Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
Dina Bhavishya: ಜುಲೈ 03ರ ಗುರುವಾರ ಯಾವ ರಾಶಿಯವರಿಗೆ ಗುರುಬಲವಿದೆ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 03ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಲಾಭದಾಯಕ ದಿನವಾಗುತ್ತಿದೆ. ಎಲ್ಲಾ ವಿಚಾರದಲ್ಲೂ ಆಪ್ತರೊಬ್ಬರಿಂದ ಸಹಾಯ ಪಡೆಯಬಹುದು, ಹಣಕಾಸಿನ ವಿಚರವಾಗಿಯೂ ನಿಮಗಿಂದು ಉತ್ತಮ ದಿನವಾಗಿರಲಿದೆ. ನಿಮ್ಮ ಹಲವು ದಿನದ ಕೆಲಸವೊಂದು ಪೂರ್ಣವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಮಿಶ್ರ ಫಲದ ದಿನ. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ಮನೆಯಲ್ಲಿ ಹಣಕಾಸು ಸಂಬಂಧವಾಗಿ ಒತ್ತಡ ಹೆಚ್ಚಲಿದೆ. ನಿಮ್ಮ ವ್ಯಾಪಾರದಲ್ಲಿ ಲಾಭದಾಯಕ ದಿನವಲ್ಲ. ದೊಡ್ಡ ಕೆಲಸದ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಕಷ್ಟದ ದಿನ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವುದು ಉತ್ತಮ. ವ್ಯಾಪಾರಿಗಳಿಗೆ ಸಮಸ್ಯೆಗಳು ಬರಬಹುದು. ದೂರ ಪ್ರಯಾಣಗಳಲ್ಲಿ ಮಿಶ್ರ ಫಲಿತಾಂಶ ಇರಲಿದೆ. ಸರ್ಕಾರಿ ನೌಕರರಿಗೆ ಇಂದು ಉತ್ತಮ ದಿನ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಅನಗತ್ಯ ವಿವಾರಗಳಲ್ಲಿ ಖರ್ಚು ಹೆಚ್ಚಾಗಬಹುದು. ಆಪ್ತರೊಬ್ಬರಿಂದ ಹಣ ಪಡೆಯುವ ನಿಮ್ಮ ಬಯಕೆಗೆ ಅಡೆತಡೆ ಎದುರಾಗಬಹುದು. ಹೊಸ ಜವಾಬ್ದಾರಿಗಳು ನಿಮಗೆ ಸಮಸ್ಯೆಗಳ ತರಬಹುದು. ದಾಂಪತ್ಯದಲ್ಲಿ ಮನಸ್ತಾಪ ಮೂಡುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ ಎನ್ನಬಹುದು. ಬಹಳ ಸಮಯದ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು. ಔದ್ಯೋಗಿಕ ಸಂಬಂಧಿ ಒತ್ತಡ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ನೀವು ಒಂದು ನಿರ್ಧಾರ ತೆಗೆದುಕೊಳ್ಳುವ ದಿನ. ಹಣಕಾಸು ವಿಚಾರದಲ್ಲೂ ಉತ್ತಮ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಬಹಳ ಅನುಕೂಲ ತರಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ದೊಡ್ಡ ಸವಾಲುಗಳ ಎದುರಿಸುತ್ತೀರಿ. ಹಣಕಾಸು ವಿಚಾರವಾಗಿ ನಿಮಗೆ ಉತ್ತಮ ದಿನವಲ್ಲ. ನಿಮ್ಮ ವಸ್ತುಗಳ ಮೇಲೆ ಗಮನವಿಡಿ. ದುಂದುವೆಚ್ಚ ಮಾಡಲು ಮುಂದಾಗಬೇಡಿ. ಸಹೋದರರಿಂದ ಸಮಸ್ಯೆ ಇರಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ದಿನ ಬಹಳ ಶ್ರಮ ಅಥವಾ ದಣಿವಾಗುವ ಕೆಲಸದಲ್ಲಿ ಭಾಗಿಯಾಗಬಹುದು. ಬಹಳ ದಿನಗಳಿಂದ ಕಂಡಿದ್ದ ಕನಸನ್ನು ನನಸು ಮಾಡಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಯಾರಿಂದಾದರು ಹಣ ಪಡೆದಿದ್ದರೆ ವಾಪಾಸು ನೀಡುವುದು ಉತ್ತಮ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ನೋಡಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಉತ್ತಮ ದಿನವಾಗಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ ಇಂದು ಅವಕಾಶ ಸಿಗಬಹುದು. ಮಕ್ಕಳ ಕುರಿತ ಚಿಂತೆಯಿಂದ ನೀವು ದೂರಾಗಬಹುದು. ಮನೆಯಲ್ಲಿ ಹಣಕಾಸು ಸಂಬಂಧಿ ಒತ್ತಡ ಕಡಿಮೆಯಾಗಲಿದೆ. ಪ್ರೀತಿ ವಿಚಾರದಲ್ಲೂ ನಿಮಗೆ ಉತ್ತಮ ದಿನ.
