Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 29 Horoscope: ಹಣಕಾಸಿನ ಸಮಸ್ಯೆಗಳು ದೊಡ್ಡದಾಗಲು ಬಿಡಬೇಡಿ
ವೈದಿಕ ಶಾಸ್ತ್ರದ ಪ್ರಕಾರ ಜನವರಿ 29 (January 29 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನೀವು ಬಹಳ ಸಮಯದಿಂದ ಅಂದುಕೊಂಡಿದ್ದ ಕೆಲಸ ಆಗಲಿದೆ. ಹಣಕಾಸಿನ ವಿಚಾರದಲ್ಲೂ ಸ್ವಲ್ಪ ಮಟ್ಟಿನ ನೆಮ್ಮದಿ ಇದೆ. ಆಪ್ತರೊಬ್ಬರ ವಿಚಾರವಾಗಿ ನೀವು ಕೆಲಸ ಮಾಡುತ್ತೀರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗುತ್ತಿದೆ, ನಿಮ್ಮದಲ್ಲದ ಕೆಲಸಕ್ಕೂ ನೀವಿಂದು ಪ್ರಯಾಣ ಮಾಡಬಹುದು. ಯಾರೊಂದಿಗೂ ಅನಗತ್ಯ ವಿಚಾರವಾಗಿ ಕಲಹಕ್ಕೆ ಮುಂದಾಗಬೇಡಿ. ದಾಂಪತ್ಯದಲ್ಲಿ ಮುನಿಸುಗಳ ತಡೆಯಲು ಪ್ರಯತ್ನಿಸಿ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ತಾಳ್ಮೆಯಿಂದ ಇರುವುದು ಉತ್ತಮ. ನೀವು ಮಾಡಬೇಕಿದ್ದ ಹಲವು ಕೆಲಸವನ್ನು ಸಮಯದೊಳಗೆ ಮಾಡಿ ಮುಗಿಸುವುದು ಉತ್ತಮ. ವ್ಯಾಪಾರಿಗಳು ಈ ದಿನ ಬಹಳ ಬುದ್ದಿವಂತಿಕೆಯಿಂದ ವ್ಯವಹಾರ ಮಾಡುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಮಿಶ್ರಫಲವಿದೆ. ಇಂದು ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್ ವ್ಯವಹಾರಗಳು, ಪ್ರಯಾಣಗಳಲ್ಲಿ ಬಹಳ ಎಚ್ಚರಿಕೆ ವಹಿಸಿ. ವಾಹನ ವಿಚಾರದಲ್ಲಿ ಖರ್ಚುಗಳಿವೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ಈ ದಿನ ನೀವು ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಎದುರಿಸಬಹುದು. ಕಾಲೋಚಿತ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಪಂಚೇಂದ್ರಿಯ ಸಂಬಂಧಿತ ಅನಾರೋಗ್ಯ ಕಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ಈ ದಿನ ನಿಮ್ಮ ಮಾನಸಿಕೆ ನೆಮ್ಮದಿಗೆ ಪೂರಕವಾದ ವಾತಾವರಣ ಇರಲಿದೆ. ಮನೆಯ ವಿಚಾರವೊಂದು ನಿಮ್ಮಲ್ಲಿ ಸಂತಸ ಮೂಡಿಸಲಿದೆ. ಬಹು ಸಮಯದ ಖರ್ಚು ಕಡಿಮೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಗಳ ತರಲಿದೆ. ನೀವು ಯಾರಿಂದಾದರು ಹಣ ಪಡೆದರೆ ಅವರಿಗೆ ಮರಳಿ ನೀಡುವಿರಿ. ಇದು ನಿಮ್ಮಲ್ಲಿ ಸಂತಸ ತರಲಿದೆ. ಹೊಸ ಆದಾಯ ಪಡೆಯುವ ನಿಮ್ಮ ಬಯಕೆ ಮತ್ತೆ ಮುಂದಕ್ಕೆ ಹೋಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ನೀವು ಮಾತುಗಳ ಆಡುವ ಮುನ್ನ ಹಲವು ಬಾರಿ ಆಲೋಚಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಮಾತುಗಳು ಕಲಹಗಳಿಗೆ ಕಾರಣವಾಗಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರು ಇಂದು ಉದರ ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗಬಹುದು. ಯಾರ ಜೊತೆಯೂ ನೀವು ಮನಸ್ಥಾಪ ಮಾಡಿಕೊಳ್ಳಬೇಡಿ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಮಕ್ಕಳ ಆರೋಗ್ಯದ ಕಡೆಗೆ ಗಮನವಿಡಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನೀವು ಮಾಡಬೇಕಿದ್ದ ಕೆಲಸವೊಂದನ್ನು ಇಂದು ಮಾಡಿ ಮುಗಿಸುವಿರಿ. ಕುಟುಂಬದೊಂದಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಹೊಸ ಸಾಲ ಮಾಡಬೇಡಿ. ಪ್ರೇಮಿಗಳಿಗೆ ಇಂದು ಉತ್ತಮ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಕೆಲಸಗಳ ಕುರಿತ ಪ್ರಮಾಣಿಕ ಪ್ರಯತ್ನ ಉತ್ತಮ ಫಲ ತರಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭ ನೋಡುವ ದಿನವಾಗುತ್ತಿದೆ. ದಾಂಪತ್ಯ ವಿಚಾರದಲ್ಲಿ ತಾಳ್ಮೆಯಿಂದಿರಿ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಈ ದಿನವು ಬಹಳ ಚಿಂತೆಯಿಂದ ಕೂಡಿರಲಿದೆ. ನಿಮ್ಮ ಹಲವು ಹಣಕಾಸಿನ ವಿಚಾರಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಮುಖ್ಯ ತಿರುವಿಗೆ ಕಾರಣವಾಗಬಹುದು. ಪ್ರೇಮಿಗಳು, ದಂಪತಿ ಇಂದು ಮಧುರ ಕ್ಷಣಗಳ ನೋಡುವಿರಿ.



Click it and Unblock the Notifications