Dina Bhavishya: ಜುಲೈ 01ರ ಮಂಗಳವಾರವು ಯಾರಿಗೆಲ್ಲಾ ಮಂಗಳಕರ ನೋಡಿ!

ವೈದಿಕ ಶಾಸ್ತ್ರದ ಪ್ರಕಾರ ಜುಲೈ 01ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನವು ಬಹಳ ಅನುಕೂಲ ತರಬಹುದು ನಿಮ್ಮ ಬಯಕೆಯಂತೆಯೇ ಈ ದಿನ ಬಹಳ ಸಮಯ ನೀವು ಸಂತಸದಲ್ಲಿ ಕಳೆಯುವಿರಿ. ದೊಡ್ಡ ಖರ್ಚುಗಳಿದ್ದರೂ ಅದರಿಂದ ನಿಮಗೆ ಸಮಾಧಾನ ಇರಲಿದೆ. ಯಾರ ಬಳಿಯಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ವೃಷಭ ರಾಶಿ

ವೃಷಭ ರಾಶಿಯವರು ಈ ದಿನದಂದು ಹಣಕಾಸು ವಿಚಾರವಾಗಿ ಸಂತಸಗೊಳ್ಳುವಿರಿ. ಸಮಯದ ಒಳಗೆ ನಿಮ್ಮ ಕೆಲಸಗಳ ಮಾಡುವಿರಿ. ಆರ್ಥಿಕ ಪರಿಸ್ಥಿತಿ ಸಂಬಂಧವಾಗಿ ನಿಮಗೆ ಅಚ್ಚರಿಯ ಫಲಿತಾಂಶ ಇರಲಿದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ನೋಡುವಿರಿ. ಔದ್ಯೋಗಿಕ ಸಮಸ್ಯೆಯಿಂದಲೂ ಮುಕ್ತಿ ಪಡೆಯಲಿದ್ದೀರಿ.

Here is July 01 daily horoscope prediction f

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನ ಬಹಳ ಓಡಾಟದಲ್ಲಿ ಕಳೆಯುವಿರಿ. ನಿಮ್ಮ ದೊಡ್ಡ ನಿರ್ಧಾರಗಳನ್ನು ಮತ್ತೆ ಬದಲಾಯಿಸಲು ಮುಂದಾಗಬೇಡಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಬಹಳ ಉತ್ತಮ. ಆಹಾರ, ಶಾಪಿಂಗ್ ಸಂಬಂಧವಾಗಿ ಇಂದು ಹಣ ಖರ್ಚು ಮಾಡಬಹುದು. ಕುಟುಂಬದಲ್ಲಿ ಸಂತಸ ಇರಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ದಿನದ ಆರಂಭವು ಶುವಾಗಿ ಆರಂಭವಾಗಲಿದೆ, ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭವಿದೆ. ನಿಮ್ಮ ಹಣಕಾಸು ಸ್ಥಿತಿ ಕೊಂಚ ಸುಧಾರಣೆ ಆಗಲಿದೆ. ನೀವು ಬಯಸಿದಂತೆ ಹಣವೊಂದು ಬಂದು ನಿಮ್ಮ ಕೈ ಸೇರಬಹುದು, ಉದ್ಯೋಗ ಸಂಬಂಧಿ ಒತ್ತಡ ಹೆಚ್ಚಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಆರ್ಥಿಕ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಲು ನೀವು ಆಪ್ತರೊಬ್ಬರ ಭೇಟಿಯಾಗುತ್ತೀರಿ. ಔದ್ಯೋಗಿಕ ಸಂಬಂಧಿ ಸಮಸ್ಯೆಗಳು ಈ ದಿನ ಹೆಚ್ಚಾಗಬಹುದು. ತಾಳ್ಮೆಯಿಂದ ಇರುವುದು ಉತ್ತಮ. ಪ್ರಯಾಣಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನವು ಬಹಳ ಅನುಕೂಲವಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲಿವೆ. ದಾಂಪತ್ಯದಲ್ಲಿ ಸವಾಲುಗಳು ಎದುರಾಗಬಹುದು. ಮಕ್ಕಳ ಕುರಿತಾಗಿ, ಮನೆಯ ಕುರಿತಾದ ಚಿಂತೆ ಹೆಚ್ಚಾಗಬಹುದು. ಆಪ್ತರಿಂದ ನೋವಿನ ಮಾತುಗಳ ಕೇಳಬೇಕಾಗಿ ಬರಬಹುದು.

ತುಲಾ ರಾಶಿ

ತುಲಾ ರಾಶಿಯ ಮಂದಿ ಇಂದು ಬಹಳ ಸಹಜವಾಗಿ ಕಳೆಯಲಿದ್ದೀರಿ, ವ್ಯಾಪಾರ, ವ್ಯವಹಾರಗಳು ಸಾಮಾನ್ಯವಾಗಿರಲಿದೆ. ಬಹುದಿನದ ಕನಸಿನ ವಸ್ತು ನಿಮ್ಮದಾಗಿಸಿಕೊಳ್ಳಲು ಇನ್ನೊಂದಿಷ್ಟು ದಿನ ಕಾಯಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಬಹಳ ದಿನದ ನಂತರ ಹಣಕಾಸು ವಿಚಾರವಾಗಿ ಸಂತಸಗೊಳ್ಳುವ ದಿನ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ ನೋಡಬಹುದು. ಮನಸ್ಸಿಗೆ ನೋವಾಗುವಂತಹ ಘಟನೆಗಳಿಗೆ ನೀವು ಸಾಕ್ಷಿಯಾಗಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ಸಂಭವ.

ಧನು ರಾಶಿ

ಧನು ರಾಶಿಯವರು ಈ ದಿನ ದೊಡ್ಡ ಸವಾಲು ಎದುರಿಸಬಹದು. ಆದರೆ ನಿಮ್ಮ ಬುದ್ದಿಂತಿಕೆಯಿಂದ ಎಲ್ಲವನ್ನು ಎದುರಿಸುತ್ತೀರಿ. ಕೆಲಸದ ಕಾರಣಕ್ಕೆ ನೀವು ಪ್ರಯಾಣದಲ್ಲಿ ತೊಡಗಬೇಕಾಗಬಹುದು. ಆಪ್ತರ ಕರೆಯೊಂದು ನಿಮಗೆ ಚಿಂತೆ ತರಬಹುದು. ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮಗೆ ಉತ್ತಮ ದಿನವಾಗಿರಲಿದೆ.

ಮಕರ ರಾಶಿ

ಮಕರ ರಾಶಿಯವರು ಅನಾರೋಗ್ಯ ಸಂಬಂಧವಾಗಿ ಇಂದು ಕಷ್ಟಪಡಬೇಕಾದ ದಿನ. ಅನಿರೀಕ್ಷಿತ ಬೆಳವಣಿಗೆಗಳು ನಿಮ್ಮಲ್ಲಿ ಅಸೌಖ್ಯಕ್ಕೆ ಕಾರಣವಾಗಬಹುದು. ಪ್ರಯಾಣಗಳಲ್ಲಿ ನಿಮಗೆ ಸವಾಲುಗಳು ಎದುರಾಗಲಿದೆ. ದುಂದು ವೆಚ್ಚವನ್ನು ಕಡಿಮೆ ಮಾಡುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನದಂದು ಬಹಳ ಓಡಾಟದಲ್ಲಿ ಕಳೆಯುತ್ತೀರಿ. ನಿಮ್ಮದಲ್ಲದ ವಿಚಾರಗಳಲ್ಲಿ ಹಣ ವ್ಯಯಿಸುವುದು ನೋಡಬಹುದು. ಅತೀಯಾದ ಶ್ರಮ ಹಾಕುವ ಕೆಲಸದಲ್ಲಿ ತೊಡಗಬಹುದು, ಇದರಿಂದ ನಿಮ್ಮಲ್ಲಿ ದಣಿವು, ಮೈಕೈ ನೋವು, ಆಯಾಸ ಸಂಬಂಧಿ ಸಮಸ್ಯೆಗೆ ತುತ್ತಾಗಬಹುದು. ವ್ಯಾಪಾರಿಗಳು ಬುದ್ದಿವಂತಿಕೆಯಿಂದ ಕೆಲಸ ಮಾಡುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ಹಣಕಾಸು ಲಾಭದ ನಿರೀಕ್ಷೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿಯ ದಿನವಾಗಿರಲಿದೆ. ದಿನಗೂಲಿ ನೌಕರರಿಗೆ ಉತ್ತಮ ದಿನ. ದಾಂಪತ್ಯದಲ್ಲಿ ಸಂತಸ ಇರಲಿದೆ. ಯಾರೊಂದಿಗೂ ಹಣಕಾಸು ವಿಚಾರವಾಗಿ ಅನಗತ್ಯ ಚರ್ಚೆಯಲ್ಲಿ ತೊಡಗಬೇಡಿ.

English summary

July-01-2025-daily-horoscope-prediction-for-12-zodiac-signs-in-kannada

Here is July 01 daily horoscope prediction for 12 zodiac signs read on...
Story first published: Monday, June 30, 2025, 21:34 [IST]
X
Desktop Bottom Promotion