Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 30 Horoscope: ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಇಡಿ
ವೈದಿಕ ಶಾಸ್ತ್ರದ ಪ್ರಕಾರ ಜನವರಿ 30(January 30 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಮಧುರವಾಗಿರಲಿದೆ. ನೀವು ಅಂದುಕೊಂಡಿದ್ದ ಕೆಲಸವು ಅನಿರೀಕ್ಷಿತವಾಗಿ ಲಾಭಕರವಾಗುತ್ತದೆ. ವ್ಯಾಪಾರಿಗಳಿಗೆ ಲಾಭಕರ ದಿನ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಶುಭವಾಗಲಿದೆ. ಆಪ್ತರಿಂದ ನಿಮಗೆ ಹಣಕಾಸಿನ ಹರಿವು ಇದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಸಾಮಾನ್ಯ ದಿನವಾಗಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮತ್ತೆ ಮುಂದೂಡುವಿರಿ. ಹಣಕಾಸಿನ ವಿಚಾರ ಕೂಡ ನೀವು ಅಂದುಕೊಂಡಂತೆ ಇರುವುದಿಲ್ಲ. ಶ್ರಮದಾಯಕ ದಿನವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಎಚ್ಚರಿಕೆಯಿಂದ ಇರಬೇಕಾದ ದಿನ. ವಹಿವಾಟುಗಳನ್ನು ಎಚ್ಚರದಿಂದ ಮಾಡಬೇಕಿದೆ. ನಿಮ್ಮ ಹಣಕಾಸು ವಿಚಾರವಾಗಿ ಯಾವುದಾದರು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಆಲೋಚಿಸಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಮುಖ್ಯ ಕೆಲಸವೊಂದನ್ನು ಮಾಡುವ ದಿನವಾಗುತ್ತಿದೆ. ಗೃಹಿಣಿರಲ್ಲಿ ಈ ದಿನ ಧನಲಾಭ ನೋಡಬಹುದು. ಹಳೆಯ ಸಾಲ ಮರುಪಾವತಿಯ ದಿನ. ನಿಮ್ಮ ದೊಡ್ಡ ಮಟ್ಟದ ಕೆಲಸವೊಂದಕ್ಕೆ ಆಪ್ತರಿಂದ ಹಣ ಪಡೆಯುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನ ಯಾರಿಗೂ ಸಾಲ ಅಥವಾ ಹಣ ನೀಡಲು ಮುಂದಾಗದೆ ಇರುವುದು ಉತ್ತಮ. ನೆಮ್ಮದಿಯ ದಿನವಾಗುತ್ತದೆ. ನಿಮ್ಮ ಭವಿಷ್ಯದ ವಿಚಾರವಾಗಿ ಇಂದು ಚಿಂತಿಸುವ ದಿನ. ಆಹಾರ ಸಂಬಂಧಿತ ಖರ್ಚುಗಳನ್ನು ಕಡಿಮೆ ಮಾಡುವುದು ಸೂಕ್ತ.
ಕನ್ಯಾ ರಾಶಿ
ನೀವಿಂದು ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯ ಸಂಬಂಧಿತ ಚರ್ಚೆಗಳಲ್ಲಿ ಭಾಗಿಯಾಗುವಿರಿ. ನೀವು ಅಂದುಕೊಂಡರೆ ವಿಚಾರಗಳು ನಡೆಯದೆ ಇರಬಹುದು. ಪ್ರಯಾಣ ಮಾಡುವಿರಿ. ಹಣಕಾಸಿ ಖರ್ಚುಗಳನ್ನು ನಿಭಾಯಿಸುವುದು ಉತ್ತಮ. ಬ್ಯಾಂಕಿಂಗ್ ಕೆಲಸಗಳಲ್ಲಿ ಅಡ್ಡಿಗಳಿವೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಪ್ರಯಾಣಗಳಿವೆ. ಕೆಲಸದ ಸಂಬಂಧವಾಗಿ ನೀವು ಪ್ರಯಾಣಿಸುತ್ತೀರಿ. ಗೃಹಿಣಿಯರು ಅನಾವಶ್ಯಕ ಮಾತುಗಳ ಮೂಲಕ ನೋವು ಅನುಭವಿಸಬಹುದು. ದಾಂಪತ್ಯದಲ್ಲಿ ನೀವಿಂದು ತಾಳ್ಮೆಯಿಂದ ಇರುವುದು ಉತ್ತಮ.
ವೃಶ್ಚಿಕ ರಾಶಿ
ನಿಮ್ಮ ಹೊಸ ಆದಾಯ ಮೂಲವು ನಿಮಗಿಂದು ಸಂತಸದ ವಾತಾವರಣವನ್ನು ತರಲಿದೆ. ನೀವು ಬಯಸಿದಂತೆ ಹಣದ ಹರಿವು ನೋಡಬಹುದು. ಆಪ್ತರ ಭೇಟಿ ನಿಮಗೆ ಸಂತಸದ ಕ್ಷಣವಾಗಿರಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನ ದೊಡ್ಡ ಶುಭವಿದೆ. ನೀವು ಬಹುಸಮಯದಿಂದ ಮಾಡಲಾಗದೆ ಉಳಿಸಿಕೊಂಡಿದ್ದ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ನಿಮ್ಮ ವ್ಯವಹಾರಗಳು ಧನಾತ್ಮಕವಾಗಿರಲಿದೆ. ದೈನಂದಿನ ಕೆಲಸಗಳಲ್ಲಿ ಹೆಚ್ಚು ಶ್ರಮ ಹಾಕುವಿರಿ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಹೆಚ್ಚು ವಿಶ್ರಾಂತಿಯಲ್ಲಿರುವಿರಿ. ನಿಮ್ಮ ಹಲವು ಕೆಲಸಗಳನ್ನು ನಿಧಾನಗತಿಯಲ್ಲಿ ಮಾಡುವಿರಿ. ರಾತ್ರಿ ಸಮಯದಲ್ಲಿನ ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದರ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅನುಕೂಲಕರ ವಾತಾವರಣ ತರಲಿದೆ, ಕುಟುಂಬ ಅಥವಾ ಆಪ್ತರೊಂದಿಗೆ ನೀವು ದೇವಾಲಯ ಭೇಟಿ ಸಾಧ್ಯತೆ ಇದೆ. ಮನೆಗಾಗಿ ನೀವಿಂದು ಖರ್ಚುಗಳ ಮಾಡಬಹುದು, ವಾಹನ ಚಲಾವಣೆಯ ಸಮಯದಲ್ಲಿ ಎಚ್ಚರಿಕೆಯಿಡಿ.
ಮೀನ ರಾಶಿ
ಮೀನ ರಾಶಿ ಗೃಹಿಣಿಯರಿಗೆ ಇಂದು ಪ್ರಯಾಣದ ದಿನ, ಹೀಗಾಗಿ ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರವಹಿಸಿ. ಕುಟುಂಬಸ್ಥರು, ಆಪ್ತರ ಭೇಟಿಯಿಂದ ವಿಶೇಷ ದಿನವಾಗಿಸಲಿದ್ದೀರಿ. ದೊಡ್ಡ ಖರ್ಚುಗಳನ್ನು ಕಡಿಮೆ ಮಾಡುವುದು ಉತ್ತಮ. ಮಕ್ಕಳ ಆರೋಗ್ಯದ ಕಡೆ ಗಮನವಿಡಿ.



Click it and Unblock the Notifications