Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 23 Horoscope: ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 23 (January 23 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಮಿಶ್ರಫಲವಿದೆ. ಇಂದು ಮನಸ್ಸು ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿರುತ್ತದೆ. ಸಣ್ಣ ಮಾತುಗಳಿಗೂ ಭಾವನಾತ್ಮಕ ಪ್ರತಿಕ್ರಿಯೆ ಬರಬಹುದು. ಕುಟುಂಬದ ಬೆಂಬಲದಿಂದ ಆತ್ಮಸ್ಥೈರ್ಯ ಸಿಗುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲೂ ಶುಭವಿದೆ.
ವೃಷಭ ರಾಶಿ
ಇಂದು ನಿಮಗೆ ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಇರುತ್ತದೆ. ಸಾಮಾಜಿಕ ವಿಷಯಗಳಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮೌಲ್ಯ ಸಿಗುತ್ತದೆ. ನಿಮ್ಮ ದೊಡ್ಡ ವ್ಯವಹಾರಗಳಿಂದ ಹಣ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನೀವು ಮಾಡಬೇಕಿದ್ದ ಕೆಲಸವು ಮುಂದಕ್ಕೆ ಹಾಕಬೇಕಾಗುತ್ತದೆ. ಆರೋಗ್ಯದ ಕಡೆ ದಣಿವು ಕಾಣಿಸಬಹುದು, ವಿಶ್ರಾಂತಿ ಮತ್ತು ಸಮಯ ನಿಯೋಜನೆ ಮುಖ್ಯ. ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ತಾಳ್ಮೆಯಿಂದ ಇರುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ ತರಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ತು, ಹಣ ಕೈ ಸೇರಲಿದೆ. ಜವಾಬ್ದಾರಿಗಳು ಹೆಚ್ಚಾಗುವ ದಿನ. ಕೆಲಸದಲ್ಲಿ ಶ್ರಮ ಹೆಚ್ಚು ಬೇಕಾದರೂ ನಿಮ್ಮ ಪರಿಶ್ರಮ ವ್ಯರ್ಥವಾಗುವುದಿಲ್ಲ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಮಿಶ್ರಫಲದ ದಿನ. ನೀವು ಯಾರಿಂದಾದರು ಹಣ ಬಯಸಿದ್ದರೆ ಇಂದಿನ ಪ್ರಯತ್ನದಲ್ಲಿ ಫಲ ಸಿಗದೆ ಇರಬಹುದು. ದೇವಾಲಯ ಭೇಟಿ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಹಾಗೆಯೇ ಮುಂದುವರೆಯುವ ದಿನವಾಗುತ್ತಿದೆ. ಕುಟುಂಬದಲ್ಲಿ ಶಾಂತೊಯ ವಾತಾವರಣ ನೋಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ಸಮಯ. ಇಂದು ಕಲಿಕೆ ಮತ್ತು ಮಾರ್ಗದರ್ಶನಕ್ಕೆ ಅನುಕೂಲಕರ ದಿನ. ಹೊಸ ವಿಷಯ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಶುಭ ಸುದ್ದಿ ಬರಬಹುದು. ಆಪ್ತರಿಂದ ನಿಮಗೆ ಸಿಗಬೇಕಿದ್ದ ವಸ್ತು ಸಿಗಲಿದೆ.
ತುಲಾ ರಾಶಿ
ನಿಮ್ಮ ದೈನಂದಿನ ಕೆಲಸಗಳಲ್ಲಿ ಇಂದು ಅಡ್ಡಿಗಳು ಎದುರಾಗಬಹುದು. ಅದ್ರಲ್ಲೂ ನಿಮಗೆ ಬಹುಸಮಯದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯೊಂದು ದೊಡ್ಡದಾಗುವ ಲಕ್ಷಣವಿದೆ. ಹಿರಿಯರಲ್ಲಿ ವಿನಯದಿಂದ ವರ್ತಿಸುವುದು ಉತ್ತಮ.
ವೃಶ್ಚಿಕ ರಾಶಿ
ಸಂಬಂಧಗಳಲ್ಲಿ ಸಮತೋಲನ ಸಾಧಿಸಬೇಕಾದ ದಿನ. ನಿಮ್ಮ ವ್ಯಾಪಾರ ಸಂಬಂಧಿತ ಅಡ್ಡಿ ನಿವಾರಣೆ ಸಂಭವವಿದೆ. ಗೃಹಿಣಿಯರಲ್ಲಿ ಹೆಚ್ಚು ಖರ್ಚು ಮಾಡಬೇಕಾದ ದಿನವಾಗಬಹುದು. ಕೆಲಸದಲ್ಲಿ ಒತ್ತಡ ಇದ್ದರೂ ದಿನದ ಅಂತ್ಯದಲ್ಲಿ ಶಾಂತತೆ ಇರಲಿದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನವು ಪ್ರಯಾಣಗಳಿಂದ ತುಂಬಿರಬಹುದು. ಹೊಸ ಉದ್ಯೋಗ ಸಂಬಂಧ ನೀವು ಪ್ರಯಾಣ ಮಾಡಬಹುದು. ಸರ್ಕಾರಿ ನೌಕರರಿಗೆ ಸಮಸ್ಯೆಗಳು ಬರಬಹುದು. ಹಣಕಾಸಿನಲ್ಲಿ ನಿಯಂತ್ರಣ ಕಾಪಾಡಿಕೊಳ್ಳುವುದು ಅಗತ್ಯ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಮಿಶ್ರಫಲವಿದೆ. ನೀವು ಯಾವುದಾದರು ವಸ್ತುವನ್ನು ಖರೀದಿಸಲು ಹಣ ಒಗ್ಗೂಡಿಸಿದ್ದರೆ ಆ ಹಣವನ್ನು ಬೇರೆ ಖರ್ಚುಗಳಿಗೆ ವಿನಿಯೋಗಿಸಬಹುದು. ಕುಟುಂಬದೊಂದಿಗೆ ಸಂತೋಷದ ಕ್ಷಣಗಳು ದೊರೆಯುತ್ತವೆ. ಆರೋಗ್ಯದಲ್ಲಿ ಸಾಮಾನ್ಯ ಸ್ಥಿತಿ ಇರುತ್ತದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸಮತೋಲನ ಇರುತ್ತದೆ. ಸಹೋದರರೊಂದಿಗೆ ನಿಮ್ಮ ಬಾಂದವ್ಯ ಹೆಚ್ಚಾಗಲಿದೆ. ಪ್ರೇಮಿಗಳಿಗೆ ಇಂದು ಉತ್ತಮ ದಿನ.
ಮೀನ ರಾಶಿ
ಕೆಲಸದಲ್ಲಿ ನಿಧಾನವಾದರೂ ನಿಶ್ಚಿತ ಪ್ರಗತಿ ಇರಲಿದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಉದರ ಸಂಬಂಧಿ ಸಮಸ್ಯೆ ಕಡಿಮೆಯಾಗಲಿದೆ. ಬಹುದಿನದಿಂದ ಬಯಸಿದ್ದ ವಸ್ತುವೊಂದು ನಿಮಗೆ ಒಲಿಯಬಹುದು. ಸಮಾರಂಭ ಭೇಟಿಯ ಸಾಧ್ಯತೆ ಇದೆ.



Click it and Unblock the Notifications