Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
January 24 Horoscope: ನೀವುಂದುಕೊಂಡಂತೆ ಕೆಲಸ ಮುಗಿಯುವುದಿಲ್ಲ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 24 (January 24 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ ಯೋಗಗಳ ತರಲಿದೆ, ನೀವು ಬಹು ಸಮಯದಿಂದ ಮಾಡಬೇಕಿದ್ದ ಕೆಲಸವೊಂದನ್ನು ಇಂದು ಪೂರ್ಣ ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಆಹಾರ ವಿಚಾರದಲ್ಲಿ ಜಾಗೃತೆಯಿಂದಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಅನುಕೂಲವಿದೆ. ದೈನಂದಿನ ಕೆಲಸಗಳು ನೀವು ಅಂದುಕೊಂಡ ಫಲಿತಾಂಶ ತರಲಿದೆ. ಯಾರಿಗೂ ಸಾಲ ನೀಡಬೇಡಿ. ಹಣಕಾಸು ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಿ. ಪ್ರೇಮಿಗಳು ಇಂದು ಪ್ರಯಾಣ ಮಾಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ದಿನದ ಅಂತ್ಯದಲ್ಲಿ ನೀವು ಪ್ರಯಾಣ ಮಾಡುವಿರಿ. ಗೃಹಿಣಿಯರಲ್ಲಿ ಉದರ ಸಂಬಂಧಿತ ಸಮಸ್ಯೆ ಬರಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಖರ್ಚುಗಳ ಕುರಿತು ನಿಗಾ ಇಡಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸಮಸ್ಯೆಗಳ ದಿನವಾಗಬಹುದು. ನೀವು ಬಹುಮುಖ್ಯ ಕೆಲಸದಲ್ಲಿ ಹಿನ್ನಡೆ ಅನುಭವಿಸಬಹುದು. ಹಲವು ಚಿಂತೆಯಿಂದ ಈ ದಿನ ತುಂಬಿರಲಿದೆ. ಖರ್ಚುಗಳನ್ನು ನಿಭಾಯಿಸದಿದ್ದರೆ ಮುಂದೆ ಸಮಸ್ಯೆಗಳು ದೊಡ್ಡದಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಆಪ್ತರ ಭೇಟಿಯಾಗಬಹುದು. ಪ್ರಯಾಣ ಮಾಡಬಹುದು. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು. ದಾಂಪತ್ಯದಲ್ಲಿ ಸಂತಸದ ದಿನವಾಗಿರಲಿದೆ. ಕಾಲು ನೋವಿನಿಂದ ನೀವು ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿ ಮಂದಿಗೆ ಉದ್ಯೋಗದ ಸ್ಥಳದಲ್ಲಿ ಒತ್ತಡಗಳಿಂದ ತುಂಬಿರುವ ದಿನವಾಗುತ್ತಿದೆ. ನಿಮ್ಮ ಪ್ರಯಾಣಗಳು ಒತ್ತಡ ತರಲಿವೆ. ಹಣಕಾಸು ವಿಚಾರವಾಗಿ ಪ್ರಮಾಣಿಕ ಮಾತುಕತೆ ಇರಲಿ. ಪ್ರಭಾವಿಯೊಬ್ಬರನ್ನು ಭೇಟಿಯಾಗಬಹುದು. ವ್ಯಾಪಾರ ವಲಯದಲ್ಲಿ ಸಾಮಾನ್ಯ ದಿನವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವಿದೆ. ಪುರುಷರು ಇಂದು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತಾರೆ. ಹಲ್ಲು, ಬಾಯಿ ಸಂಬಂಧಿತ ಅನಾರೋಗ್ಯದಲ್ಲಿ ಎಚ್ಚರವಹಿಸಿ.
ವೃಶ್ಚಿಕ ರಾಶಿ
ನಿಮಗಿಂದು ಸಾಮಾನ್ಯ ದಿನವಾಗುತ್ತಿದೆ. ದಿನದ ಆರಂಭದಲ್ಲಿ ಯಾವುದೇ ಕೆಲಸ ಕೈಗೊಳ್ಳಲು ಆಸಕ್ತಿ ಇರುವುದಿಲ್ಲ. ಹಣಕಾಸು ವಿಚಾರವಾಗಿ ಇದ್ದಂತಹ ಸಮಸ್ಯೆ ಇತ್ಯರ್ಥವಾಗುವ ದಿನವಾಗಬಹುದು. ಪ್ರಯಾಣಗಳಲ್ಲಿ ನೀವು ಬಯಸಿದ ಅಂತ್ಯ ಇರುವುದಿಲ್ಲ.
ಧನು ರಾಶಿ
ಧನು ರಾಶಿಯವರಲ್ಲಿ ಈ ದಿನವು ಪ್ರಯಾಣದಲ್ಲಿ ಕಳೆಯಬಹುದು. ಖರ್ಚುಗಳು ಹೆಚ್ಚಾಗುತ್ತವೆ. ಮನೆಗಾಗಿ ನೀವು ಹೆಚ್ಚು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ವ್ಯವಹಾರ ಸಂಬಂಧವಾಗಿ ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ಮಕ್ಕಳ ಆಟಿಕೆ ವಿಚಾರದಲ್ಲಿ ಎಚ್ಚರವಹಿಸಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರು ಖರ್ಚುಗಳಿಂದ ಸಮಸ್ಯೆಗೆ ತುತ್ತಾಗಬಹುದು. ಆನ್‌ಲೈನ್ ವ್ಯವಹಾರದಲ್ಲಿ ಎಚ್ಚರ ವಹಿಸಿ. ವಾಹನ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಮುಂದೆ ಸಮಸ್ಯೆ ಬರಬಹುದು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನ ಪ್ರಯಾಣಗಳ ಮಾಡುವಿರಿ. ನಿಮ್ಮ ಆಪ್ತರೊಬ್ಬರಿಂದ ನಿಮಗೆ ಶುಭವಿದೆ. ಹಣ ಕೈಸೇರಲಿದೆ. ವ್ಯಾಪಾರಿಗಳು ಲಾಭ ನೋಡಬಹುದು. ದಿನದ ಅಂತ್ಯದಲ್ಲಿ ನಿಮ್ಮ ಆರೋಗ್ಯ ಏರುಪೇರು ಉಂಟಾಗಬಹುದು. ಮನೆಯಲ್ಲಿ ಶಾಂತಿಯ ವಾತಾವರಣವು ನಿಮಗೂ ನೆಮ್ಮದಿ ಎನಿಸಲಿದೆ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. ಕೆಲಸಗಳ ಸಂಬಂಧ ಪ್ರಯಾಣವಿದೆ. ಸಂಜೆ ಸಮಯದಲ್ಲಿನ ಖರ್ಚು ದೊಡ್ಡದಾಗಲಿದೆ. ಅಮೂಲ್ಯ ವಸ್ತುಗಳ ಕಡೆಗೆ ಹೆಚ್ಚು ಗಮನವಿಡಿ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.



Click it and Unblock the Notifications