Dina Bhavishya: ಜುಲೈ 02ರ ಬುಧವಾರ ನಿಮ್ಮ ರಾಶಿಗೆ ಯಾವ ಫಲವಿದೆ?

ವೈದಿಕ ಶಾಸ್ತ್ರದ ಪ್ರಕಾರ ಜುಲೈ 02ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯುವರಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸಿನ ಜೊತೆಗೆ ಒಂದಿಷ್ಟು ಸಮಸ್ಯೆಗಳ ನೋಡಬಹುದು. ನಿಮ್ಮ ಔದ್ಯೋಗಿಕ ಸಂಬಂಧಿ ಸಮಸ್ಯೆಯೊಂದು ಬಗೆಹರಿಯಲಿದೆ, ವೇತನ ಸಂಬಂಧಿ ಸಮಸ್ಯೆಗೆ ನೀವು ಒಳಗಾಗಿದ್ದರೆ ಬಗೆಹರಿಯಲಿದೆ. ಹಾಗೆ ಆರೋಗ್ಯ ಸುಧಾರಣೆ ಇರಲಿದೆ. ಕುಟುಂಬದಲ್ಲಿ ಅಶಾಂತಿ ಮೂಡಬಹುದು.

Here is July 02 daily horoscope prediction for 12 zodiac signs read on

ವೃಷಭ ರಾಶಿ

ವೃಷಭ ರಾಶಿಯ ಮಂದಿ ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಆರ್ಥಿಕವಾಗಿ ನೀವು ಇಂದು ಸದೃಢರಾಗುತ್ತೀರಿ. ದೇವಾಲಯ ಭೇಟಿಗೆ ಮುಂದಾಗಬಹುದು. ಆಪ್ತರೊಬ್ಬರಿಂದ ಹಣಕಾಸು ಸಂಬಂಧ ಸಹಾಯ ಸಿಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಪ್ರಯಾಣಗಳಲ್ಲಿ ಲಾಭದಾಯಕ ಸ್ಥಿತಿ ಇರಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲೂ ಧನಾತ್ಮಕ ವಾತಾವರಣ ನೋಡಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮುನಿಸು ಇರಬಹುದು. ವಾಹನ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಕರ್ಕ ರಾಶಿ

ಕರ್ಕ ರಾಶಿಯವರು ಬಹಳ ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ನಿಮ್ಮ ಕೆಲಸಗಳಲ್ಲಿ ಅನುಕೂಲಕರ ಫಲಿತಾಂಶಕ್ಕಿಂತ ಮಿಶ್ರ ಫಲ ಹೆಚ್ಚಾಗಲಿದೆ. ಕೆಲಸದ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಸಮಸ್ಯೆಗಳ ಬಗೆಹರಿಸಲು ನೀವು ತೆಗೆದುಕೊಳ್ಳುವ ನಿರ್ಧಾರವು ಉತ್ತಮ ಫಲಿತಾಂಶ ತರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಒತ್ತಡದ ದಿನ ಎನ್ನಬಹುದು. ಹಣಕಾಸು ವ್ಯವಹಾರಗಳಲ್ಲಿ ನಿಮಗೆ ಅಶಾಂತಿ ಇರಲಿದೆ. ಆದ್ರೆ ದಿನದ ಅಂತ್ಯದಲ್ಲಿ ಎಲ್ಲವು ಸುಖಾಂತ್ಯವಾಗಲಿದೆ. ಮನೆಯಲ್ಲಿ ನಿಮ್ಮ ವಿಚಾರವಾಗಿ ಮನಸ್ತಾಪಗಳು ಮೂಡಬಹುದು. ದೂರದ ಸಂಬಂಧಿಕರೊಬ್ಬರಿಂದ ಹಣಕಾಸಿನ ನೆರವು ಸಂಬಂಧ ಮನವಿ ಬರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ದಿನವು ಬಹಳ ಸಮಯ ಕೆಲಸದಲ್ಲಿ ಕಳೆಯಬೇಕಾಗುತ್ತದೆ. ನಿಮ್ಮ ಹಲವು ರೀತಿಯ ವಿಚಾರಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ಗಹಿಣಿಯರಿಗೆ ಈ ದಿನ ಶುಭಫಲ, ಹಣಕಾಸು ವಿಚಾರವಾಗಿ ನೀವು ಅಂದುಕೊಂಡಂತೆ ಈ ದಿನ ನಡೆಯಲಿದೆ. ಅಗತ್ಯ ವಸ್ತು ಸಂಬಂಧ ನೀವು ಖರ್ಚು ಹೆಚ್ಚು ಮಾಡಬೇಕಾಗಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ಆರೋಗ್ಯದಲ್ಲಿ ವಿಚಾರವಾಗಿ ನೀವು ವೈದ್ಯರ ಭೇಟಿಗೆ ಸಲಹೆ ಪಡೆಯುತ್ತೀರಿ. ವ್ಯವಹಾರಗಳಲ್ಲಿ ಅಡೆತಡೆ ಬರಬಹುದು. ವ್ಯಾಪಾರಿಗಳಿಗೆ ಲಾಭದ ದಿನ. ನಿಮ್ಮ ಪ್ರಯಾಣಗಳಲ್ಲಿ ಲಾಭದಾಯಕ ದಿನವನ್ನು ನೋಡಬಹುದು. ಉದ್ಯೋಗ ಹುಡುಕುತ್ತಿದ್ದರೆ ಇಂದು ಹೆಚ್ಚು ಶ್ರಮ ಹಾಕಬೇಕಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಇಂದು ಉತ್ತಮ ದಿನ ನೋಡಬಹುದು. ವಿದ್ಯಾರ್ಥಿಗಳಿಗೆ ಶುಭ ತರುವಂತಹ ದಿನ. ಹಣಕಾಸು ವಿಚಾರವಾಗಿ ಎಚ್ಚರಿಕೆ ಇಂದ ಇರಬೇಕು. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು. ಮನೆಗಾಗಿ ಹಲವು ವಸ್ತು ಖರೀದಿಸಿಬಹುದು. ಪ್ರೀತಿಯ ವಿಚಾರದಲ್ಲಿ ತಾಳ್ಮೆ ಇಡುವುದು ಉತ್ತಮ.

