Dina Bhavishya: ಜುಲೈ 05ರ ಶನಿವಾರ ಯಾರಿಗೆ ಶುಭಕರ ನೋಡಿ!

ವೈದಿಕ ಶಾಸ್ತ್ರದ ಪ್ರಕಾರ ಜುಲೈ 05ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲವಾಗಿರಲಿದೆ. ನಿಮ್ಮ ಎಲ್ಲಾ ಹೆಜ್ಜೆಗಳ ಕುರಿತು ಬಹಳ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಸಂಬಂಧಿಕರು ನಿಮ್ಮ ಜೊತೆ ವಾದದಲ್ಲಿ ಇಂದು ತೊಡಗಬಹುದು. ನಿಮ್ಮ ಸಾಲಗಳ ಮರುಪಾವತಿಗೆ ಇಂದು ಸೂಕ್ತ ದಿನ. ವಾಹನ ಸಂಬಂಧಿ ಖರ್ಚುಗಳಿಂದ ಸಮಸ್ಯೆ ಇರುವುದಿಲ್ಲ ಸಂತಸ ಇರಬಹುದು. ಯಾವುದೇ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಹಲವು ರೀತಿಯ ವಸ್ತುಗಳ ಖರೀದಿಯಲ್ಲಿ ನಿಮಗೆ ಲಾಭವಾಗುವ ನಿರೀಕ್ಷೆ ಇದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಎಚ್ಚರಿಕೆಯಿಂದ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವ ದಿನವಾಗಿರುತ್ತದೆ. ನಿಮ್ಮ ಮನೆಯ ನವೀಕರಣದ ಬಗ್ಗೆ ನೀವು ಯೋಚಿಸಬಹುದು. ಕುಟುಂಬಸ್ಥರೊಂದಿಗೆ ನೀವು ಸಂತಸ ಕ್ಷಣಗಳ ಆನಂದಿಸಬಹುದು. ಗೃಹಿಣಿಯರಲ್ಲಿ ಆರೋಗ್ಯ ಸುಧಾರಣೆ ನೋಡಬಹುದು. ಆಸ್ತಿ ವಿಚಾರದಲ್ಲಿ ಧನಾತ್ಮಕ ಬದಲಾವಣೆ ಇರಲಿದೆ.

July-05-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ವ್ಯವಹಾರದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಬಹುದೊಡ್ಡ ಸಮಸ್ಯೆಗಳಲ್ಲಿ ಈ ದಿನ ಧನಾತ್ಮಕ ಬದಲಾವಣೆ ನೋಡಬಹುದು. ಇದು ನಿಮಗೆ ನೆಮ್ಮದಿ ತರಲಿದೆ. ನೀವು ಹಠಾತ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಬಹುದಿನದ ಆಸೆಯೊಂದನ್ನು ನೀವು ಈಡೇರಿಸಬಹುದು. ಆದಾಯದಲ್ಲಿ ಸುಧಾರಣೆ ನೋಡುವಿರಿ.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಅನುಕೂಲಕರ ದಿನ ನೋಡಬಹುದು. ಕೆಲಸದ ನಿಮಿತ್ತ ನೀವು ಪ್ರಯಾಣ ಮಾಡಬೇಕಾಗುತ್ತದೆ. ಶತ್ರುಗಳಿಂದ ಇಂದು ದೂರ ಇದ್ದಷ್ಟು ನಿಮಗೆ ಒಳಿತು. ನೀವು ಪ್ರವಾಸಕ್ಕೆ ಹೋದರೆ ಸ್ವಲ್ಪ ಎಚ್ಚರಿಕೆಯಿಂದ ವಾಹನಗಳನ್ನು ಬಳಸಿ. ಆಧ್ಯಾತ್ಮಿಕವಾಗಿ ಇಂದು ನಿಮಗೆ ಉತ್ತಮ ದಿನ. ದಾಂಪತ್ಯದಲ್ಲಿನ ಸಮಸ್ಯೆಗಳ ಬಗೆಹರಿಸಿಕೊಳ್ಳುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಸರ್ಕಾರಿ ಕೆಲಸದಲ್ಲಿ ವಿಳಂಬಗಳ ನೋಡಬಹುದು. ವ್ಯಾಪಾರ ಸಂಬಂಧವಾಗಿ ನಿಮ್ಮ ಪಾಲುದಾರರು ಅಥವಾ ಹಣಕಾಸು ನೆರವು ನೀಡಿದ್ದವರೊಂದಿಗೆ ವಾಗ್ವಾದಕ್ಕೆ ಇಂದು ಕಾರಣವಾಗಬಹುದು. ಆರೋಗ್ಯದಲ್ಲೂ ಏರುಪೇರು ಸಂಭವ.

