Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 27 Horoscope: ವಾಹನ ವಿಚಾರದಲ್ಲಿಂದು ಎಚ್ಚರಿಕೆಯಿಂದಿರಿ
ವೈದಿಕ ಶಾಸ್ತ್ರದ ಪ್ರಕಾರ ಜನವರಿ 27 (January 27 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಮಾಡಬೇಕಿದ್ದ ಕೆಲಸವು ಕೈಗೂಡಲಿದೆ. ಮನೆ ವಿಚಾರವಾಗಿ ಶುಭವಿದೆ. ಆಪ್ತರೊಬ್ಬರಿಂದ ಅಥವಾ ಬ್ಯಾಂಕ್ ಸಾಲ ಕುರಿತಾಗಿ ನೀವು ಬಹಳ ದಿನದಿಂದ ಪ್ರಯಾಣಗಳ ಮಾಡುತ್ತಿದ್ದರೆ ಈ ದಿನ ಶುಭವಿದೆ. ಖರ್ಚುಗಳನ್ನು ಕಡಿಮೆ ಮಾಡಬೇಕಿದೆ.
ವೃಷಭ ರಾಶಿ
ನಿಮಗಿಂದು ಉತ್ತಮ ದಿನ. ನೀವು ಬಯಸಿದ ಪ್ರಯಾಣ ಮಾಡಬಹುದು. ಶುಭ ಕಾರ್ಯ ಸಂಬಂಧಿತ ವಿಚಾರಗಳಲ್ಲಿ ನೀವು ಬಲವಾದ ನಿರ್ಧಾರ ಮಾಡಲಿದ್ದೀರಿ. ಮಕ್ಕಳ ಆರೋಗ್ಯ ವಿಚಾರದಲ್ಲಿ ಶುಭವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಸಮಸ್ಯೆಗಳಿಂದ ತುಂಬಿರಬಹುದು. ಮನೆಯಲ್ಲಿನ ವಿಚಾರಗಳು ನಿಮ್ಮಲ್ಲಿ ಚಿಂತೆ ತರಲಿದೆ. ಆಪ್ತರೊಬ್ಬರಿಂದ ಹಣಕಾಸಿನ ಬೇಡಿಕೆ ಬರುವುದು. ನಿಮ್ಮ ಬಹುಮುಖ್ಯ ಕೆಲಸವೊಂದು ನಿಮಗೆ ಖರ್ಚುಗಳ ತರಬಹುದು.
ಕರ್ಕ ರಾಶಿ
ನಿಮಗಿಂದು ಉತ್ತಮ ದಿನ. ಗೃಹಿಣಿಯರಲ್ಲಿ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಅವಿವಾಹಿತರು ಈ ದಿನ ಹಣ ಗಳಿಸಬಹುದು. ಉದ್ಯೋಗ ಸಂಬಂಧವಾಗಿ ಇಷ್ಟು ದಿನಗಳಿಂದ ಇದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಮನೆಯ ವಿಚಾರವು ಸಂತಸದಿಂದ ಕೂಡಿರಲಿದೆ.
ಸಿಂಹ ರಾಶಿ
ನಿರುದ್ಯೋಗಿಗಳಿಗೆ ಈ ದಿನವು ಬಹಳ ಅನುಕೂಲ ತರುವ ದಿನ. ನೀವು ಮಾಡಬೇಕಿದ್ದ ಕೆಲಸವೊಂದನ್ನು ಮಾಡಿ ಮುಗಿಸಬಹುದು. ದಾಂಪತ್ಯದಲ್ಲಿ ಸಂತಸ ತರುವ ದಿನವಾಗಲಿದೆ. ನೀವಿಂದು ಪ್ರಯಾಣ ಮಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ. ಹೊಸ ಖರ್ಚುಗಳಿದ್ದರೂ ಆದಾಯದಲ್ಲಿ ಏರಿಕೆ ನೋಡಬಹುದು. ಪ್ರೇಮಿಗಳು, ದಾಂಪತ್ಯ ವಿಚಾರ, ಕುಟುಂಬ ವಿಚಾರಗಳು ಎಂದಿನಂತೆ ಇರಲಿದೆ.
ತುಲಾ ರಾಶಿ
ಇಂದು ನೀವು ನಿಮ್ಮ ಪ್ರಮುಖ ಅಥವಾ ಬೆಲೆ ಬಾಳುವ ವಸ್ತುಗಳ ಕುರಿತು ಎಚ್ಚರಿಕೆಯಿಂದ ಇರಬೇಕು. ಉದರ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಕುಟುಂಬಸ್ಥರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡಬೇಕಾಗಿ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಹಲವು ವಿಚಾರದಲ್ಲಿ ಲಾಭ ನೋಡಬಹುದು. ಸ್ವಂತ ಉದ್ಯೋಗದಲ್ಲಿ ನಿಧಾನಗತಿ ನೋಡುವಿರಿ, ಹಾಗೆ ದೊಡ್ಡ ಖರ್ಚುಗಳಿಗೂ ಇಂದು ಕಾರಣರಾಗುತ್ತೀರಿ.
ಧನು ರಾಶಿ
ಧನು ರಾಶಿ ಜನರು ಇಂದು ಹಣಕಾಸಿನ ವಿಚಾರವಾಗಿ ಚಿಂತೆ ಮಾಡಬಹುದು. ಆದ್ರೆ ದಿನದ ಅಂತ್ಯದಲ್ಲಿ ಸಮಾಧಾನವಾಗಲಿದೆ. ವ್ಯಾಪಾರ ಸಂಬಂಧಗಳು ಗಟ್ಟಿಯಾಗಲಿವೆ. ವ್ಯವಹಾರ ಸಂಬಂಧಿಸಿದಂತೆ ದೊಡ್ಡ ಒಪ್ಪಂದದ ಕುರಿತಾದ ಮಾತುಕತೆ ಇರಲಿದೆ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲಗಳ ತರುವುದು. ನೀವು ಬಯಸಿದಂತೆ ಪ್ರಯಾಣಗಳಲ್ಲಿ ಶುಭವಾಗುತ್ತದೆ. ವಾಹನ ಕುರಿತಾದ ಬಿಕ್ಕಟ್ಟುಗಳು ದೂರಾಗಲಿವೆ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಉತ್ತಮವಾಗಿರಲಿದೆ. ಯಾರಿಂದಾದರು ನೀವು ಹಣ ಪಡೆಯುವುದ ಬಾಕಿ ಉಳಿಸಿದ್ದರೆ ಇಂದು ಪ್ರಯತ್ನದಲ್ಲಿ ಫಲ ಸಿಗಬಹುದು. ನಿಮ್ಮ ಕಚೇರಿ ಸಂಬಂಧಿತ ಸಮಸ್ಯೆಗಳು ದೂರಾಗಲಿದೆ. ಮನೆಯಲ್ಲಿ ಹಣಕಾಸಿನ ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ಸಮಯ ಆಗಿರಲಿದೆ. ನಿಮಗೆ ಬೇಕಾಗಿದ್ದ ವಸ್ತುವೊಂದನ್ನು ಖರೀದಿಸುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಬಹಳ ಉತ್ತಮ. ಸಹೋದರರೊಂದಿಗೆ ಇಂದು ಸಂತಸದ ವಾತಾವರಣ ಇರಲಿದೆ.



Click it and Unblock the Notifications