Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
January 21 Horoscope: ಈ ದಿನ ಪ್ರಯಾಣಗಳ ಮುಂದೂಡುವುದು ಉತ್ತಮ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 21 (January 21 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಾಗಿರಲಿದೆ. ಬಹುತೇಕರು ಇಂದು ಪ್ರಯಾಣ ಮಾಡಬಹುದು. ಕೆಲವು ಪ್ರಯಾಣಗಳು ನಿಮ್ಮಲ್ಲಿ ಲಾಭಕ್ಕೆ ಕಾರಣವಾಗಬಹುದು. ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು ಸಂಭವ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಿಶ್ರಫಲವಿದೆ. ನೀವು ಆದಾಯಕ್ಕಿಂತ ದೊಡ್ಡ ಖರ್ಚುಗಳ ಮಾಡದೆ ಇರುವುದು ಉತ್ತಮ. ಸಣ್ಣ ಪುಟ್ಟ ಅನಾರೋಗ್ಯವು ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿ ತರಬಹುದು. ನವ ದಂಪತಿ ಪ್ರಯಾಣ ಮಾಡಬೇಕಾಗುತ್ತದೆ. ತಂದೆ ಆರೋಗ್ಯದಲ್ಲಿ ಏರುಪೇರು ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಅನಾನುಕೂಲಗಳಿವೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ನಿಮಗೆ ಅದೃಷ್ಟಕರ ರೀತಿಯಲ್ಲಿ ಸಿಗಬಹುದು. ಹಣಕಾಸು ವಿಚಾರದಲ್ಲಿ ನಿಮಗೆ ಅದೃಷ್ಟಕರ ದಿನ. ವ್ಯಾಪಾರದಲ್ಲಿ ಲಾಭವಿದೆ.
ಕರ್ಕ ರಾಶಿ
ನಿಮಗಿಂದು ಅನುಕೂಲಕರ ಸಮಯ ಆಗಿರಲಿದೆ. ನಿಮ್ಮ ಹಲವು ಬಯಕೆಯ ಕುರಿತಾಗಿ ನೀವು ಹೊಸ ಆಲೋಚನೆಗಳ ಪಡೆಯಬಹುದು. ದಿನದ ಅಂತ್ಯದಲ್ಲಿ ದಿಢೀರ್ ಖರ್ಚುಗಳು ಬರಬಹುದು. ಆಪ್ತರಿಗೆ ಹಣಕಾಸಿನ ಸಹಾಯ ಮಾಡಬಹುದು. ಆರೋಗ್ಯದ ಕಡೆ ಗಮನವಿಡಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಮಿಶ್ರಫಲ ತರಲಿದೆ. ನಿಮಗೆ ಬರಬೇಕಿದ್ದ ಹಣ ಕೈಸೇರುವುದು ತಡವಾಗಬಹುದು. ಪ್ರೇಮಿಗಳಿಗೆ ಈ ದಿನವು ಶುಭ ತರಲಿದೆ. ಯಾರಿಗಾದರು ನಿಮ್ಮಿಂದ ಸಹಾಯವಾಗಬಹುದು. ಆಪ್ತರೊಬ್ಬರಿಗೆ ನೀವು ಕೆಲಸದ ವಿಚಾರವಾಗಿ ಸಹಾಯ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ಪ್ರಯಾಣ ಮಾಡುವಿರಿ. ಭವಿಷ್ಯದ ದೃಷ್ಟಿಯಲ್ಲಿ ನೀವು ಹೂಡಿಕೆಗಳ ಮಾಡುವಿರಿ. ಗೃಹಿಣಿಯರಲ್ಲಿ ಹಣಕಾಸಿನ ಖರ್ಚುಗಳನ್ನು ನಿಭಾಯಿಸುವುದು, ನಿಯಂತ್ರಿಸುವುದು ಉತ್ತಮ. ವಾಹನ ಚಾಲನೆ ವೇಳೆ ಎಚ್ಚರಿಕೆ ಇಡಿ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನ ಸಮಸ್ಯೆಗಳಿವೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಅರ್ಧಕ್ಕೆ ಬಿಡಬೇಕಾಗುತ್ತದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಮತ್ತೆ ಮುಂದಕ್ಕೆ ಹೋಗಲಿದೆ. ಯಾರಿಗೆ ಸುಲಭವಾಗಿ ಸಾಲ ನೀಡಲು ಮುಂದಾಗಬೇಡಿ. ಕೆಲಸದ ಮೇಲೆ ಗಮನವಿರಲಿ.
