Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
Dina Bhavishya: ಜುಲೈ 04ರ ಶುಕ್ರವಾರ ಯಾರಿಗೆ ಶುಭಕರ ನೋಡಿ!
ವೈದಿಕ ಶಾಸ್ತ್ರದ ಪ್ರಕಾರ ಜುಲೈ 04ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಓಡಾಟದಲ್ಲಿ ಕಳೆಯುತ್ತೀರಿ. ಬಹಳ ಸಮಯದ ಬಳಿಕ ನಿಮ್ಮ ಕೆಲಸಗಳಲ್ಲಿ ದೊಡ್ಡ ಯಶಸ್ಸು ನೋಡಬಹುದು. ಮನೆಯಲ್ಲಿ ಶಾಂತಿ ನೆಲೆಸಲಿದೆ. ಹಣ ಖರ್ಚಾಗುತ್ತಿದ್ದರೂ ಅಗತ್ಯ ಕೆಲಸದಲ್ಲಿ ಒತ್ತಡ ಇರುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳ ನೋಡಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಬಹಳ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವುದು. ನಿಮ್ಮ ಅನೇಕ ಕೆಲಸಗಳಲ್ಲಿ ಧನಾತ್ಮಕ ವಿಚಾರಗಳು ನಡೆಯಲಿದೆ. ಅವಿವಾಹಿತರಲ್ಲಿ ಶುಭ ಕಾರ್ಯ ಸಂಬಂಧ ಶುಭಕರ ದಿನ ಎನ್ನಬಹುದು. ವ್ಯಾಪಾರಿಗಳಿಗೆ ಧನಲಾಭದ ನಿರೀಕ್ಷೆ ಇದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಈ ದಿನ ನಿವಾರಣೆಯಾಗಲಿದೆ. ನಿಮ್ಮ ಪ್ರಯಾಣಗಳು ಸುಖಕರವಾಗಲಿದೆ. ಆಪ್ತರೊಬ್ಬರಿಗೆ ನಿಮ್ಮಿಂದ ಸಹಾಯವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಬಹಳ ಉತ್ತಮ ದಿನ. ನಿಮ್ಮ ಆದಾಯ ದ್ವಿಗುಣ ಆಗುವ ಸಾಧ್ಯತೆ, ನಿರುದ್ಯೋಗಿಗಳಿಗೆ ಹೊಸ ಆರಂಭ ಸಿಗಬಹುದು. ಬೇರೆಯವರಿಂದ ಹಣದ ನಿರೀಕ್ಷೆಯಲ್ಲಿದ್ದರೆ ಈ ದಿನ ಬಹಳ ಅನುಕೂಲವಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಎಲ್ಲಾ ಕೆಲಸಗಳನ್ನು ನಿಗಧಿತ ಸಮಯದೊಳಗೆ ಮುಗಿಸುವಿರಿ. ಎಲ್ಲಿಯೂ ನೀವು ಅನಗತ್ಯ ಚರ್ಚೆಯಲ್ಲಿ ಭಾಗಿಯಾಗಬೇಡಿ. ಆರೋಗ್ಯದ ಕಡೆ ಗಮನವಿಡಿ. ದಾಂಪತ್ಯ ವಿಚಾರದಲ್ಲಿ ಸಣ್ಣ ಮನಸ್ತಾಪಗಳು ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಗಳಿದ್ದರು, ನೆಮ್ಮದಿ ಹಾಳಾಗುವ ಕೆಲಸಗಳು ನಡೆಯಬಹುದು. ಮನೆಯಲ್ಲಿ ಹಣಕಾಸು ವಿಚಾರವಾಗಿ ಚಿಂತೆ ಇರಬಹುದು. ಹಾಗೆ ಅನಾರೋಗ್ಯ ವಿಚಾರವಾಗಿ ವೈದ್ಯರ ಭೇಟಿಯ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿಗಾಗಿ ನೀವು ಪ್ರವಾಸಕ್ಕೆ ತೆರಳುವ ಆಲೋಚನೆ ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ದಿನ ಓಡಾಟಗಳಿಗೆ ಒಳಗಾಗುತ್ತೀರಿ. ಪ್ರಯಾಣಗಳು ಲಾಭದಾಯಕವಾಗಲಿವೆ. ದಾಂಪತ್ಯದಲ್ಲಿ ಮಧುರತೆ ಇರಲಿದೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವವರಿಗೆ ಇಂದು ಉತ್ತಮ ದಿನ. ಗೃಹಿಣಿಯರಲ್ಲಿ ಹಣಕಾಸು ಸಂಬಂಧ ಒತ್ತಡ ಬರಬಹುದು. ಮಕ್ಕಳ ಕುರಿತ ಚಿಂತೆ ಹೆಚ್ಚಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಇಂದು ಪ್ರಯಾಣಗಳಲ್ಲಿ ತೊಡಗುತ್ತೀರಿ. ಮನೆಗಾಗಿ ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ಇದರಿಂದ ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ವ್ಯಾಪಾರಿಗಳಿಗೆ ಈ ದಿನ ಬಹಳ ಉತ್ತಮ ದಿನವಾಗಿರಲಿದೆ.
