Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Dina Bhavishya: ಜುಲೈ 07ರ ಸೋಮವಾರ ನಿಮಗೆ ಯಾವ ರೀತಿ ಶುಭ ತರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 07ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಇಂದು ಹಲವು ವಿಚಾರದಲ್ಲಿ ನಿಮ್ಮ ನಿರ್ಧಾರ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು. ಈ ದಿನ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಬೇಕಿದೆ. ಆರೋಗ್ಯದ ಕಡೆ ಗಮನವಿಡಿ.
ವೃಷಭ ರಾಶಿ
ಇಂದು ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಏರಿಳಿತದ ಪರಿಸ್ಥಿತಿ ಇರಲಿದೆ. ಹೊಸ ಹೂಡಿಕೆ ಹೊಸ ಖರ್ಚುಗಳ ಮಾಡಲು ಹೋಗಬೇಡಿ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಕುಟುಂಬದಲ್ಲಿರುವ ಭಿನ್ನಾಭಿಪ್ರಾಯ ಕೊನೆಗೊಳ್ಳುತ್ತವೆ. ಬಹಳ ಕಾಲದಿಂದ ಬಾಕಿ ಉಳಿಸಿದ ಕೆಲಸವನ್ನು ಪೂರ್ಣ ಮಾಡುವಿರಿ.

ಮಿಥುನ ರಾಶಿ
ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಈ ದಿನ ಅದರ ಪರವಾಗಿ ಅಥವಾ ಅದರ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಹಣಕಾಸು ವಿಚಾರವಾಗಿ ಆಪ್ತರಿಂದ ಉತ್ತಮ ಸಹಾಯ ಪಡೆಯಲಿದ್ದೀರಿ. ಸಣ್ಣ ಅನಾರೋಗ್ಯಗಳ ನಿರ್ಲಕ್ಷ್ಯ ಮಾಡಬೇಡಿ. ಮಕ್ಕಳ ಕುರಿತ ಚಿಂತೆ ದೂರಾಗಲಿದೆ.
ಕರ್ಕ ರಾಶಿ
ಈ ಕರ್ಕ ರಾಶಿಗೆ ಮಿಶ್ರ ಫಲದ ದಿನ. ನೀವು ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ತಾಳ್ಮೆಯಿಂದ ಎಲ್ಲಾ ಸಮಸ್ಯೆಗಳ ಎದುರಿಸಿ, ಅನಗತ್ಯ ಚರ್ಚೆಯಿಂದ ಸಮಸ್ಯೆ ಉದ್ಭವಿಸಬಹುದು. ವ್ಯಾಪಾರ ಹಾಗೂ ಪಾಲುದಾರಿಯಲ್ಲಿ ಉತ್ತಮ ದಿನವಾಗಿ ನೋಡಬಹುದು. ತಂದೆ ತಾಯಿಯ ಕೆಲಸದಲ್ಲಿ ಸಹಾಯ ಮಾಡುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಸವಾಲಿನ ದಿನ ಆಗಬಹುದು. ಹಣಕಾಸಿನ ಸ್ಥಿತಿ ನೀವು ಬಯಸಿದಂತೆ ಇರುವುದಿಲ್ಲ. ನಿಮಗೆ ಬರಬೇಕಿದ್ದ ಹಣ ವಿಳಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ ಕಾಡಬಹುದು. ಪೂರ್ವ ನಿಯೋಜಿತ ಕೆಲಸ ತೃಪ್ತಿಕರ ಫಲಿತಾಂಶ ನೀಡದೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಹಲವು ರೀತಿಯಲ್ಲಿ ಲಾಭ ಮಾಡುವ ದಿನ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿದೆ. ರಿಯಲ್ ಎಸ್ಟೇಟ್, ಆಸ್ತಿ ಖರೀದಿ, ನಿವೇಶನ ಮಾರಾಟಗಾರರಿಗೆ ಲಾಭಗವಿದೆ. ಕೆಲಸದಲ್ಲಿನ ಒತ್ತಡ ನಿಮ್ಮಲ್ಲಿ ಅಶಾಂತಿಗೆ ಕಾರಣವಾಗಬಹುದು. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು.
