇದ್ದ ಆದಾಯ ಮೂಲವೊಂದು ಕೈ ತಪ್ಪಬಹುದು. ಇಲ್ಲವೆ ಬರಬೇಕಿದ್ದ ಹಣಕಾಸು ಬೇರೆಯವರ ಕೈಯಲ್ಲಿ ಸಿಲುಕಬಹುದು. ವ್ಯಾಪಾರಿಗಳಿಗೆ ಈ ಸಮಯದಲ್ಲಿ ಲಾಭದಾಯಕ ಆಗದೆ ಇರಹುದು. ವಾಹನ ಮಾಲಿಕರಲ್ಲಿ ಖರ್ಚು ಹೆಚ್ಚಾಗಲಿದೆ.
ವೃಷಭ ರಾಶಿ
ಈ ರಾಶಿಯವರಿಗೆ ಈ ದಿನ ಬಹಳ ಓಡಾಟದಿಂದ ಕೂಡಿರಲಿದೆ. ಹೂಡಿಕೆಗಳಲ್ಲಿ ಹೆಚ್ಚಿನ ಹಣ ತೊಡಗಿಸಲು ನೀವು ಮುಂದಾಗುತ್ತೀರಿ. ವೈಯಕ್ತಿಕ ಕಾರಣಗಳಿಂದ ನಿಮಗೆ ಒತ್ತಡ ಹೆಚ್ಚಾಗುವ ದಿನ. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗಲಿದೆ. ವಯಸ್ಸಾದ ಮಂದಿಗೆ ಆರೋಗ್ಯದಲ್ಲಿ ಏರುಪೇರು ಸಂಭವ.

ಮಿಥುನ ರಾಶಿ
ಮಿಥುನ ರಾಶಿಯರಿಗೆ ಈ ದಿನ ಬಹಳ ಕಠಿಣ ಸವಾಲುಗಳು ಎದುರಾಗಬಹುದು, ಇಡೀ ದಿನ ಒತ್ತಡ ಹಾಗೂ ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗಬಹುದು. ದೊಡ್ಡ ಕೆಲಸಗಳು ನಿಮಗೆ ಕಠಿಣವಾಗಬಹುದು. ಬ್ಯಾಂಕಿಂಗ್, ಫೈನಾನ್ಸ್‌ನಲ್ಲಿ ಯಶಸ್ಸು ಮತ್ತಷ್ಟು ಬಿಳಂಬವಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನ ಮಿಶ್ರ ಫಲವಿದೆ. ಅನಗತ್ಯ ವಿಚಾರದಲ್ಲಿ ಖರ್ಚು ಇರಲಿದೆ. ನಿಮ್ಮ ನಿತ್ಯದ ಕೆಲಸ ಕಾರ್ಯದಲ್ಲಿ ಅಡೆತಡೆಗಳ ಎದುರಿಸುತ್ತೀರಿ. ವ್ಯಾಪಾರ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು. ಅನಗತ್ಯ ಖರ್ಚುಗಳ ಕಡಿಮೆ ಮಾಡುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಶುಭಕರವಾಗಿರಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನೋಡಬಹುದು. ಕುಟುಂಬಸ್ಥರ ಕಡೆಯಿಂದ ಒತ್ತಡ ಇರಲಿದೆ. ಹಣ ಖರ್ಚು ಮಾಡುವ ಮುನ್ನ ಎಚ್ಚರಿಕೆ ಅಗತ್ಯ. ಬಾಕಿ ಉಳಿದಿರುವ ಕೆಲಸಗಳ ಪೂರ್ಣ ಮಾಡಿ. ಉದ್ಯೋಗಿಗಳಿಗೆ ಶುಭ ಸುದ್ದಿ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಮಿಶ್ರ ಫಲ ಇರಲಿದೆ. ಇಡೀ ದಿನ ಶ್ರಮದಾಯಕ ಕೆಲಸ ಇರಲಿದೆ. ಗೃಹಿಣಿಯರು ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಆಸ್ತಿ ವಿಚಾರದಲ್ಲಿ ನಿಮಗೆ ಗೊಂದಲ ಕಾಡಬಹುದು. ಸ್ವಂತ ಉದ್ಯಮ ಮಾಡುವವರಿಗೆ ಈ ದಿನ ಬಹಳ ಉತ್ತಮ.
ತುಲಾ ರಾಶಿ
ತುಲಾ ರಾಶಿಯವರಿಗೆ ಬಹಳ ಅನುಕೂಲಕರ ದಿನ ಎನ್ನಬಹುದು. ಕುಟುಂಬಸ್ಥರೊಂದಿಗೆ ನೀವು ದೇವಾಲಯ ಭೇಟಿಯ ಸಾಧ್ಯತೆ ಇದೆ. ಆಪ್ತರೊಬ್ಬರಿಂದ ಹಣಕಾಸು ಸಹಾಯ ಪಡೆಯಬಹುದು. ನಿಮ್ಮ ಪಾಲುದಾರಿಕೆ ವ್ಯವಹಾರವು ದೊಡ್ಡ ಲಾಭದತ್ತ ತಿರುಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಲಿದ್ದೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಬಹಳ ಸಮಯ ಪ್ರಯಾಣದಲ್ಲಿ ಕಳೆಯುತ್ತೀರಿ. ಸಹೋದರರೊಂದಿಗಿನ ಮನಸ್ತಾಪ ದೊಡ್ಡೆದಾಗುವ ಘಟನೆಗಳು ನಡೆಯಬಹುದು. ಪ್ರೀತಿಯ ವಿಚಾರದಲ್ಲಿ ಸಮಸ್ಯಾತ್ಮಕ ದಿನವಾಗಿರಲಿದೆ. ನವವಿವಾಹಿತರಿಗೆ ಇಂದು ಶುಭ ಸುದ್ದಿ ಇದೆ. ಸರ್ಕಾರಿ ಕೆಲಸ ಮಾಡುವವರು ಹೊಸ ರೀತಿಯ ಜವಾಬ್ದಾರಿಯಿಂದ ಸಮಸ್ಯೆಗಳ ಎದುರಿಸಬಹುದು.
ಧನು ರಾಶಿ
ಧನು ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಆದಾಯ ಹೆಚ್ಚಾಗುವ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಯಾರ ಬಳಿಯೂ ಸಾಲ ಮಾಡದೆ ಇರುವುದು ಉತ್ತಮ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ದೊಡ್ಡ ಸವಾಲು ಎದುರಾಗಬಹುದು. ಆದ್ರೆ ನಿಮ್ಮ ಕಠಿಣ ಶ್ರಮದ ಕಾರಣದಿಂದಾಗಿ ಸವಾಲುಗಳ ಸೂಕ್ತವಾಗಿ ಎದುರಿಸುತ್ತೀರಿ. ಹಣಕಾಸಿನ ವಿಚಾರವಾಗಿ ನಿಮಗೆ ಉತ್ತಮ ದಿನವಲ್ಲ. ಅನಗತ್ಯ ಖರ್ಚುಗಳಿಗೆ ಒಳಗಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ನಿತ್ಯದ ಕೆಲಸವೊಂದನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಬಹುದು. ಹಣಕಾಸು ವಿಚಾರವಾಗಿ ನಿರ್ಕಕ್ಷ ಮಾಡಬೇಡಿ. ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಸಿಗದೆ ಇರಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಶ್ರಮದಾಯಕ ದಿನ. ನಿಮ್ಮ ಕೆಲಸದಲ್ಲಿ ಬಹಳಷ್ಟು ಕಷ್ಟಗಳು ಎದುರಾಗಬಹುದು. ನಿಯಮಿತ ವಿಶ್ರಾಂತಿ ಪಡೆಯಿರಿ. ವಾಹನ ಸವಾರರು ಎಚ್ಚರಿಕೆ ವಹಿಸಿ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವ.



Click it and Unblock the Notifications











