ಜನವರಿ 7, ದಿನ ಭವಿಷ್ಯ: ಮೀನ ರಾಶಿಗೆ ಶುಭ ದಿನ, ಉಳಿದ ರಾಶಿಗಳಿಗೆ ಹೇಗಿದೆ

ಜ್ಯೋತಿಷ್ಯದ ಪ್ರಕಾರ ಜನವರಿ 7 ನಿಮಗೆ ಹೇಗಿರಲಿದೆ?

ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಶುಭ ದಿನ, ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಆದರೆ ಖರ್ಚು ಬಗ್ಗೆ ಜಾಗ್ರತೆ ಮಾಡಲು ಸಲಹೆ ನೀಡಲಾಗುವುದು. ಕುಟುಂಬದ ಕಡೆಗೆ ಗಮನಹರಿಸಿ, ಅನಗ್ಯತ ವಾದ ಬೇಡ, ಜಗಳದಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು, ಆದ್ದರಿಂದ ತಾಳ್ಮೆಯಂದ ಬಗೆಹರಿಸಲು ಪ್ರಯತ್ನಿಸಿ.

Daily Horoscope

ವೃಷಭ ರಾಶಿ
ಈ ದಿನ ಮಿಶ್ರಫಲ, ಕೆಲವೊಂದು ಅನಿರೀಕ್ಷಿತ ಘಟನೆ ಸಂಭವಿಸಬಹುದು, ಯಾವುದೇ ತೀರ್ಮಾನವಾದರೂ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ನಿಮ್ಮ ಸ್ನೇಹಿತರ ಮನಸ್ತಾಪ ಉಂಟಾಗದಂತೆ ಜಾಗ್ರತೆವಹಿಸಿ, ಯಾರನ್ನೂ ಕುರುಡಾಗಿ ನಂಬಲು ಹೋಗಬೇಡಿ.

ಮಿಥುನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ಕೆಲವು ಗೊಂದಲಗಳಿಗೆ ಪರಿಹಾರ ಸಿಗಲಿದೆ, ಕುಟುಂಬ ಬದುಕಿನಲ್ಲಿ ಕೆಲ ಒತ್ತಡ ಇರಲಿದೆ, ಎಲ್ಲಾ ವಿಷಯವನ್ನು ತಾಳ್ಮೆಯಿಂದ ಬಗೆಹರಿಸಿ. ನಿಮ್ಮ ಹಾಗೂ ಸಂಗಾತಿಯ ಬಾಂಧವ್ಯ ಚೆನ್ನಾಗಿರಲಿದೆ.

ಕರ್ಕ ರಾಶಿ
ಈ ದಿನ ಅನುಕೂಲಕರವಾಗಿರಲಿದೆ, ಈ ದಿನ ಪ್ರತಿಕೂಲ ಸಂದರ್ಭದಲ್ಲಿ ಕೋಪ ನಿಯಂತ್ರಿಸಿ, ಹೆಚ್ಚು ಹಣ ಖರ್ಚು ಮಾಡಲು ಹೋಗಬೇಡಿ. ಕೆಲಸ ಕಾರ್ಯಗಳು ಯೋಜನೆಯಂತೆ ಪೂರ್ಣವಾಗಲಿದೆ. ಈ ದಿನ ಡ್ರೈವ್‌ ಮಾಡುವಾಗ ಜಾಗ್ರತೆವಹಿಸಿ.

ಸಿಂಹ ರಾಶಿ
ಈ ದಿನ ತುಂಬಾ ಅನುಕೂಲಕರವಾಗಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ. ಈ ದಿನ ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆ ಪೂರ್ಣವಾಗಲಿದೆ. ಈ ದಿನ ಪ್ರಯಾಣ ಮಾಡುವಾಗ ಜಾಗ್ರತೆವಹಿಸಿ.

ಕನ್ಯಾ ರಾಶಿ
ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಾದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ, ಮುಕ್ತವಾಗಿ ಮಾತನಾಡಿದರೆ ಸಮಸ್ಯೆ ಬಗೆಹರಿಯಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.

ತುಲಾ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಕುಟುಂಬದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ, ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯದ ಕಡೆಗೆ ಗಮನಹರಿಸಲು ಸಾಧ್ಯವಾಗುವುದು.

ವೃಶ್ಚಿಕ ರಾಶಿ
ನೀವು ವಿಶ್ರಾಂತಿ ಪಡೆದು ನಂತರ ಕೆಲಸದ ಕಡೆಗೆ ಗಮನಹರಿಸಿದರೆ ಕೆಲಸವನ್ನು ಮತ್ತಷ್ಟು ಚುರುಕಾಗಿ ಮಾಡಲು ಸಾಧ್ಯವಾಗುವುದು, ಯಾವುದೇ ನಿರ್ಧಾರವಾದರೂ ಆತುರದಿಂದ ತೆಗೆದುಕೊಳ್ಳಬೇಡಿ, ಕೆಲಸದ ಕಡೆ ಗಮನಹರಿಸುವುದುಒಳ್ಳೆಯದು.

ಧನು ರಾಶಿ
ಈ ದಿನ ನೀವು ತುಂಬಾ ರಿಲ್ಯಾಕ್ಸ್ ಆಗುತ್ತೀರಿ, ನಿಮ್ಮ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ದಿನ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಕೊಳ್ಳಲು ಸಾಧ್ಯವಾಗುವುದು. ಕುಟುಂಬ ಜೀವನ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ದಿನ ಉತ್ತಮವಾಗಿರಲಿದೆ.

ಮಕರ ರಾಶಿ
ಈ ದಿನ ವೈವಾಹಿಕ ಜೀವನ ಚೆನ್ನಾಗಿರಲಿದೆ, ವೃತ್ತಿ ಬದುಕಿನ ದೃಷ್ಟಿಯಿಂದಲೂ ಈ ದಿನ ನಿಮಗೆ ಉತ್ತಮವಾಗಿದೆ. ಆಸ್ತಿ ಸಂಬಂಧಿಸಿದ ವಿವಾದವಿದ್ದರೆ ಬಗೆಹರಿಯಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.

ಕುಂಭ ರಾಶಿ
ಈ ದಿನ ಆರ್ಥಿಕವಾಗಿ ಉತ್ತಮವಾಗಿದೆ, ಕಳೆದುಕೊಂಡ ಹಣ ಮರಳಿ ಪಡೆಯಲು ಸಾಧ್ಯವಾಗುವುದು. ಆರೋಗ್ಯದ ಕಡೆಗೆ ಗಮನಹರಿಸಿ, ವೃತ್ತಿ ಜೀವನದ ದೃಷ್ಟಿಯಿಂದ ಉತ್ತಮವಾಗಿದೆ, ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ.

ಮೀನ ರಾಶಿ
ಈ ದಿನ ತುಂಬಾ ಚೆನ್ನಾಗಿರಲಿದೆ, ಕುಟುಂಬದ ಜೊತೆ ಸಂತೋಷವಾಗಿ ಸಮಯ ಕಳೆಯಲು ಸಾಧ್ಯವಾಗುವುದು. ವೃತ್ತಿ ಬದುಕು ಚೆನ್ನಾಗಿರಲಿದೆ, ವ್ಯಾಪಾರಿಗಳು ವ್ಯಾಪಾರ ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳಬಹುದು.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

January 7:Daily Horoscope Prediction For 12 Zodiac Signs In Kannada

Daily Horoscope: Here is January 7 2025 prediction for 12 zodiac signs read on..
Story first published: Tuesday, January 7, 2025, 0:51 [IST]
X
Desktop Bottom Promotion