January 26 Horoscope: ದುಡುಕಿನ ನಿರ್ಧಾರದಿಂದ ಸಮಸ್ಯೆಗಳು ಬರಬಹುದು!

ವೈದಿಕ ಶಾಸ್ತ್ರದ ಪ್ರಕಾರ ಜನವರಿ 26 (January 26 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನ ಸವಾಲುಗಳಿಂದ ತುಂಬಿರಲಿದೆ. ನಿಮ್ಮ ಹಲವು ವಿಚಾರಗಳಿಂದ ಸಮಸ್ಯೆ ಎದುರಿಸಬಹುದು. ಅದ್ರಲ್ಲೂ ಆರೋಗ್ಯ ವಿಚಾರವಾಗಿ ಈ ದಿನ ಅತ್ಯಂತ ಕಷ್ಟಕರ. ನೀವು ಪ್ರಯಾಣಗಳಿಂದ ತುಂಬಿದ ಕೆಲಸಗಳ ಮಾಡುವ ಮಂದಿಯಾಗಿದ್ದರೆ ಬಹಳ ಎಚ್ಚರಿಕೆ ಇಡಬೇಕಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ ಜನರಲ್ಲಿ ಈ ದಿನ ಮಿಶ್ರಫಲ ತರಲಿದೆ, ನೀವು ಯಾರಿಂದಾದರು ಸಹಾಯ ಬಯಸಿದ್ದರೆ ಈ ದಿನ ಸಿಗದೆ ಇರಬಹುದು. ದಾಂಪತ್ಯದಲ್ಲಿ ಮುನಿಸುಗಳು ಎದುರಾಗುತ್ತದೆ. ದಿನದ ಅಂತ್ಯದಲ್ಲಿ ಹಣಕಾಸು ಸಂಬಂಧಿತ ಸಮಸ್ಯೆಗೆ ಪರಿಹಾರ ಸಿಗಲಿದೆ.

January-26-2025-daily-horoscope-prediction

ಮಿಥುನ ರಾಶಿ

ಮಿಥುನ ರಾಶಿ ಜನರಲ್ಲಿ ಈ ದಿನ ಬಹಳ ಅನುಕೂಲಗಳ ತರಲಿದೆ. ನೀವು ಯಾರಿಂದಾದರು ಹಣ ಬಯಸಿದ್ದರೆ ಈ ದಿನ ಸಿಗಬಹುದು. ವಾಹನ ಖರ್ಚುಗಳು ಕಡಿಮೆಯಾಗುತ್ತದೆ. ಸಂಬಂಧದಲ್ಲಿ ಮಾಧುರ್ಯತೆ ಹೆಚ್ಚಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಒತ್ತಡದಿಂದ ತುಂಬಿದ ದಿನ. ನೀವು ಉದ್ಯೋಗದಲ್ಲಿದ್ದರೆ ಈ ದಿನ ಒತ್ತಡ ಎದುರಿಸುವಿರಿ. ಗೃಹಿಣಿಯರಲ್ಲಿ ಹಣಕಾಸಿನ ಒತ್ತಡ ನೋಡಬಹುದು. ಆಪ್ತರಿಂದ ನಿಮಗೆ ಸಮಸ್ಯೆಗಳು ಬರಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶಗಳ ತರಲಿದೆ. ಅದ್ರಲ್ಲೂ ನಿಮ್ಮ ದೊಡ್ಡ ಕೆಲಸವೊಂದು ನೀವು ಅಂದುಕೊಂಡ ಫಲಿತಾಂಶ ತರಲಿದೆ. ಇಂದು ಖರೀದಿ, ಮಾರಾಟದಲ್ಲಿ ಶುಭವಿದೆ. ಷೇರುಪೇಟೆ ಸಂಬಂಧಿತ, ಉಳಿತಾಯ, ಹೂಡಿಕೆ ವಿಚಾರಗಳು ಲಾಭಕರವಾಗಲಿವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನವು ಅನುಕೂಲಕರ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಶುಭವಾಗುವುದು. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರುವುದು. ವ್ಯಾಪಾರಿಗಳು ದೊಡ್ಡ ಒಪ್ಪಂದದ ಮೂಲಕ ತಮ್ಮ ಆದಾಯ ಹೆಚ್ಚು ಮಾಡಿಕೊಳ್ಳಬಹುದು. ದಾಂಪತ್ಯದಲ್ಲಿ ಶುಭ ದಿನ.