ಧನು ರಾಶಿ

ಧಣು ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ ಎನ್ನಬಹುದು. ನಿಮ್ಮ ಅನೇಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಇರಲಿದೆ. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿದೆ. ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದನ್ನು ನೀವು ಖರೀದಿಸಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಇರಲಿದೆ.

ಮಕರ ರಾಶಿ

ಮಕರ ರಾಶಿಯವರು ಈ ದಿನ ಓಡಾಟಗಳಲ್ಲಿ ಕಳೆಯಬೇಕಿದೆ. ನಿಮ್ಮ ದಾಂಪತ್ಯದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಇಂದು ದೊಡ್ಡದಾಗಲು ಬಿಡಬೇಡಿ. ನಿಮ್ಮ ಮನೆಯಲ್ಲಿ ಹಣಕಾಸು ವಿಚಾರವಾಗಿ ಒತ್ತಡ ಇರಬಹುದು. ವಾಹನ ಸಂಬಂಧಿ ಖರ್ಚುಗಳ ಮೇಲೆ ನೀವು ಹಿಡಿತ ಸಾಧಿಸಬೇಕಿದೆ. ಆರೋಗ್ಯದಲ್ಲಿ ಏರುಪೇರು ಸಂಭವ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ಬಹಳ ದಣಿವಾಗುವಂತಹ ಕೆಲಸ ಮಾಡುತ್ತಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಸಣ್ಣ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತೀರಿ. ಸಮಸ್ಯೆಗಳ ಬಗೆಹರಿಸಿಕೊಳ್ಳಲು ಇಂದು ಉತ್ತಮ ದಿನ. ಯಾರಿಂದಾದರ ಸಾಲ ಪಡೆದರೆ ಮರಳಿಸುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯವರು ಉತ್ತಮ ಸಮಯ ಕಳೆಯುತ್ತೀರಿ. ನಿಮ್ಮ ವ್ಯಾಪಾರಗಳು ಲಾಭ ಮಾಡಲಿವೆ. ದಾಂಪತ್ಯದಲ್ಲಿದ್ದ ಬಿರುಕು ಸರಿಯಾಗಬಹುದು. ಸಹೋದರರೊಂದಿಗೆ ಮನಸ್ತಾಪಗಳಿದ್ದರೆ ಇಂದು ಮಾತುಕತೆಯ ಮೂಲಕ ಸರಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಮಕ್ಕಳ ಕುರಿತಾಗಿ ನೀವು ನಿರ್ಧಾರ ತೆಗೆದುಕೊಳ್ಳುವುದು ಅವರಲ್ಲಿ ಸಿಡುಕು ಮೂಡಿಸಬಹುದು.

English summary

July-02-2025-daily-horoscope-prediction-for-12-zodiac-signs-in-kannada

Here is July 02 daily horoscope prediction for 12 zodiac signs read on...
X
Desktop Bottom Promotion