Dina Bhavishya: ಜುಲೈ 06ರ ಭಾನುವಾರವು ಯಾರಿಗೆ ಶುಭಕರ ದಿನ?

ವೈದಿಕ ಶಾಸ್ತ್ರದ ಪ್ರಕಾರ ಜುಲೈ 06ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಬಹಳ ಉತ್ತಮ ದಿನ. ನಿಮ್ಮ ಸಂಬಂಧಿಕರಿಂದ ದೊಡ್ಡ ಸಹಾಯದ ನಿರೀಕ್ಷೆ ಇಡಬಹುದು. ನಿಮ್ಮ ಕೆಲಸಗಳಲ್ಲಿ ಬಹುಪಾಲು ನಿಮಗೆ ಯಶಸ್ಸು ಸಿಗಲಿದೆ. ಪ್ರಯಾಣಗಳು ಸುಖಕರವಾಗಿರಲಿದೆ. ಎಲೆಟ್ರಾನಿಕ್ ವಸ್ತುಗಳಿಂದ ಸಮಸ್ಯೆಗಳು ಬರಬಹುದು.

ವೃಷಭ ರಾಶಿ

ವೃಷಭ ರಾಶಿಯ ಮಂದಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕತೆ ಇರಲಿದೆ. ಬಹಳ ಸಮಯದಿಂದ ನೀವು ಬಯಸಿದ ಕೆಲಸವೊಂದು ಪರಿಣಾಮಕಾರಿಯಾಗಿ ಮುಗಿಯಲಿದೆ. ನಿಮ್ಮ ಕೆಲಸಗಳಲ್ಲಿನ ಅಡೆತಡೆ ನಿವಾರಣೆಯಾಗಲಿದೆ. ಹೊಸದಾಗಿ ನೀವು ಉದ್ಯೋಗ ಹುಡುಕುತ್ತಿದ್ದರೆ ಉತ್ತಮ ಅವಕಾಶ ಪಡೆಯುವ ಸಾಧ್ಯತೆ ಇದೆ.

July-06-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಇರಲಿದೆ. ಹಾಗೆ ನಿಮಗೆ ದೊಡ್ಡ ನಿರ್ಧಾರಗಳಿಂದಲೂ ಕೆಲಸ ಸಂಬಂಧಿ ಅಡೆತಡೆಗಳು ಇರಬಹುದು. ಆರ್ಥಿಕವಾಗಿ ನಿಮಗೆ ಇಂದು ಉತ್ತಮವಲ್ಲ. ವ್ಯಾಪಾರದಲ್ಲಿ ಸಾಮಾನ್ಯ ದಿನ ಆಗಿರಲಿದೆ. ಮಕ್ಕಳ ಸಂಬಂಧಿ ಚಿಂತೆಯೊಂದು ದೂರಾಗಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನ ಸಮಾನ್ಯವಾಗಿರಲಿದೆ. ಕೆಲಸದಲ್ಲಿ ಎಂದಿನಂತೆ ಒತ್ತಡ ಇರಲಿದೆ. ನಿಮ್ಮ ದಾಂಪತ್ಯ ವಿಚಾರವಾಗಿ ಬಹಳ ಉತ್ತಮ ದಿನ. ಬಹಳ ಸಮಯದಿಂದ ವಯಸಿದ್ದ ವಸ್ತು ಖರೀದಿಗೆ ಹಣಕಾಸು ಒಟ್ಟುಗೂಡಿಸಬಹುದು. ಆರೋಗ್ಯದಲ್ಲಿ ಚೇತರಿಕೆ ಇರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ನೀವು ದುವಾರಿ ವಸ್ತು ಖರೀದಿಗೆ ಮುಂದಾಗಬಹುದು. ಎಲ್ಲಾ ಕೆಲಸಗಳಲ್ಲಿ ನಿಮಗೆ ಧನಾತ್ಮಕ ಬದಲಾವಣೆ ನೋಡಲಿದ್ದೀರಿ. ಕುಟುಂಬಸ್ಥರ ಜೊತೆ ನೀವು ಸಮಯ ಕಳೆಯುವ ದಿನ. ಆರ್ಥಿಕವಾಗಿಯೂ ನಿಮಗೆ ಉತ್ತಮವಾಗಿರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿಯು ಅನಗತ್ಯ ಚರ್ಚೆಗಳು, ಅನಗತ್ಯ ವಾಗ್ವಾದಗಳಲ್ಲಿ ಇಂದು ಭಾಗಿಯಾಗಬೇಡಿ. ಸುಲಭವಾಗಿ ಸಿಗುವ ಅಥವಾ ಕಳಪೆ ವಸ್ತುಗಳ ಹಿಂದೆ ಬೀಳಬೇಡಿ. ವ್ಯಾಪಾರಿಗಳಿಗೆ ಇಂದು ಸವಾಲಿನ ದಿನವಾಗಬಹುದು. ಪಾಲುದಾರಿಕೆ ವ್ಯಾಪಾರದಲ್ಲಿರುವವರು ಪ್ರಗತಿ ನೋಡಬಹುದು. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಮಿಶ್ರ ಫಲದ ದಿನ. ಮನೆ ಸದಸ್ಯರೊಬ್ಬರಲ್ಲಿ ಅನಾರೋಗ್ಯ ಸಂಬಂಧ ಆಸ್ಪತ್ರೆಗೆ ತೆರಳಬೇಕಾಗಬಹುದು. ಆಪ್ತರೊಬ್ಬರು ನಿಮ್ಮ ಬಳಿ ಹಣಕಾಸಿನ ನೆರವು ಕೇಳಬಹುದು. ಕೃಷಿ ಸಂಬಂಧಿ ಕೆಲಸಗಳಲ್ಲಿ ನಿಮ್ಮ ಪಾಲುದಾರಿಕೆ ಇರಲಿದೆ. ಸಹೋದರರೊಂದಿಗೆ ಮನಸ್ತಾಪಗಳು ಮೂಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮ ದಿನವಾಗಿರಲಿದೆ. ನಿಮ್ಮಲ್ಲಿ ದೊಡ್ಡ ಹಣಕಾಸು ವಿಚಾರದಲ್ಲಿ ಧನಾತ್ಮಕ ಬದಲಾವಣೆ ಇರಲಿದೆ. ಪ್ರೀತಿಯ ವಿಚಾರದಲ್ಲಿ ಶುಭಕರ ದಿನ. ಹಳೆಯ ಬಾಕಿಗಳು ಮರುಪಾವತಿಯಾಗಲಿದೆ. ಹಲವು ಖುಷಿಯ ವಿಚಾರಗಳಲ್ಲಿ ನೀವು ಭಾಗಿಯಾಗುತ್ತೀರಿ.

