Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
January 22 Horoscope: ಗೃಹಿಣಿಯರಲ್ಲಿ ಅನಾರೋಗ್ಯ ಸಂಭವವಿದೆ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 22 (January 22 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಇಂದು ಪ್ರಯಾಣಿಸಬೇಕಾಗುತ್ತದೆ. ನೀವು ಮಾಡವ ಕೆಲಸದ ಮೇಲೆ ಗಮನವಿಡಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಬಹುದು. ದಾಂಪತ್ಯ ವಿವಾರದಲ್ಲಿ ತಾಳ್ಮೆಯಿಂದ ಇರುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ನೀವು ಯಾರಿಂದಾದರು ಹಣ ಪಡೆಯುವ ಬಯಕೆ ಇಟ್ಟುಕೊಂಡಿದ್ದರೆ ಇಂದು ಈಡೇರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದಾಯಕ ದಿನವಾಗುತ್ತದೆ.

ಮಿಥುನ ರಾಶಿ
ವ್ಯವಹಾರ ದೃಷ್ಟಿಯಿಂದ ಇಂದು ಎಚ್ಚರಿಕೆಯಿಂದಿರಿ, ಗುತ್ತಿಗೆದಾರರಿಗೆ ಹಿನ್ನಡೆ ಉಂಟಾಗಲಿದೆ. ನಿಂತು ಹೋಗಿದ್ದ ಕೆಲಸಗಳು ಪುನರಾರಂಭವಾಗಲಿದೆ. ಮಕ್ಕಳ ಅನಾರೋಗ್ಯ ವಿಚಾರದಲ್ಲಿ ನಿಮಗೆ ಚಿಂತೆ ಕಾಡುವಂತಹ ದಿನವಾಗಿರಲಿದೆ.
ಕರ್ಕ ರಾಶಿ
ಹೊಸ ಕೆಲಸಕ್ಕೆ ಉತ್ತಮವಾದ ದಿನವಲ್ಲ. ನಿಮ್ಮ ಹಲವು ವಿಚಾರಗಳಲ್ಲಿನ ಗೊಂದಲಗಳು, ಒತ್ತಡಗಳು ನಿಮಗೆ ಚಿಂತೆ ತರಲಿದೆ. ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು. ಬ್ಯಾಂಕಿಂಗ್ ಕುರಿತಾದ ವಿಚಾರದಲ್ಲಿ ನಿಮಗೆ ಯಶಸ್ಸು ಇಲ್ಲ. ಓಡಾಟದ ದಿನವಾಗಿರಲಿದೆ.
ಸಿಂಹ ರಾಶಿ
ಹಳೆಯ ವಿಚಾರಗಳು ನಿಮಗೆ ಒತ್ತಡವನ್ನ ತರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಆಪ್ತರೊಬ್ಬರಿಂದ ನಿಮಗೆ ಹಣ ಬರಬಹುದು. ದಾಂಪತ್ಯದಲ್ಲಿ ಸಂತಸದ ದಿನ. ಮನೆಗಾಗಿ ಖರ್ಚು ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಇಂದು ಯಾರನ್ನು ಅತಿಯಾಗಿ ನಂಬಬಾರದು. ಸರ್ಕಾರಿ ನೌಕರರಿಗೆ ಬಡ್ತಿ ಕುರಿತಾದ ವಿಚಾರದಲ್ಲಿ ಶುಭವಿದೆ. ನಿಮ್ಮ ಹಲವು ಯೋಜನೆಗಳಿಗೆ ಆಪ್ತರೊಬ್ಬರ ಸಹಕಾರ ಕೇಳುವಿರಿ. ನಿಮಗಾಗಿ ಖರ್ಚುಗಳ ಮಾಡುವ ದಿನ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಾಗಿರಲಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಮನೆಗೆ ಗಣ್ಯ ವ್ಯಕ್ತಿಗಳ ಆಗಮನ ಆಗಬಹುದು. ವಾಹನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಉತ್ತಮ ದಿನ. ಮನೆ ಮತ್ತು ಉದ್ಯೋಗ ಎರಡೂ ಕಡೆಗಳಲ್ಲಿ ಸಂತಸ ಇರಲಿದೆ. ಮನೆಯ ಅಲಂಕಾರ, ಸಣ್ಣ ಪುಟ್ಟ ಬದಲಾವಣೆಗಳಿಗೆ ಹಣ ಖರ್ಚು ಮಾಡುವ ದಿನವಾಗಿರುತ್ತದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ಹಣಕಾಸು ವಿಚಾರದಲ್ಲಿ ಲಾಭವಿದೆ. ಬಹುಸಮಯದಿಂದ ನೀವು ಮಾಡಬೇಕಿದ್ದ ಕೆಲಸ ಮಾಡಿ ಮುಗಿಸುವಿರಿ. ಆತ್ಮೀಯರ ಭೇಟಿ ಮತ್ತು ಭೋಜನದಿಂದ ಸಂತೋಷ ಸಿಗುವ ದಿನ.
ಮಕರ ರಾಶಿ
ಈ ದಿನ ನಿಮಗೆ ಸಮಸ್ಯೆಗಳಿವೆ. ಅದ್ರಲ್ಲೂ ಮಕ್ಕಳಿಗೆ ಸಮಸ್ಯೆ ಕಾಡಬಹುದು ಜಾಗ್ರತೆಯಿಂದಿರಿ. ಹೂಡಿಕೆಯಲ್ಲಿ ಎಚ್ಚರವಿಡಿ. ಪಂಚೇಂದ್ರಿಯ ಸಂಬಂಧಿತ ಅನಾರೋಗ್ಯ ಕಾಡಬಹುದು. ದೂರ ಪ್ರಯಾಣ ಮಾಡಬಹುದು. ಆಸ್ಪತ್ರೆ ವಿಚಾರದಲ್ಲಿ ಪ್ರಯಾಣವಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಸಮಸ್ಯೆಗಳಿಂದ ಮುಕ್ತರಾಗುವ ಅವಕಾಶ ಪಡೆಲಿದ್ದೀರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭವಿದೆ. ಗೃಹಿಣಿಯರು ಅಂದುಕೊಂಡ ಕೆಲಸ ಮಾಡಬಹುದು. ಆಪ್ತರ ಭೇಟಿಯ ಸಂಭವವಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ಮಿಶ್ರಫಲ. ದಿನದ ಆರಂಭದಲ್ಲಿ ನೀವು ಹಲವು ರೀತಿಯ ಸವಾಲು ಎದುರಿಸಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಉದರ ಸಂಬಂಧಿ ಸಮಸ್ಯೆ ಕಡಿಮೆಯಾಗಲಿದೆ. ನಿಮ್ಮ ಹಣಕಾಸು ಸಂಬಂಧವಾಗಿ ತಾಳ್ಮೆಯಿಂದ ವ್ಯವಹಾರ ಮುಂದುವರಿಸಿ.



Click it and Unblock the Notifications











