Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
January 28 Horoscope: ಒಳ್ಳೆತನ ದುರುಪಯೋಗ ಸಂಭವ
ವೈದಿಕ ಶಾಸ್ತ್ರದ ಪ್ರಕಾರ ಜನವರಿ 28 (January 28 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ಆರೋಗ್ಯ ಸಂಬಂಧವಾಗಿ ನಿಮಗೆ ಅನಾನುಕೂಲದ ದಿನ. ಹಣಕಾಸಿನ ಒತ್ತಡದ ಕಾರಣದಿಂದ ನಿಮ್ಮಲ್ಲಿ ದಿನವಿಡಿ ಚಿಂತೆ ಇರಲಿದೆ. ಸಂಬಂಧಿಕರ ಕಾರಣಕ್ಕೆ ನೀವು ಪ್ರಯಾಣ ಮಾಡಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಸಾಮಾನ್ಯ ದಿನವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳ ಮುಂದೂಡಬಹುದು, ಕೆಲವು ಕೆಲಸಕ್ಕೆ ಹಣಕಾಸಿನ ಅಡ್ಡಿಗಳಿವೆ. ದಾಂಪತ್ಯ ವಿಚಾರದಲ್ಲಿ ನಿಮಗೆ ನೋವಿನ ದಿನವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಅನುಕೂಲಕರ. ನಿಮ್ಮ ಆದಾಯದ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವ್ಯಾಪಾರ ಸಂಬಂಧಿತ ವಿಚಾರವಾಗಿ ನೀವು ಯಾರೊಂದಿಗಾದರು ಮಾತುಕತೆಗೆ ಮುಂದಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಗೃಹಿಣಿಯರಲಿಗೆ ಈ ದಿನಗಳು ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಇಂದು ಕಷ್ಟದ ದಿನವಾಗುತ್ತಿದೆ. ನಿಮ್ಮ ಹಣಕಾಸಿನ ವಿಚಾರವೊಂದರಲ್ಲಿದ್ದ ಸಮಸ್ಯೆ ದೂರಾಗಲಿದೆ. ಯಾರಿಗೂ ಸಾಲ ನೀಡುವುದು ಹಣ ನೀಡುವ ಕೆಲಸಕ್ಕೆ ಮುಂದಾಗಬೇಡಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಉತ್ತಮ ದಿನ. ವ್ಯಾಪಾರಿಗಳು ಹೆಚ್ಚು ಆದಾಯ ನೋಡಬಹುದು. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಮನದಲ್ಲಿನ ಚಿಂತೆಯೊಂದು ದೂರಾಗಲಿದೆ. ಬಹು ಸಮಯದ ಹಣಕಾಸಿನ ಸಮಸ್ಯೆಯಲ್ಲಿ ತಾತ್ಕಾಲಿಕ ಪರಿಹಾರ ಪಡೆಯಬಹುದು. ಯಾರಿಗೂ ಸಾಲ ನೀಡಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ದಿನ ಉತ್ತಮ ದಿನ. ಗೃಹಿಣಿಯರಿಗೆ ಈ ದಿನ ಹಣಕಾಸಿನ ಒತ್ತಡವಿದೆ. ಉದ್ಯೋಗದ ಸ್ಥಳದಲ್ಲಿ ತಾಳ್ಮೆಯಿಂದ ಇರುವುದು ಉತ್ತಮ. ನಿಮ್ಮ ಅಮೂಲ್ಯ ವಸ್ತುಗಳ ಕುರಿತಾಗಿ ಜಾಗ್ರತರಾಗಿರಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಪ್ರಯಾಣಗಳ ಮಾಡುವ ದಿನ. ಕೆಲಸದ ವಿಚಾರವಾಗಿ ಅಥವಾ ಆಪ್ತರೊಬ್ಬರ ವಿಚಾರ ಸಂಬಂಧವಾಗಿ ಪ್ರಯಾಣ ಮಾಡಬಹುದು. ಆದಾಯ ತರುವ ಮೂಲವು ನಿಮಗೆ ಶುಭ ತರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ವಾಹನ ವಿಚಾರವಾಗಿಯೂ ಶುಭವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಅನಾನುಕೂಲವಿದೆ. ಬಹು ಸಮಯದಿಂದ ನೀವು ಮಾಡಬೇಕಿದ್ದ ಕೆಲಸವು ಮತ್ತೆ ಮುಂದೂಡಬಹುದು. ವ್ಯಾಪಾರಗಳು ಶುಭವಾಗುತ್ತವೆ. ನಿಮ್ಮಿಂದಾಗಿ ಮನೆಯಲ್ಲಿ ಶುಭ ಕಾರ್ಯ ಕುರಿತು ಮಾತುಕತೆಗಳು ನಡೆಯಲಿವೆ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನವು ಸಾಮಾನ್ಯವಾಗಿರಲಿದೆ. ನಿಮ್ಮ ಹಲವು ಕಲಸಗಳಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ. ದಾಂಪತ್ಯ ಸಂಬಂಧದಲ್ಲಿ ಹಣಕಾಸಿನ ವಿಚಾರವು ಸಣ್ಣ ಮಟ್ಟದ ಮನಸ್ತಾಪಗಳ ತರಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ಮಾಡಲಿದ್ದೀರಿ. ಪೂರ್ವ ನಿರ್ಧರಿತ ಕೆಲಸಗಳಲ್ಲಿ ನಿಮಗೆ ಅನೇಕ ರೀತಿಯ ಶುಭವಿದೆ. ಪ್ರಯಾಣಗಳ ಮಾಡುತ್ತೀರಿ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಅನುಕೂಲಗಳ ತರಲಿದೆ. ನಿಮ್ಮಿಂದಾಗಿ ಹೊಸ ಕೆಲಸಗಳು ಆರಂಭಗೊಳ್ಳಲಿದೆ. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಿದೆ. ವ್ಯಾಪಾರಿಗಳು ದಿನದ ಅಂತ್ಯದಲ್ಲಿ ಲಾಭ ನೋಡಬಹುದು. ವೈದ್ಯಕೀಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿ ಜನರು ಇಂದು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬ, ಕೆಲಸದ ಸ್ಥಳದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಯಾರಿಂದಾದರು ಹಣ ಪಡೆದಿದ್ದರೆ ಮರಳು ನೀಡುವುದು ಉತ್ತಮ. ನಿಮ್ಮ ಒಳ್ಳೆತನವನ್ನು ದುರುಪಯೋಗ ಪಡಿಸಿಕೊಳ್ಳಬಹುದು.



Click it and Unblock the Notifications
