Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಜನವರಿ 22ರ ದಿನಭವಿಷ್ಯ: ಯಾರಿಗಿಂದು ಆರ್ಥಿಕವಾಗಿ ಲಾಭವಾಗುವ ದಿನ ನೋಡಿ..!
ಜ್ಯೋತಿಷ್ಯಶಾಸ್ತ್ರ ಪ್ರಕಾರ ಜನವರಿ 22ರ ನಿಮ್ಮ ರಾಶಿ ಫಲ ಇಲ್ಲಿದೆ...
ಮೇಷ ರಾಶಿ
ಕೆಲಸದ ಸ್ಥಳದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ನೋಡಬಹುದು. ನಿಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಬರಬಹುದು. ಆದ್ರೆ ದಿನದ ಅಂತ್ಯದಲ್ಲಿ ಎಲ್ಲವು ಸುಗಮವಾಗಲಿದೆ. ನೀವು ಬಟ್ಟೆಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರದಲ್ಲಿದ್ದರೆ ಈ ದಿನ ಲಾಭದಾಯಕವಾಗುತ್ತಿದೆ. ನಿಮ್ಮ ಆರೋಗ್ಯದಲ್ಲೂ ಸುಧಾರಣೆ ನೋಡಲಿದ್ದೀರಿ.

ವೃಷಭ ರಾಶಿ
ಇಂದು ನೀವು ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿ ಪಡೆಯಬಹುದು. ನೀವು ಸಾಲ ಮಾಡಿದ್ದರೆ ಈ ಹೊರೆ ಕಡಿಮೆಯಾಗುತ್ತದೆ. ಹೂಡಿಕೆಗೆ ಇದು ಒಳ್ಳೆಯ ಸಮಯ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಲಿದೆ.
ಮಿಥುನ ರಾಶಿ
ಇಂದು ನಿಮ್ಮ ಯೋಜನೆಯ ಪ್ರಕಾರ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಲವು ದಿನದಿಂದ ಬಾಕಿ ಉಳಿಸಿದ್ದ ಕೆಲಸಗಳು ಇಂದು ಪೂರ್ಣವಾಗಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಧನಾತ್ಮಕ ಫಲಿತಾಂಶ ಸಿಗಬಹುದು. ಮನೆಯಲ್ಲಿ ನಿಮ್ಮ ಮಾತಿನಿಂದ ಕಲಹ ಉಂಟಾಗಬಹುದು, ಹಾಗೆ ಮಾತಿನ ಮೇಲೆ ನೀವಿಂದು ಎಚ್ಚರಿಕೆ ಇಡಬೇಕು.
ಕರ್ಕ ರಾಶಿ
ಕೆಲಸದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಈ ದಿನ ಅತಿಯಾಗಿ ಖರ್ಚು ಮಾಡಲು ಮುಂದಾಗಬೇಡಿ. ಹಲವು ಸಮಸ್ಯೆಗಳಿಗೆ ನೀವಿಂದು ಪರಿಹಾರ ಪಡೆಯಬಹುದು. ಇಂದು ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಆರ್ಥಿಕವಾಗಿ ನೀವಿಂದು ಪ್ರಗತಿ ಕಾಣಲಿದ್ದೀರಿ.
ಸಿಂಹ ರಾಶಿ
ಖರ್ಚಿನಲ್ಲಿ ಹಠಾತ್ ಹೆಚ್ಚಳವು ನಿಮ್ಮ ತೊಂದರೆಯನ್ನು ಹೆಚ್ಚಿಸಬಹುದು. ಹೀಗಾಗಿ ನಿಮ್ಮ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣಲಿದ್ದೀರಿ. ದೂರ ಪ್ರಯಾಣ, ದೇವಾಲಯ ಭೇಟಿಯಂತಹ ಕೆಲಸದಲ್ಲಿ ತೊಡಗಬಹುದು. ನಿಮ್ಮ ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ಹಳೆಯ ಸಾಲ ಮರುಪಾವತಿಯಾಗಲಿದೆ.
ಕನ್ಯಾ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನ. ನೀವು ಪಾಲುದಾರಿಕೆ ವ್ಯಾಪಾರದಲ್ಲಿದ್ದರೆ ಈ ದಿನ ನಿಮಗೆ ಶುಭವಾಗಲಿದೆ. ಚಿಲ್ಲರೆ ವ್ಯಾಪಾರಸ್ಥರು ಈ ದಿನ ಅಧಿಕ ಲಾಭದ ನಿರೀಕ್ಷೆ ಮಾಡಬಹುದು. ನಿಮ್ಮ ಮುಂದೆ ಹಲವು ಹೊಸ ಅವಕಾಶಗಳು ಇಂದು ಸಿಗಬಹುದು. ಮನೆಯ ಹಿರಿಯರಲ್ಲಿ ಅನಾರೋಗ್ಯ ಸಮಸ್ಯೆ ಕಾಡಬಹುದು.