ಧನು ರಾಶಿ
ಧನು ರಾಶಿಯವರು ಈ ದಿನ ಸಂಬಂಧಿಕರ ಭೇಟಿಗೆ ತೆರಳಬೇಕಾಗಬಹುದು. ನಿಮ್ಮ ದೈನಂದಿನ ಕೆಲಸದಲ್ಲಿ ಸಣ್ಣ ಪುಟ್ಟ ಅಡೆತಡೆಗಳು ಇರಬಹುದು. ಪ್ರಯಾಣಗಳಲ್ಲಿ ನೀವು ಅಂದುಕೊಂಡಂತಹ ಫಲಿತಾಂಶ ಸಿಗದೆ ಇರಬಹುದು. ಮಕ್ಕಳಿಂದ ನಿಮಗೆ ಸಮಸ್ಯೆ ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯವರು ಬಹಳ ಅಡೆತಡೆ ನೋಡುವ ದಿನವಿದು. ನೀವು ಯಾವುದಾದರು ಹಣಕಾಸು, ವ್ಯಾಪಾರ ಸಂಬಂಧಿ, ಸಮಸ್ಯೆಗಳಿದ್ದರೆ ಪರಿಹಾರ ಮತ್ತಷ್ಟು ತಡವಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆ ಹೆಚ್ಚಾಗಬಹುದು. ಪ್ರಯಾಣಗಳಲ್ಲಿ ನಿಮಗೆ ನಿರೀಕ್ಷಿತ ಲಾಭ ಇರುವುದಿಲ್ಲ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ಬಹಳ ಅನುಕೂಲ ಆಗಿರಲಿದೆ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದ ಚರ್ಚೆ ಇರಲಿದೆ. ಮೂಳೆಗಳಿಗೆ ಸಂಬಂಧಿಸಿದ ಅನಾರೋಗ್ಯಕ್ಕೆ ನೀವು ಒಳಗಾಗಿದ್ದರೆ ಇಂದು ಪರಿಹಾರ ಪಡೆಯಬಹುದು. ವಾಹನ ಸಂಬಂಧಿ ಖರ್ಚು ಇರಲಿದೆ. ಮನೆಗಾಗಿ ದುವಾರಿ ಖರ್ಚು ಮಾಡುತ್ತೀರಿ.
ಮೀನ ರಾಶಿ
ಮೀನ ರಾಶಿಯವರು ಈ ದಿನ ಬಹಳ ಶ್ರಮ ಪಡಬೇಕಾಗುತ್ತದೆ. ಎಲ್ಲಾ ಕೆಲಸಗಳಲ್ಲೂ ನೀವು ಹೆಚ್ಚು ಸಮಯ ಹಾಗೂ ಶ್ರಮ ಹಾಕಬೇಕಿದೆ. ನಿರುದ್ಯೋಗಿಗಳಿಗೆ ಈ ದಿನ ಬಹಳ ಅನುಕೂಲವಾಗಿರಲಿದೆ. ವಿವಾಹಿತರಲ್ಲಿ ಈ ದಿನ ಖರ್ಚು ಹೆಚ್ಚಾಗಲಿದೆ, ಆರೋಗ್ಯದ ಕಡೆ ಗಮನವಿಡಿ.



Click it and Unblock the Notifications











