Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜನವರಿ 25ರ ದಿನ ಭವಿಷ್ಯ: ಶನಿವಾರ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಚೆನ್ನಾಗಿರಲಿದೆ,ಕುಟುಂಬದ ಜೊತೆಗೆ ಸಮಯ ಕಳೆಯಲು ಸಾಧ್ಯವಾಗುವುದು. ನೀವು ಈದಿನ ಬಜೆಟ್ ಮೀರಿ ಖರ್ಚು ಮಾಡದಂತೆ ಸಲಹೆ ನೀಡಲಾಗುವುದು. ವ್ಯಾಪಾರಿಗಳಿಗೆ ಕಳೆದುಕೊಂಡ ನಷ್ಟವನ್ನು ಭರಿಸಲು ಸಾಧ್ಯವಾಗುವುದು. ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ.

ವೃಷಭ ರಾಶಿ
ನೀವು ಅನಗ್ಯತ ಚಿಂತೆ ಬಿಡಿ, ಎಲ್ಲವೂ ಸರಿಯಾಗಲಿದೆ, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ,ಕುಟುಂಬದಲ್ಲಿ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಸರಿಯಾಗಲಿದೆ. ಕೆಲಸದಲ್ಲಿ ನೀವು ಒತ್ತಡ ತೆಗೆದುಕೊಳ್ಳಬೇಡಿ, ಎಲ್ಲವೂ ಸರಿಯಾಗಲಿದೆ.
ಮಿಥುನ ರಾಶಿ
ಈ ದಿನ ಕೆಲ ವಿಷಯದ ಬಗ್ಗೆ ಚಿಂತೆ ಕಾಡಬಹುದು, ಆದರೆ ಬಾಸ್ ಕಡೆಯಿಂದ ಸಿಗುವ ಸುದ್ದಿ ಮನಸ್ಸಿಗೆ ನೆಮ್ಮದಿ ನೀಡಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಆರ್ಥಿಕ ವಿಷಯದಲ್ಲಿ ಜಾಗ್ರತೆ ಸಿಗಲಿದೆ.
ಕರ್ಕ ರಾಶಿ
ಕೆಲವೊಂದು ಚಿಂತೆ ನಿಮ್ಮನ್ನು ಕಾಡಬಹುದು, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ನೀವಾಡುವ ಮಾತಿನ ಮೇಲೆ ಗಮನಹರಿಸಿ. ನಿಮ್ಮ ಮಾತೇ ನಿಮಗೆ ಸಮಸ್ಯೆಯಾಗಬಹುದು, ಈ ಬಗ್ಗೆ ಜಾಗ್ರತೆವಹಿಸಿ.
ಸಿಂಹ ರಾಶಿ
ವೃತ್ತಿ ಜೀವನದಲ್ಲಿ ಕೆಲ ಸವಾಲುಗಳು ಬರಬಹುದು,ಆರೋಗ್ಯದ ಕಡೆಗೆ ಗಮನಹರಿಸಿ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಕೆಲಸದಲ್ಲಿ ಭರವಸೆ ಕಳೆದುಕೊಳ್ಳಬೇಡಿ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಕನ್ಯಾ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯಲು ಸಾಧ್ಯವಾಗುವುದು, ಆರ್ಥಿಕವಾಗಿ ಈ ದಿನ ಅನುಕೂಲಕರವಾಗಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆದರೆ ಆರೋಗ್ಯದ ಕಡೆಗೆ ಗಮನಹರಿಸಿ ಎಂದು ಸಲಹೆ ನೀಡಲಾಗುವುದು.
ತುಲಾ ರಾಶಿ
ಈ ದಿನ ನಿಮಗೆ ಶುಭವಾಗಿದೆ. ನೆಗೆಟಿವ್ ಜನರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು, ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆಯೇ ಲಾಭ ಗಳಿಸುತ್ತೀರಿ.
ವೃಶ್ಚಿಕ ರಾಶಿ
ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ, ವಿವಾಹಿತರಿಗೂ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ಅರೋಗ್ಯ ಸಮಸ್ಯೆವಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ವೃತ್ತಿ ಜೀವನ ಚೆನ್ನಾಗಿರಲಿದೆ, ಆರ್ಥಿಕ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿರಲಿದೆ.
ಧನು ರಾಶಿ
ಈ ದಿನ ನಿಮಗೆ ತುಂಬಾನೇ ಉತ್ತಮವಾಗಿರಲಿದೆ, ನಿಮ್ಮ ಕೆಲಸ ಕಾರ್ಯಗಳಿಂದ ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಕಾನೂನುಬಾಹಿರ ಚಟುವಟಿಕೆಯಿಂದ ದೂರವಿರಿ.
ಮಕರ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿರಲಿದೆ, ಕುಟುಂಬದ ಜೊತೆ ಸಂತೋಷದಿಂದ ಸಮಯ ಕಳೆಯಲು ಸಾಧ್ಯವಾಗುವುದು
ಕುಂಭ ರಾಶಿ
ಈ ಹಿಂದೆ ತೆಗೆದುಕೊಂಡ ನಿರ್ಧಾರಗಳ ಫಲ ಈಗ ದೊರೆಯಲಿದೆ, ಹಿಂದೆ ಮಾಡಿದ್ದ ಹೂಡಿಕೆ ಲಾಭ ತರಲಿದೆ, ಕುಟುಂಬದ ಜೊತೆ ನೀವು ಟ್ರಪ್ ಪ್ಲ್ಯಾನ್ ಮಾಡಬಹುದು. ಆರ್ಥಿಕ ದೃಷ್ಟಿಯಿಂದಲೂ ಈ ದಿನ ಅನುಕೂಲಕರವಾಗಿದೆ.
ಮೀನ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಆದರೆ ನೀವು ನಿಮ್ಮ ಮಾತು ಹಾಗೂ ವರ್ತನೆ ಕಡೆಗೆ ಗಮನಹರಿಸಿ, ನಿಮ್ಮ ಮಾತುಗಳಿಂದ ಯಾರ ಮನಸ್ಸು ನೋಯಿಸಬೇಡಿ. ಸಂಗಾತಿಯ ಭಾವನೆಗಳನ್ನು ಗೌರವಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