ಧನು ರಾಶಿ
ಧನು ರಾಶಿಯವರು ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಿಸಬಹುದು. ನಿಮ್ಮ ಹಣಕಾಸು ಸಮಸ್ಯೆಯನ್ನು ಹೇಳಿಕೊಳ್ಳುವುದು ಪರಿಹಾರ ಸೂಚನೆಯಾಗಲಿದೆ. ಆಪ್ತರೊಂದಿಗೆ ದೇವಾಲಯ ಭೇಟಿಯ ಲಾಭವಿದೆ. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿಯವರು ಈ ದಿನ ಸಮಸ್ಯೆಗಳ ತರುವ ದಿನ. ದಿನದ ಬಹುತೇಕ ಸಮಯ ನೀವು ಮನೆಯಿಂದ ಹೊರಗೆ ಕಳೆಯುತ್ತೀರಿ. ಗೃಹಿಣಿಯರಲ್ಲಿ ಆರ್ಥಿಕ ಲಾಭದ ನಿರೀಕ್ಷೆ ಇದೆ. ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಲಿದೆ. ಕುಟುಂಬಸ್ಥರೊಂದಿಗೆ ನೀವು ಪ್ರವಾಸ ತೆರಳಲು ಸಿದ್ಧತೆಯಲ್ಲಿ ತೊಡಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಪ್ರಯಾಣಗಳಲ್ಲಿ ಇಂದು ತೊಡಗುತ್ತೀರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಅಂದುಕೊಂಡಂತೆ ಯಶಸ್ಸು ಪಡೆಯಬಹುದು. ನಿಮ್ಮ ಸಮಸ್ಯೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳುವುದು ಪರಿಹಾರಕ್ಕೆ ಕಾರಣವಾಗಬಹುದು. ದೂರ ಪ್ರಯಾಣಗಳು ಸುಖಕರವಾಗಿರಲಿದೆ. ಸಾಲ ಮುಕ್ತರಾಗಲು ಉತ್ತಮ ದಿನ. ಆರೋಗ್ಯ ಸುಧಾರಿಸಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಪ್ರಯಾಣಗಲ್ಲಿ ಇಂದು ಲಾಭದಾಯಕ ದಿನವಾಗಿರಲಿದೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ನೀವು ಅಂದಕೊಂಡಿದ್ದ ಕೆಲಸಗಳು ನೆರವೇರಲಿವೆ. ಬಹಳ ಸಮಯದಿಂದ ನಿಮಗೆ ಬೇಕಿದ್ದ ವಸ್ತು ಪಡೆಯುತ್ತೀರಿ. ಆಸ್ತಿ ಸಂಬಂಧಿತ ವಿಚಾರದಲ್ಲಿ ಅಡ್ಡಿ ಇರಲಿದೆ.



Click it and Unblock the Notifications