ವೃಶ್ಚಿಕ ರಾಶಿ
ನಿಮ್ಮ ಹಲವು ಕೆಲಸಗಳು ಅದೃಷ್ಟಕರವಾಗಿ ಬದಲಾಗುತ್ತದೆ. ವಾಹನ ಸಂಬಂಧಿ ಕೆಲಸ ಮಾಡುವವರಿಗೆ ಈ ದಿನ ಅದೃಷ್ಟ ತರಲಿದೆ. ದೇವಾಲಯ ಭೇಟಿಯ ಸಾಧ್ಯತೆಗಳಿವೆ. ಆಪ್ತರ ಭೇಟಿಯನ್ನು ಮುಂದೂಡಬೇಡಿ. ದಿನದ ಅಂತ್ಯದಲ್ಲಿ ವಿಶ್ರಾಂತಿ ಪಡೆಯುವಿರಿ.
ಧನು ರಾಶಿ
ಧನು ರಾಶಿಯಲ್ಲಿ ಮಹಿಳೆಯರಿಗೆ ಇಂದು ಖರ್ಚುಗಳಿಂದ ತುಂಬಿದ ದಿನವಾಗಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಬೇರೆಯವರಿಗೆ ವಹಿಸುವುದು ದೊಡ್ಡ ಸಮಸ್ಯೆ ತರಬಹುದು. ಚಿನ್ನ ಬೆಳ್ಳಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ಪ್ರಯಾಣ ಮಾಡುವುದು ಕೆಲಸಗಳಿಂದ ಅನಿವಾರ್ಯವಾಗಿ ದೂರ ಉಳಿಯುವಂತೆ ಮಾಡಬಹುದು. ಯಾರಿಗೂ ಹಣ ನೀಡುವುದು ಅಥವಾ ಪಡೆಯುವುದು ಮಾಡಬೇಡಿ. ಕುಟುಂಬದಲ್ಲಿ ನಿಮಗೆ ಬೆಂಬಲವಿದೆ. ವ್ಯಾಪಾರಿಗಳಿಗೆ ಉತ್ತಮ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಅನುಕೂಲಗಳನ್ನು ತರಲಿದೆ. ಮನೆಯ ವಾತಾವರಣದಲ್ಲಿ ಬದಲಾವಣೆ ಆಗುವುದು ನಿಮಗೆ ಸಮಸ್ಯೆಯಾಗಿ ಕಾಡಬಹುದು. ಪ್ರೇಮಿಗಳು ಈ ದಿನ ಸಮಸ್ಯೆ ನೋಡಬಹುದು. ಆದ್ರೆ ವ್ಯಾಪಾರಿಗಳು, ಸ್ವಂತ ಉದ್ಯೋಗಿಗಳಿಗೆ ಶುಭದಾಯಕ ದಿನವಾಗುತ್ತಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ಶುಭಕರವಾಗಿರಲಿದೆ. ಮನೆಯಲ್ಲಿನ ಹಣಕಾಸು ಸಮಸ್ಯೆಗೆ ಪರಿಹಾರ ಪಡೆಯಲು ನೀವು ಪ್ರಯಾಣಿಸಬೇಕಾಗುತ್ತದೆ. ಈ ಪ್ರಯಾಣಗಳು ಲಾಭಕರವಾಗಿರಲಿದೆ. ಮನೆಗಾಗಿ ಹೊಸ ವಸ್ತು ಖರೀದಿಸಬಹುದು.



Click it and Unblock the Notifications