ತುಲಾ ರಾಶಿ

ತುಲಾ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ ತರಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುವ ಅವಕಾಶಗಳಿವೆ. ಆದಾಯದ ಮೂಲವು ಮತ್ತಷ್ಟು ಶ್ರಮ ಬೇಡಲಿದೆ. ಗೃಹಿಣಿಯರ ಹಣಕಾಸು ವ್ಯವಹಾರದಲ್ಲಿ ತೊಡಕುಗಳಿವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ಶುಭ ಕಾರ್ಯವೊಂದರಲ್ಲಿ ಭಾಗಿಯಾಗಬಹುದು. ಪ್ರಯಾಣಗಳ ಮಾಡುವಿರಿ. ಸಂಬಂಧಿಕರ ಭೇಟಿಯಾಗುತ್ತೀರಿ. ಕೆಲಸದ ಸ್ಥಳದಲ್ಲಿನ ಗೊಂದಲಗಳು ನಿಮಗೆ ಚಿಂತೆ ತರಬಹುದು.

ಧನು ರಾಶಿ

ಧನು ರಾಶಿ ಜನರಲ್ಲಿ ಈ ದಿನವು ಸಾಮಾನ್ಯವಾಗಿರಲಿದೆ, ನಿಮ್ಮ ಹಳೆಯ ಕೆಲಸಗಳು ಮತ್ತೆ ಚಿಂತೆಗೆ ಕಾರಣವಾಗಲಿವೆ, ಹೀಗಾಗಿ ಅಂತಹ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ.

ಮಕರ ರಾಶಿ

ಮಕರ ರಾಶಿಯವರು ಇಂದು ಸರ್ಕಾರಿ ದಾಖಲಾತಿಗಳ ಸಂಬಂಧವಾಗಿ ಪ್ರಯಾಣ, ಓಡಾಟಗಳ ಮಾಡಬೇಕಾಗುತ್ತದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ನಿಮ್ಮ ಹಣಕಾಸಿನ ಸಮಸ್ಯೆಯನ್ನು ಆಪ್ತರೊಬ್ಬರೊಬ್ಬರಿಗೆ ಹೇಳುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ತಂದೆ ತಾಯಿಯ ಆರೋಗ್ಯದಲ್ಲಿ ದೊಡ್ಡ ಬದಲಾವಣೆಗಳ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಹಾಯ ಬರಲಿದೆ. ನಿಮ್ಮ ಅಮೂಲ್ಯ ವಸ್ತುಗಳ ಕಡೆ ಗಮನವಿಡಿ.

ಮೀನ ರಾಶಿ

ಮೀನ ರಾಶಿ ಜನರಲ್ಲಿ ಇಂದು ಸಮಸ್ಯೆಗಳು ಬರಬಹುದು. ಹಣಕಾಸಿನ ವಿಚಾರವಾಗಿ ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಹಳೆಯ ಅನಾರೋಗ್ಯ ಸಮಸ್ಯೆಯೊಂದು ಇಂದು ಮತ್ತೆ ಕಾಡಬಹುದು. ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ ನೋಡಬಹುದು.

English summary

January-26-2025-daily-horoscope-prediction-for-12-zodiac-signs-in-kannada

Here is Horoscope Today, 26 January Horoscope: Daily Horoscope Prediction For 12 Zodiac signs In Kannada
Story first published: Monday, January 26, 2026, 5:00 [IST]
X
Desktop Bottom Promotion