ತುಲಾ ರಾಶಿ
ವ್ಯಾಪಾರಸ್ಥರು ಪ್ರಸ್ತುತ ದೊಡ್ಡ ಮಟ್ಟದ ವ್ಯವಹಾರ ಮಾಡುವುದನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಮನೆಯಲ್ಲಿ ನಿಮ್ಮಿಂದ ಶಾಂತಿ ನೆಲೆಸುವಂತೆ ಆಗಲಿದೆ, ದೂರ ಸಂಬಂಧಿಕರ ಭೇಟಿಯಿಂದ ನಿಮಗೆ ಸಂತೋಷವಾಗುವ ಜೊತೆಗೆ ಶುಭ ಸುದ್ದಿ ಕೇಳಬಹುದು. ನಿಮ್ಮ ನಿತ್ಯದ ಕೆಲಸ ಅಡೆತಡೆಯಿಲ್ಲದೆ ನಡೆಯಬಹುದು. ನಿಮ್ಮ ಬಹುದಿನದ ಬಯಕೆಯೊಂದು ಈಡೇರಿಸಿಕೊಳ್ಳಲು ಇದು ಒಳ್ಳೆಯ ದಿನ.
ವೃಶ್ಚಿಕ ರಾಶಿ
ಬಹಳ ಸಮಯದ ನಂತರ ನಿಮ್ಮಲ್ಲಿ ನೆಮ್ಮದಿ ಇರಲಿದೆ. ನೀವು ಅಂದುಕೊಂಡ ಕೆಲಸ ಕಾರ್ಯ ಮುಕ್ತಾಯವಾಗಬಹುದು. ಹೊಸದಾಗಿ ನೀವು ಉದ್ಯಮ ಆರಂಭಿಸುವ ಕನಸಿಗೆ ಚಾಲನೆ ನೀಡಬಹುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ.
ಧನು ರಾಶಿ
ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವ ಸಂದರ್ಭ ಬರಲಿದೆ. ನೀವು ಸರ್ಕಾರಿ ಹುದ್ದೆಯಲ್ಲಿದ್ದರೆ ಈ ದಿನ ಉತ್ತಮವಾಗಿರಲಿದೆ. ಹಣದ ದೃಷ್ಟಿಯಿಂದ ದಿನ ದುಬಾರಿಯಾಗಬಹುದು. ಅವಿವಾಹಿತರು ಈ ದಿನ ಶುಭ ಸುದ್ದಿ ಕೇಳಬಹುದು.
ಮಕರ ರಾಶಿ
ವ್ಯಾಪಾರಿಗಳಿಗೆ ಇಂದು ಸವಾಲಿನ ದಿನವಾಗಿದೆ. ನಿಮ್ಮ ಇಚ್ಛೆಯಂತೆ ಈ ದಿನ ಲಾಭದಾಯಕವಾಗಿ ಬದಲಾಗುವುದಿಲ್ಲ. ನಿಮ್ಮ ಪ್ರೀತಿಪಾತ್ರರ ಮಾತುಗಳನ್ನು ನಿರ್ಲಕ್ಷಿಸದಿರುವುದು ಉತ್ತಮ. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಉಂಟಾಗಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.
ಕುಂಭ ರಾಶಿ
ನಿಮಗಿಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಹಣಕಾಸು ವಿಚಾರದಲ್ಲಿ ಈ ದಿನ ನಿಮಗೆ ದುಬಾರಿಯಾಗಬಹುದು, ನಿಮ್ಮ ಖರ್ಚು ಹೆಚ್ಚಾಗುವುದು, ಅನಗತ್ಯ ಖರ್ಚು, ನಷ್ಟದಂತಹ ದಿನವಾಗಬಹುದು. ಇಂದು ನಿಮ್ಮ ಜೀವನ ಸಂಗಾತಿಯಿಂದ ವಿಶೇಷ ಉಡುಗೊರೆ ಪಡೆಯಬಹುದು.
ಮೀನ ರಾಶಿ
ಈ ದಿನ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬಹುದು. ಕುಟುಂಬಸ್ಥರ ಮಾತಿನಿಂದ ನಿಮಗೆ ನೋವುಂಟಾಗಬಹುದು. ನೀವು ಮನೆಯ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು. ಸಂಗಾತಿಯ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