ತುಲಾ ರಾಶಿ
ನೀವಿಂದು ಕೆಲಸದ ವಿಚಾರದಲ್ಲಿ ಬಹಳ ಒತ್ತಡಕ್ಕೆ ಒಳಗಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಹಣಕಾಸು ವಿಚಾರದಲ್ಲಿ ಅಡೆತಡೆ ಇರಬಹುದು. ವಾಹನ ಸವಾರರು ಎಚ್ಚರಿಕೆ ವಹಿಸಿ. ಮೂಳೆ ಸಂಬಂಧಿ ಅನಾರೋಗ್ಯ ಕಾಡಬಹುದು. ದಾಂಪತ್ಯ ವಿಚಾರದಲ್ಲಿ ಜಗಳ ನಡೆಯುವ ಸಂಭವವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಶುಭ ಹಾಗೂ ಅಶುಭದಿಂದ ಕೂಡಿರಲಿದೆ. ಹೋಟೆಲ್ ಉದ್ಯಮದಲ್ಲಿದ್ದರೆ ನಿಮಗೆ ಲಾಭ ಹೆಚ್ಚು, ಆದರೆ ಈ ದಿನ ಖರ್ಚು ಸಹ ಹೆಚ್ಚಾಗಲಿದೆ. ಮನೆಯ ಸದಸ್ಯರೊಬ್ಬರ ವಿಚಾರವಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ಮನೆಗೆ ವಸ್ತುಗಳ ಖರೀದಿಸಬಹುದು. ಪ್ರಯಾಣಗಳಲ್ಲಿ ಅಶುಭ ಸುದ್ದಿ ಇರಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಆದರೆ ಇಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಪರಿಹರಿಸಿಕೊಳ್ಳುವುದು ಸೂಕ್ತ. ದೊಡ್ಡ ಖರ್ಚುಗಳಿಂದ ದೂರ ಉಳಿಯುವುದು ಸೂಕ್ತ. ಸಹೋದರರೊಂದಿಗೆ ಮನಸ್ತಾಪ ಮೂಡಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಮಿಶ್ರ ಫಲವಾಗಿರಲಿದೆ. ಈ ದಿನ ಹಣಕಾಸಿನ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ವೆಚ್ಚಗಳು ಆದಾಯವನ್ನು ಮೀರಬಹುದು. ನಿಮಗೆ ಬರಬೇಕಿದ್ದ ಹಣ ಮತ್ತಷ್ಟು ಅಡೆತಡೆಗೆ ಸಿಲುಕಬಹುದು. ಪ್ರಯಾಣಗಳಲ್ಲಿ ತೃಪ್ತಿ ಇರುವುದಿಲ್ಲ, ವ್ಯವಹಾರದಲ್ಲಿನ ಗೊಂದಲ ನಿಮಗೆ ಒತ್ತಡ ತರಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ದಿನ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬೇಕಾಗುತ್ತದೆ. ಪ್ರಯಾಣಗಳು ನಿಮಗೆ ಶುಭ ತರಲಿವೆ. ಪ್ರೀತಿಯ ವಿಚಾರದಲ್ಲಿ ನಿಮಗೆ ಅನಿರೀಕ್ಷಿತ ದಿನ ಎನ್ನಬಹುದು. ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೋಡಬಹುದು, ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಇಂದು ಉತ್ತಮ ದಿನವಾಗಿರಲಿದೆ.
ಮೀನ ರಾಶಿ
ಈ ದಿನ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಗಮನಹರಿಸಿದರೆ, ಅದು ನಿಮಗೆ ಉತ್ತಮವಾಗಿರುತ್ತದೆ. ನಿತ್ಯದ ಕೆಲಸಕ್ಕೆ ಗೈರಾಗಬೇಡಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ದೊಡ್ಡ ಬದಲಾವಣೆ ನೋಡಬಹುದು.



Click it and Unblock the Notifications