ಕನ್ಯಾ ರಾಶಿ

ಹೊಸ ವಸ್ತು ಖರೀದಿಸಲು ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಬಹಳ ದಿನಗಳಿಂದ ಬಯಸಿದ್ದ ಕೆಲಸವೊಂದು ಕೈಗೂಡಲಿದೆ. ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳು ಈಡೇರಲಿವೆ. ಗೃಹಿಣಿಯರಲ್ಲಿ ಕಾಲು ನೋವಿನ ಸಂಭವವಿದೆ.

ತುಲಾ ರಾಶಿ

ಇಂದು ನಿಮಗೆ ಬಹಳ ಫಲಪ್ರದ ದಿನವಾಗಲಿದೆ. ನಿಮ್ಮ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ನಿರತರಾಗಿರುತ್ತೀರಿ. ಮನೆಯ ವಾತಾವರಣವು ಆಹ್ಲಾದಕರವಾಗಿರಲಿದೆ. ದಾಂಪತ್ಯದಲ್ಲಿನ ಮುನಿಸು ದೂರಾಗಲಿದೆ. ಮನೆಗೆ ಅನಿರೀಕ್ಷಿತ ಸಂಬಂಧಿಗಳ ಆಗಮನ ಆಗಬಹುದು.

ವೃಶ್ಚಿಕ ರಾಶಿ

ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಸಣ್ಣ ಪುಟ್ಟ ಅನಾರೋಗ್ಯವು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಪ್ರಯಾಣಗಳಲ್ಲಿ ನೀವು ಬಯಸಿದಂತಹ ಫಲಿತಾಂಶ ಪಡೆಯದೆ ಇರಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು.

ಧನು ರಾಶಿ

ಧನು ರಾಶಿಯವರಿಗೆ ಇಂದು ಮಿಶ್ರಫಲದ ದಿನ. ಇಂದು ನಿಮ್ಮ ಕೌಟುಂಬಿಕ ವಿಚಾರವಾಗಿ ಬಹಳ ಉತ್ತಮ ದಿನ. ನಿಮಗೆ ಹಣಕಾಸಿನ ನೆರವು ಬೇಕಿದ್ದರೆ ಕುಟುಂಬ ಸದಸ್ಯರು ಸಹಾಯಕ್ಕೆ ಬರಬಹುದು. ದಾಂಪತ್ಯದಲ್ಲಿ ಸುಖ ಇರಲಿದೆ. ವ್ಯಾಪಾರ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ಲಾಭ ತರಬಹುದು.

ಮಕರ ರಾಶಿ

ಇಂದು ನಿಮಗೆ ಕಷ್ಟಗಳಿಂದ ತುಂಬಿದ ದಿನವಾಗಿರುತ್ತದೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ. ಪ್ರಯಾಣಗಳಲ್ಲಿ ನಿಮಗೆ ಅಶುಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಮನಸ್ತಾಪಗಳು ಮೂಡಬಹುದು. ನಿಮ್ಮ ಬುದ್ದಿವಂತಿಕೆಯಿಂದ ಕೆಲಸಗಳ ಮುಗಿಸುವಿರಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಿಶ್ರ ಫಲ ತುಂಬಿದ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಿಗೆ ಹಣಕಾಸು ವಿಚಾರದಲ್ಲಿ ಅಡ್ಡಿ ಎದುರಾಗಬಹುದು. ಅನಗತ್ಯ ವಿಚಾರದಲ್ಲಿ ನಿಮಗೆ ಚಿಂತೆಗಳು ಕಾಡಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ಅನಾನುಕೂಲತೆ ಇರಲಿದೆ. ವಾಹನ ಸಂಬಂಧಿ ಖರ್ಚು ಇರಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ದೇವಾಲಯ ಭೇಟಿಯ ನಿರೀಕ್ಷೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸು ವಿಚಾರದಲ್ಲಿ ಸಹಕಾರ ಸಿಗಲಿದೆ. ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಎಲ್ಲ ವಿಚಾರವಾಗಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.

English summary

July-05-2025-daily-horoscope-prediction-for-12-zodiac-signs-in-kannada

Here is July 05 daily horoscope prediction for 12 zodiac signs read on...
Story first published: Friday, July 4, 2025, 21:12 [IST]
X
Desktop Bottom Promotion