ಧನು ರಾಶಿ

ಧನು ರಾಶಿಯವರಿಗೆ ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ದುಂದು ವೆಚ್ಚಗಳು ಕಡಿಮೆಯಾಗಲಿದೆ. ವ್ಯಾಪಾರದಲ್ಲಿ ಲಾಭ ನೋಡಬಹುದು. ಹಲವು ಸವಾಳುಗಳನ್ನು ಎದುರಿಸಬಹುದು, ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ಆಪ್ತರ ಭೇಟಿಯಿಂದ ಸಂತಸ ಇರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ಬಹಳ ಉತ್ತಮ ದಿನ. ಕೆಲಸದ ಸಂಬಂಧ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಸಂಬಂಧಗಳಲ್ಲಿ ಏರುಪೇರು ನೋಡಬಹುದು. ವಾಹನ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ದೊಡ್ಡ ಸವಾಲುಗಳ ಎದುರಿಸಬೇಕಾಗಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಸಮಸ್ಯೆಗಳು ಇರಬಹುದು. ಔದ್ಯೋಗಿಕ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು. ಬಹಳ ದಿನಗಳ ನಿಮ್ಮ ಉಳಿತಾಯವೊಂದನ್ನು ನೀವು ಬೇರೊಂದು ಕೆಲಸಕ್ಕೆ ಬಳಸಬಹುದು. ಪ್ರಯಾಣಕ್ಕಾಗಿ ಸಿದ್ಧತೆ ನಡಸಬಹುದು.

ಮೀನ ರಾಶಿ

ಮೀನ ರಾಶಿಯ ಜನರು ಬಹಳ ಸಮಯ ಓಡಾಟದಲ್ಲಿ ಕಳೆಯಬಹುದು. ನಿಮ್ಮಲ್ಲಿ ಅನಿವಾರ್ಯ ಕಾರಣಗಳಿಗೆ ಹಣ ಖರ್ಚು ಮಾಡಬೇಕಾಗಿ ಬರಬಹುದು. ವಾಹನ ಸಂಬಂಧಿ ಕನಸುಗಳು ನನಸಾಗಬಹುದು. ಕೆಲಸದಲ್ಲಿ ನಿಮ್ಮ ನಡೆ ಮೆಚ್ಚುಗೆ ಗಳಿಸಲಿದೆ. ಆರೋಗ್ಯದಲ್ಲಿ ಏರುಪೇರು ಇರಬಹುದು.

English summary

July-06-2025-daily-horoscope-prediction-for-12-zodiac-signs-in-kannada

Here is July 06 daily horoscope prediction for 12 zodiac signs read on...
Story first published: Saturday, July 5, 2025, 22:51 [IST]
X
Desktop Bottom Promotion