Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಮೊದಲ ತಿಂಗಳು 12 ರಾಶಿಗಳಿಗೆ ಹೇಗಿರಲಿದೆ? ಯಾರಿಗೆಲ್ಲಾ ಶುಭ?
ಜನವರಿ ಮಾಸ ವರ್ಷದ ಮೊದಲ ಮಾಸ, ಜ್ಯೋತಿಷ್ಯ ಪ್ರಕಾರ ತಿಂಗಳ ರಾಶಿಫಲದಲ್ಲಿ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ವರ್ಷದ ಮೊದಲ ತಿಂಗಳು ತುಂಬಾನೇ ಶುಭವಾಗಿದೆ, ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಆಸ್ತಿಯಲ್ಲಿ ಹೂಡಿಕೆ ಮಾಡಿದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ವರ್ಷದ ಆರಂಭವು ಲಾಭದಿಂದ ಪ್ರಾರಂಭವಾಗಲಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರೆಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಆಸ್ತಿ ಮಾರಟ ಮಾಡಿದವರು ಕೂಡ ಲಾಭ ಗಳಿಸುತ್ತೀರಿ, ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಹೆಚ್ಚಿನ ಗಮನಹರಿಸಿ. ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಹೊಸ ವರ್ಷದ ಮೊದಲ ತಿಂಗಳು ಶುಭವಾಗಿದೆ, ಆರ್ಥಿಕವಾಗಿ ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಮಾಡುವ ಪ್ರಯಾಣ ಲಾಭದಾಯಕವಾಗಿರಲಿದೆ, ಅಲ್ಲದೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತೀರಿ, ಯಾವುದೇ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಬೇಕು. ತಿಂಗಳ ಮಧ್ಯದಲ್ಲಿ ಗಾಡಿ ಚಲಾಯಿಸುವಾಗ ತುಂಬಾನೇ ಜಾಗ್ರತೆವಹಿಸಿ. ಕುಟುಂಬ ಜೀವನ ಚೆನ್ನಾಗಿರಲದೆ, ವೈವಾಹಿಕ ಬದುಕು ಗಟ್ಟಿಯಾಗಲಿದೆ.
ಮಿಥುನ ರಾಶಿ
ಮಾಸದ ಆರಂಭದ ದಿನಗಳು ನಿಮಗೆ ತುಂಬಾ ಒಳ್ಳೆಯದಿದೆ. ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಯೋಜಿತ ರೀತಿಯಲ್ಲಿ ಕೆಲಸ ಕಾರ್ಯಗಳು ಪೂರ್ಣವಾಗವುದರಿಂದ ಅನುಕೂಲಕರ ಫಲಿತಾಂಶ ದೊರೆಯಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಕೆಲಸ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುವುದು. ತಿಂಗಳ ಮಧ್ಯಭಾಗದ ನಂತರ ಕೆಲ ಸವಾಲುಗಳು ಎದುರಾಗಬಹುದು, ವಿರೋಧಿಗಳ ಬಗ್ಗೆ ಜಾಗ್ರತೆವಹಿಸಬೇಕು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಜನವರಿ ಮಾಸ ಮಿಶ್ರಫಲ. ನೀವಾಡುವ ಮಾತುಗಳ ಕಡೆಗೆ ಜಾಗ್ರತೆವಹಿಸಬೇಕು, ವ್ಯಾಪಾರಿಗಳು ಸವಾಲುಳನ್ನುನ ಎದುರಿಸಬಹುದು. ವೃತ್ತಿ ಬದುಕಿನಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಇನ್ನು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ಮೋಸ ಹೋಗುವ ಸಾಧ್ಯತೆ ಇದೆ, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ. ಇನ್ನು ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ, ಬೆಟ್ಟಿಂಗ್, ಷೇರು ಇವುಗಳಿಂದ ದೂರವಿರಬೇಕು. ಆದರೆ ತಿಂಗಳ ಮಧ್ಯವಾಗುತ್ತಿದ್ದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಬೇಕು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಜನವರಿ ತಿಂಗಳು ಅನುಕೂಲಕರವಾಗಿದೆ, ವೃತ್ತಿ ಜೀವನದಲ್ಲಿ ಬೆಳೆಯಲು ಸಾಧ್ಯವಾಗುವುದು, ನ್ಯಾಯಾಲಯದಲ್ಲಿ ಏನಾದರು ಪ್ರಕರಣ ಇದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ. ಆದರೆ ತಿಂಗಳ ಮಧ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯದ ಕಡೆಗೆ ಗಮನಹರಿಸಿ. ಹಣ ಖರ್ಚಿನ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು, ಸಾಲದ ವ್ಯವಹಾರ ಮಾಡಬೇಡಿ. ಬೇರೆಯವರ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ, ಭಿನ್ನಾಭಿಪ್ರಾಯ ದೊಡ್ಡದು ಆಗಲು ಬಿಡಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಿಂಗಳ ಆರಂಭದಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು, ಕುಟುಂಬ ವಿಚಾರದಲ್ಲಿ ಕೆಲ ಸಮಸ್ಯೆಗಳು ಬರಬಹುದು, ಆದರೆ ಹೆಚ್ಚು ಚಿಂತೆ ಮಾಡಲು ಹೋಗಬೇಡಿ, ಏಕೆಂದರೆ ಆ ಸಮಸ್ಯೆಗಳು ಹೆಚ್ಚು ಸಮಯ ಉಳಿಯಲ್ಲ, ತಿಂಗಳ ಮಧ್ಯದಲ್ಲಿ ಎಲ್ಲವೂ ಸುಧಾರಿಸಲಿದೆ. ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ, ಆರೋಗ್ಯ ಕೂಡ ಅನುಕೂಲಕರವಾಗಿರಲಿದೆ.
ತುಲಾ ರಾಶಿ
ವರ್ಷದ ಆರಂಭ ತುಲಾ ರಾಶಿಯವರಿಗೆ ಅದ್ಭುತವಾಗಿ ಶುರುವಾಗಲಿದೆ, ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳು ನಿರೀಕ್ಷಿತ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಕೂಡ ಬಗೆಹರಿಯಲಿದೆ. ವೈವಾಹಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಆರ್ಥಿಕ ದೃಷ್ಟಿಯಿಂದಲೂ ಈ ತಿಂಗಳು ನಿಮಗೆ ಅನುಕೂಲಕರವಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಜನವರಿ ಮಾಸದ ಆರಂಭ ತುಂಬಾ ಚೆನ್ನಾಗಿರಲಿದೆ, ಆದರೆ ತಿಂಗಳ ಮಧ್ಯದfಲಿ ಸ್ವಲ್ಪ ಜಾಗ್ರತೆವಹಿಸಬೇಕು, ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು. ಆದರೆ ತಿಂಗಳ ಕೊನೆಯಲ್ಲಿ ಪರಿಸ್ಥಿತಿ ಸುಧಾರಿಸಲಿದೆ, ಹೊಸ ಅವಕಾಶಗಳು ದೊರೆಯಲಿದೆ.