Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಜನವರಿ 9, ದಿನ ಭವಿಷ್ಯ: ಈ ಗುರುವಾರ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಶುಭ ಗುರುವಾರ, ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗುರುವಾದ ಉತ್ತಮವಾಗಿರಲಿದೆ. ಎಂದಿನಂತೆ ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಗಮನವಿಡಿ. ಈ ದಿನ ನೀವು ನಿಮ್ಮ ಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ವಿಷಯಗಳತ್ತ ಹೆಚ್ಚು ಗಮನವಿದ್ದರೆ ಒಳಿತು. ಸಂಗಾತಿಯ ಜೊತೆಗೆ ಬಾಂಧವ್ಯ ಉತ್ತಮವಾಗಿರಲಿದೆ. ನಿಮ್ಮ ಆರೋಗ್ಯ ಕೂಡ ಚೇತರಿಕೆಯಾಗಲಿದೆ.

ವೃಷಭ ರಾಶಿ
ಹಣಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗುತ್ತವೆ. ಈ ದಿನ ನಿಮ್ಮ ಭವಿಷ್ಯದ ವಿಚಾರ ಕುರಿತು ಒಳ್ಳೆಯ ದಿನವಾಗಿ ನಿಮ್ಮ ನೆನಪಿನಲ್ಲಿ ಉಳಿಯಲಿದೆ. ಈ ದಿನ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಏಕಾಏಕಿ ಖರ್ಚು ನಿಮ್ಮನ್ನು ಕಾಡಬಹುದು. ಇದು ದುಬಾರಿಯಾಗಬಹುದು. ಮನದಲ್ಲಿನ ಒತ್ತಡ ಮತ್ತಷ್ಟು ಹೆಚ್ಚಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಈ ದಿನ ತುಂಬಾನೆ ಚೆನ್ನಾಗಿರಲಿದೆ. ನೀವು ಅಂದುಕೊಂಡಿದ್ದ ಕೆಲಸ ನೆರವೇರಬಹುದು. ಮನೆಯಲ್ಲಿ ಹಿರಿಯರು ಅಥವಾ ಸದಸ್ಯರಿಂದ ನಿಮಗೆ ಶುಭ ಸುದ್ದಿ ಕೇಳಲಿದ್ದೀರಿ. ಕೃಷಿ ಸಂಬಂಧಿ ಕೆಲಸದಲ್ಲಿ ಯಶಸ್ಸು, ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಬಹುದು, ಆರೋಗ್ಯದ ಮೇಲೆ ಎಚ್ಚರವಿರಲಿ.
ಕರ್ಕ ರಾಶಿ
ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ. ಹಳೆಯ ರೋಗ ಮರುಕಳಿಸುವ ಸಾಧ್ಯತೆ ಇದೆ. ನೀವು ಇತ್ತೀಚೆಗೆ ಯಾವುದೇ ಹೂಡಿಕೆ ಮಾಡಿದ್ದರೆ ಅದರ ಲಾಭ ಪಡೆಯುತ್ತೀರಿ. ದೂರ ಪ್ರಯಾಣದ ಸಂಭವವಿದೆ. ಹಾಗೆ ನಿಮ್ಮ ಬಹುದೊಡ್ಡ ಕೆಲಸಕ್ಕೆ ಮತ್ತೆ ಅಡೆತಡೆ ಉಂಟಾಗಬಹುದು. ವಿವಾಹಿತರಲ್ಲಿ ಅಶಾಂತಿ ಕಾಡಬಹುದು.
ಸಿಂಹ ರಾಶಿ
ನಿಮ್ಮ ಹಳೆಯ ಕೆಲಸಗಳು ಮತ್ತೆ ಆರಂಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಉತ್ತಮ ದಿನವಾಗುತ್ತದೆ. ಅನಿರೀಕ್ಷಿತ ಧನ ಲಾಭಕ್ಕೆ ಕಾರಣವಾಗುವ ಕೆಲಸ ಮಾಡುತ್ತೀರಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇಲ್ಲದಿದ್ದರೆ ಇಬ್ಬರ ನಡುವೆ ಬಿರುಕು ಉಂಟಾಗಬಹುದು.
ಕನ್ಯಾ ರಾಶಿ
ನೀವು ಕೆಲವು ಕುಟುಂಬ ಸದಸ್ಯರೊಂದಿಗೆ ಬಹುಮುಖ್ಯ ವಿಚಾರವೊಂದಕ್ಕೆ ವಾಗ್ವಾದದಲ್ಲಿ ತೊಡಗಬೇಕಾಗಬಹುದು. ಹಳೆಯ ವಿಚಾರದಿಂದ ಮನೆಯಲ್ಲಿ ಅಶಾಂತಿ ಮೂಡಬಹುದು. ಹಣದ ವಿಚಾರದಲ್ಲಿ ಇಂದು ಉತ್ತಮ ದಿನವಲ್ಲ. ವ್ಯವಹಾರದಲ್ಲಿ ಏಳುಬೀಳಿನ ದಿನವಾಗಬಹುದು. ಈ ದಿನ ಯಾರ ಬಳಿಯೂ ಅನಗತ್ಯ ಚರ್ಚೆ ಮಾಡುವುದು ಒಳಿತಲ್ಲ.
ತುಲಾ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಲಾಭ ಮಾಡಬಹುದು. ಹಣದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಮನದ ದೊಡ್ಡ ಪ್ರಶ್ನೆಗೆ ಉತ್ತರ ಸಿಗಬಹುದು. ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದನ್ನು ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ.
ವೃಶ್ಚಿಕ ರಾಶಿ
ಉದ್ಯೋಗಸ್ಥರಿಗೆ ಇಂದು ಸವಾಲಿನ ದಿನವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಮಾಡಬಹುದು. ಹೂಡಿಕೆಗೆ ಇಂದು ಉತ್ತಮ ದಿನವಲ್ಲ. ಕೀಲು ಮೂಳೆಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತದೆ.
ಧನು ರಾಶಿ
ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಭವಿಷ್ಯದ ಕುರಿತು ಇಂದು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೀರಿ. ಬೇರೆಯವರ ಮಾತಿನಿಂದ ನಿಮಗೆ ನೋವುಂಟಾಗುವ ಅನೇಕ ಸನ್ನಿವೇಶ ಎದುರಿಸಬೇಕಾಗುತ್ತದೆ. ಹಣಕಾಸು ವಿಚಾರದಲ್ಲಿ ಖರ್ಚು ಹೆಚ್ಚಾಗಬಹುದು.
ಮಕರ ರಾಶಿ
ಇಂದು ನಿಮ್ಮ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡದಿರುವುದು ಉತ್ತಮ. ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನ. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ದಿನ ನಿಮಗೆ ಹೊಸ ಅವಕಾಶ ಬರಬಹುದು. ನಿಮ್ಮ ಕೆಲಸದಲ್ಲಿ ಶ್ರಮ ಹಾಕಿ ಪ್ರತಿಫಲ ಸಿಗುವುದು ಖಚಿತ.
ಕುಂಭ ರಾಶಿ
ನಿರೀಕ್ಷಿಸಿದ ಲಾಭವನ್ನು ಪಡೆಯದ ಕಾರಣ ಉದ್ಯಮಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ಜೊತೆ ಕೋಪದಿಂದ ನಡೆದುಕೊಳ್ಳಬೇಡಿ. ಬಹಳ ದಿನದಿಂದ ಬಾಕಿ ಉಳಿದಿದ್ದ ನಿಮ್ಮ ಕೆಲಸ ಪೂರ್ಣವಾಗಲಿದೆ.
ಮೀನ ರಾಶಿ
ನೀವು ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡುವವರಾಗಿದ್ದರೆ ಎಚ್ಚರಿಕೆ ಅಗತ್ಯ. ನಿಮಗೆ ಯಾವುದೇ ವೃತ್ತಿ ಸಂಬಂಧಿತ ಸಮಸ್ಯೆಗಳಿದ್ದರೆ ಪರಿಹಾರ ಪಡೆಯುತ್ತೀರಿ. ಅಮೂಲ್ಯ ವಸ್ತು ಕಳೆದುಕೊಳ್ಳುವ ಸಂಭವವಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಗೃಹಿಣಿಯರಲ್ಲಿ ಧನ ಲಾಭದ ನಿರೀಕ್ಷೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications