Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 25 Horoscope: ಪ್ರಯಾಣಗಳಲ್ಲಿ ನಿಮಗೆ ದೊಡ್ಡ ಕೆಲಸ ಸಾಕಾರ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 25 (January 25 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಸಮಸ್ಯೆಗಳು ಬರಬಹುದು. ನಿಮ್ಮ ಬಯಕೆಯ ಕೆಲಸವೊಂದು ಸಮಸ್ಯೆಯನ್ನು ತರಬಹುದು. ನಿಮ್ಮದಲ್ಲದ ಕೆಲಸಕ್ಕಾಗಿ ಪ್ರಯಾಣ ಮಾಡುವಿರಿ. ಆಪ್ತರೊಬ್ಬರಿಂದ ನಿಮ್ಮಿಂದ ಯಾವುದಾದರು ಕೆಲಸದಲ್ಲಿ ಸಹಾಯವಾಗಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ನಿಮ್ಮ ಅನೇಕ ಕೆಲಸವನ್ನು ದೊಡ್ಡ ಲಾಭದೊಂದಿಗೆ ಮುಗಿಸುವಿರಿ. ವಾಹನ ವಿಚಾರದಲ್ಲಿ ಇದ್ದಂತಹ ಖರ್ಚುಗಳು ಕಡಿಮೆಯಾಗುತ್ತದೆ. ಹಣಕಾಸು ವಿಚಾರವಾಗಿ ಅನುಕೂಲಕರ ಸಮಯ ಆಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮೆಲ್ಲಾ ಕೆಲಸದಿಂದ ಇಂದು ಮುಕ್ತರಾಗಿರುತ್ತೀರಿ. ಪ್ರಯಾಣಗಳ ಮಾಡುವಿರಿ. ಗೃಹಿಣಿಯರು ಈ ದಿನ ಶುಭ ದಿನವಾಗಿ ನೋಡುತ್ತಾರೆ. ಆಹಾರ ಸಂಬಂಧವಾಗಿ ನಿಮಗೆ ಖರ್ಚುಗಳಿವೆ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಓಡಾಟಗಳಿಂದ ತುಂಬಿದೆ. ವಿಶ್ರಾಂತಿ ಪಡೆಯುವ ಬಯಕೆ ಹಾಳಾಗಬಹುದು. ದಿನದ ಅಂತ್ಯದಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಕಾಡಬಹುದು. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ. ದಾಂಪತ್ಯ ವಿಚಾರದಲ್ಲಿ ತಾಳ್ಮೆ ಇಟ್ಟುಕೊಳ್ಳುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ನೀವು ಉದ್ಯೋಗ ಸಂಬಂಧಿತ ವಿಚಾರದಲ್ಲಿ ಚಿಂತೆ ಮಾಡುವ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಮಿಶ್ರಫಲ ನೋಡುತ್ತಾರೆ. ವಿವಾಹಿತರಲ್ಲಿ ಸಣ್ಣ ಪುಟ್ಟ ಕಲಹಗಳ ನೋಡಬಹುದು. ನಿಮ್ಮ ಅಮೂಲ್ಯ ವಸ್ತುಗಳನ್ನು ಜೋಪಾನ ಮಾಡುವುದು ಉತ್ತಮ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಕಡೆಗೂ ಗಮನವಿಡಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವಾಹನ ಲಾಭವಿದೆ. ಬೇರೆಯವರಿಂದ ನೀವು ಬಯಸಿದ ವಸ್ತು ಪಡೆಯಬಹುದು. ದೂರ ಪ್ರಯಾಣಗಳ ಮಾಡಬೇಕಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಸಮಸ್ಯೆಗಳು ಬರಬಹುದು. ನೀವು ಪ್ರಯಾಣಿಸುವಾಗ ಅನಾರೋಗ್ಯಕ್ಕೆ ತುತ್ತಾಗಬಹುದು. ನಿಮ್ಮ ವಸ್ತುಗಳ ಮೇಲೆ ನಿಗಾ ಇಡಿ. ಸಂಬಂಧಿಕರಿಂದ ಹಣಕಾಸಿಗೆ ಬೇಡಿಕೆಗಳು ಬರಬಹುದು. ದಾಂಪತ್ಯದಲ್ಲಿ ನಿಮಗೆ ಉತ್ತಮ ದಿನವಲ್ಲ.
ಧನು ರಾಶಿ
ಧನು ರಾಶಿಯವರು ಪ್ರಯಾಣಗಳಲ್ಲಿ ತೊಡಗುವ ದಿನವಾಗುತ್ತಿದೆ. ಯಾರಿಂದಾದರು ಹಣ ಪಡೆದಿದ್ರೆ ಇಂದು ಮರಳಿ ನೀಡಬೇಕಾದ ಒತ್ತಡಕ್ಕೆ ನೀವು ಒಳಗಾಗುತ್ತೀರಿ. ನಿಮ್ಮ ಹಣಕಾಸಿನ ಒತ್ತಡದಿಂದ ಚಿಂತೆ ಇರಲಿದೆ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿರಲಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಅನುಕೂಲಗಳಿವೆ. ದಿನದ ಆರಂಭದಲ್ಲಿ ನಿಮಗೆ ಹಣ ಹರಿದು ಬರಲಿದೆ. ವಾಹನ ಸಂಬಂಧಿತ ಖರ್ಚುಗಳಿದ್ದರೂ ಅದರಿಂದ ನೆಮ್ಮದಿ ಇದೆ. ಪ್ರೇಮಿಗಳಿಗೆ ಇಂದು ಮಧುರ ದಿನ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಯಾರಿಗೂ ಹಣಕಾಸಿನ ನೆರವು ನೀಡಲು ಮುಂದಾಗಬೇಡಿ. ಮನೆಗಾಗಿ ನೀವು ಖರ್ಚು ಮಾಡಬಹುದು. ಹಿರಿಯ ಮಾತಿನಂತೆ ನಡೆಯುವುದು ಉತ್ತಮ. ಇಂದು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡುವಿರಿ. ಆರೋಗ್ಯದಲ್ಲಿ ಸುಧಾರಣೆ ಇದೆ. ಸವಾಲುಗಳನ್ನು ಎದುರಿಸಲು ಸಿದ್ದರಾಗುತ್ತೀರಿ, ಮಕ್ಕಳ ವಿಚಾರವಾಗಿ ಎಚ್ಚರಿಕೆಯಿಂದ ಇರಿ.



Click it and Unblock the Notifications