ಕುಟುಂಬ ಜೀವನ ಚೆನ್ನಾಗಿರಲಿದೆ, ವಿದ್ಯಾರ್ಥಿಗಳು ತಮ್ಮ ಗುರಿ ಕಡೆಗೆ ಹೆಚಚಿನ ಗಮನಹರಿಸಬೇಕಾಗುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಜನವರಿ ತಿಂಗಳು ತುಂಬಾ ಚೆನ್ನಾಗಿರಲಿದೆ, ವೃತ್ತಿ ಬದುಕಿನಲ್ಲಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಜೀವದಲ್ಲಿ ಹೊಸ ಪ್ರಯತ್ನಕ್ಕೆ ಹೊಸ ಅವಕಾಶಗಳು ದೊರೆಯಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆದರೆ ಖರ್ಚಿನ ಕಡೆಗೆ ಗಮನಹರಿಸಬೇಕು, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
ಮಕರ ರಾಶಿ
ಜನವರಿ ಮಾಸ ಮಕರ ರಾಶಿಯವರಿಗೆ ಮಿಶ್ರಫಲ, ಕೆಲಸದ ಜಾಗದಲ್ಲಿ ಜಾಗ್ರತೆವಹಿಸಬೇಕು, ಕೆಲವರು ನಿಮ್ಮ ಇಮೇಜ್ ಹಾಳು ಮಾಡಲು ಆಲೋಚಿಸಬಹುದು. ಈ ಮಾಸ ಕೆಲವೊಂದು ದೀರ್ಘ ಪ್ರಯಾಣ ಮಾಡಬಹುದು. ಸ್ವಂತ ವ್ಯವಹಾರ ಮಾಡುವುದಾದರೆ ಹಣದ ವ್ಯವಹಾರದ ಬಗ್ಗೆ ಜಾಗ್ರತೆವಹಿಸಿ. ಆಸ್ತಿ ಅಥವಾ ಸೆಕೆಂಡ್ ಹ್ಯಾಂಡ್ ಗಾಡಿ ಖರೀದಿ ಮಾಡುವುದಾದರೆ ಡಾಕ್ಯೂಮೆಂಟ್ ಕಡೆಗೆ ಗಮನಹರಿಸಿ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ಕುಂಭ ರಾಶಿ
ಕುಂಭರಾಶಿಯವರಿಗೆ ಜನವರಿ ಮಾಸ ಮಿಶ್ರಫಲ, ತಿಂಗಳ ಆರಂಭ ಉತ್ತಮವಾಗಿರಲಿದೆ. ಆದರೆ ನಿಮ್ಮ ಸಾಮರ್ಥ್ಯ ಮೀರಿ ಯಾವುದೇ ಕೆಲಸ ತೆಗೆದುಕೊಳ್ಳಬೇಡಿ ಎಂದು ಸಹೆ ನೀಡಲಾಗುವುದು. ವ್ಯಾಪಾರಿಗಳು ಏರಳಿತವನ್ನು ನೋಡಬಹುದು. ನಿಮ್ಮಿಂದ ತಪ್ಪಾಗದಂತೆ ಜಾಗ್ರತೆವಹಿಸಿ, ಪ್ರೀತಿಯಲ್ಲಿದ್ದರೆ ನಿಮ್ಮ ಪ್ರೀತಿ ಬಹಿರಂಗ ಪಡಿಸಲು ಇದು ಸೂಕ್ತ ಸಮಯವಲ್ಲ, ವಿವಾಹಿತರು ವೈವಾಹಿಕ ಬದುಕಿನ ಕಡೆಗೆ ಗಮನಹರಿಸಬೇಕು. ಜನವರಿ ಮಾಸದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೆ ಜಾಗ್ರತೆವಹಿಸಿ.
ಮೀನ ರಾಶಿ
ಕೆಲಸ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಿ, ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ, ಸ್ವಂತ ವ್ಯವಹಾರ ಮಾಡುತ್ತಿರುವವರು ತುಂಬಾ ಜಾಗ್ರತೆವಹಿಸಬೇಕು. ರಾಜಕಾರಣಿಗಳಿಗೆ ಈ ಅವಧಿಯಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಖರ್ಚಿನ ಕಡೆಗೆ ಗಮನಹರಿಸಬೇಕು. ಹಣಕ್ಕೆ ಸಂಬಂಧಿಸಿದ ಹೂಡಿಕೆಯಲ್ಲಿ ಜಾಗ್ರತೆವಹಿಸಬೇಕು, ಬೆಟ್ಟಿಂಗ್, ಆನ್‌ಲೈನ್ ಗೇಮ್ ಇವುಗಳಿಂದ ದೂರವಿರಬೇಕು. ವೈವಾಹಿಕ ಬದುಕು ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications