ದಿನ ಭವಿಷ್ಯ ಜನವರಿ 23: ಮೀನ ರಾಶಿಗೆ ಶುಭ ದಿನ, ಉಳಿದ ರಾಶಿಗಳಿಗೆ ಹೇಗಿರಲಿದೆ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನದ ಭವಿಷ್ಯ ನೋಡೋಣ:

ಮೇಷ ರಾಶಿ
ಕೆಲಸ ಸಂಬಂಧಿಸಿದ ಪ್ರಯಾಣವಿರಬಹುದು,ಈ ದಿನ ವತ್ತಿ ಜೀವನದ ದೃಷ್ಟಿಯಿಂದ ಉತ್ತಮವಾಗಿದೆ, ಒಳ್ಳೆಯ ಅವಕಾಶ ದೊರೆಯಲಿದೆ. ಆರ್ಥಿಕವಾಗಿ ಕೂಡ ಈ ದಿನ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯದತ್ತ ಸಂಪೂರ್ಣ ಗಮನಹರಿಸಲು ಸಾಧ್ಯವಾಗುವುದು.ಕುಟುಂಬದಲ್ಲಿನ ಸಣ್ಣ ಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು.

January 23 Daily Horoscope

ವೃಷಭ ರಾಶಿ
ಈ ದಿನ ನಿಮ್ಮ ಕೆಲಸಕಾರ್ಯಗಳು ನೀವು ಅಂದುಕೊಂಡಂತೆಯೇ ಪೂರ್ಣವಾಗಲಿದೆ. ವ್ಯಾಪಾರಿಗಳಿಗೆ ಈ ದಿನ ಆರ್ಥಿಕವಾಗಿ ಉತ್ತಮವಿದೆ, ಆದರೆ ಹೊಸ ಶತ್ರುಗಳು ಹುಟ್ಟಬಹುದು ಜಾಗ್ರತೆವಹಿಸಿ.ಕುಟುಂಬ ಜೀವನ ಚೆನ್ನಾಗಿರಲಿದೆ.

ಮಿಥುನ ರಾಶಿ
ನೀವು ಬೇಡದ ವಿಚಾರಗಳ ಕಡೆ ಗಮನಹರಿಸಬೇಡಿ, ನಿಮ್ಮ ರಹಸ್ಯ ಬೇರೆಯವರಿಗೆ ಹೇಳಲೂ ಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ. ಇನ್ನು ಸಾಲದ ವ್ಯವಹಾರ ಮಾಡುವುದಾದರೆ ಜಾಗ್ರತೆವಹಿಸಿ, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ ಎಂದು ಸಲಹೆ ನೀಡಲಾಗುವುದು.

ಕರ್ಕ ರಾಶಿ
ಮನೆಯಲ್ಲಿ ಒತ್ತಡದ ಪರಿಸ್ಥಿತಿ ಇರಬಹುದು, ಕೆಲವೊಂದು ಸಮಸ್ಯೆಗಳಿರಬಹುದು, ಅದನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ. ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಬೇಡಿ, ಅಲ್ಲದೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ.

ಸಿಂಹ ರಾಶಿ
ಈ ದಿನ ಹೂಡಿಕೆ ಬಗ್ಗೆ ಜಾಗ್ರತೆವಹಿಸಿ, ತಾಯಿಗೆ ಅನಾರೋಗ್ಯವಿರಬಹುದು, ತಾಯಿಯ ಆರೋಗ್ಯಕ್ಕೆ ಹಣ ಖರ್ಚಾಗಬಹುದು. ಯಾವುದೇ ಕೆಲಸ ಅಪೂರ್ಣವಾಗಿ ಬಿಡಬೇಡಿ. ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಿ.

ಕನ್ಯಾ ರಾಶಿ
ಹಣದ ವಿಷಯದಲ್ಲಿ ಈ ದಿನ ಚೆನ್ನಾಗಿರಲಿದೆ. ವೈಯಕ್ತಿಕ ವಿಚಾರಗಳನ್ನು ಮೂರನೇಯ ವ್ಯಕ್ತಿ ಜೊತೆ ಹಂಚಿಕೊಳ್ಳಬೇಡಿ. ನಿಮ್ಮ ವೃತ್ತಿ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅನಗ್ಯತ ಖರ್ಚಿನಿಂದ ದೂರವಿರಿ.

ತುಲಾ ರಾಶಿ
ಕುಟುಂಬದಲ್ಲಿನ ಸಮಸ್ಯೆ ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು, ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು.ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ, ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.

ವೃಶ್ಚಿಕ ರಾಶಿ
ನೀವು ನಿಮ್ಮ ಕೆಲಸ ಕಾರ್ಯದತ್ತ ಹೆಚ್ಚು ಗಮನಹರಿಸಬೇಕು. ಕುಟುಂಬ ಬದುಕು ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ತಾಯಿಯ ಆರೋಗ್ಯದ ಕಡೆಗೆ ಗಮಹರಿಸಿ.

ಧನು ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿಯೂ ಈ ದಿನ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ,ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ, ಒಟ್ಟಿನಲ್ಲಿ ಈ ದಿನ ನಿಮಗೆ ಎಲ್ಲಾ ರೀತಿಯಿಂದಲೂ ಉತ್ತಮವಾಗಿದೆ.

ಮಕರ ರಾಶಿ
ಈ ದಿನ ಅಪರಿಚಿತರನ್ನು ನಂಬಬೇಡಿ, ನೀವು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವ್ಯಾಪಾರಿಗಳು ಕೂಡ ತಮ್ಮ ವ್ಯವಹಾರದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕುಟುಂಬದ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಉತ್ತಮವಾಗಿದೆ.

ಕುಂಭ ರಾಶಿ
ನೀವು ಖರ್ಚು-ವೆಚ್ಚಗಳ ನಡುವೆ ಸಮತೋಲನ ಕಾಪಾಡಬೇಕು. ಬಜೆಟ್‌ ಮೀರಿ ಖರ್ಚು ಮಾಡಲು ಹೋಗಬೇಡಿ, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಒಟ್ಟಿನಲ್ಲಿ ಈ ದಿನ ಸರಾಸರಿಯಾಗಿರಲಿದೆ.

ಮೀನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಕೆಲಸದಲ್ಲಿ ಅಥವಾ ವೃತ್ತಿ ಬದುಕಿನಲ್ಲಿನ ಸಮಸ್ಯೆ ಬೆಗಹರಿಸಲು ಈ ದಿನ ನಿಮಗೆ ತುಂಬಾನೇ ಉತ್ತಮವಾಗಿದೆ. ಖರ್ಚುಗಳ ಕಡೆ ಗಮನವಿರಲಿ, ಒಟ್ಟಿನಲ್ಲಿ ಈ ದಿನ ಸರಾಸರಿಯಾಗಿರಲಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

January 23 Daily Horoscope: Prediction For !2 Zodiac Signs In Kannada

January 23 Daily Horoscope: Here is prediction for each zodiac signs, read on..
Story first published: Wednesday, January 22, 2025, 23:42 [IST]
X
Desktop Bottom Promotion