Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 20 Horoscope: ಅನಗತ್ಯ ಸಲಹೆ, ಮಾತುಕತೆಯಿಂದ ದೂರವಿರಿ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 20 (January 20 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಲಿದೆ, ನಿಮ್ಮ ಹಲವು ವಿಚಾರಗಳಲ್ಲಿ ದೊಡ್ಡ ಲಾಭವಿದೆ. ಗೃಹಿಣಿಯರಲ್ಲಿ ಹಣಕಾಸಿನ ಸಮಸ್ಯೆಯಿಂದಾಗಿ ಆಗಬೇಕಿದ್ದ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆಪ್ತರಿಂದ ನಿಮಗೆ ಶುಭವಿದೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡುವ ಸಮಯ. ಹಾಗೆ ನಿಮ್ಮಲ್ಲಿ ಒತ್ತಡಗಳಿಂದ ತುಂಬಿದ ದಿನವಾಗುತ್ತದೆ. ಮಕ್ಕಳ ವಿಚಾರದಲ್ಲಿ ಹೊಸ ರೀತಿಯ ಚಿಂತೆ ನಿಮಗೆ ಬರಲಿದೆ. ಮಹಿಳೆಯರಲ್ಲಿ ಇಂದು ಅನಾರೋಗ್ಯ ಕಾಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸಮಸ್ಯೆಗಳ ದಿನ. ನಿಮ್ಮ ಹಲವು ಕೆಲಸಗಳನ್ನು ಮುಂದೂಡುತ್ತೀರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಮತ್ತೆ ಮುಂದೂಡಲ್ಪಡುತ್ತದೆ. ಆಹಾರ ವಿಚಾರದಲ್ಲಿ ಖರ್ಚುಗಳಿವೆ. ಮನೆಯ ಹಳೆಯ ಹಣಕಾಸು ಸಮಸ್ಯೆಯೊಂದು ಮತ್ತೆ ಮುನ್ನಲೆಗೆ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಲಾಭವಿದೆ. ವ್ಯಾಪಾರಿಗಳಿಗೂ ಇಂದು ಉತ್ತಮ ಸಮಯ, ನಿಮ್ಮ ಹೊಸದಾದ ಬಯಕೆಯೊಂದನ್ನು ಸುಲಭದವಾಗಿ ಈಡೇರಿಸಿಕೊಳ್ಳುವಿರಿ. ಮನೆಯಲ್ಲಿ ಶುಭಕರ ಮಾತುಗಳ ಕೇಳುವಿರಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಮಿಶ್ರ ಫಲವನ್ನು ತರಲಿದೆ. ನಿಮ್ಮ ಅನೇಕ ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ. ಆರೋಗ್ಯ ಸಂಬಂಧವಾಗಿ ನಿರ್ಲಕ್ಷ್ಯ ಮಾಡಬೇಡಿ. ಸ್ನೇಹಿತರ ವಿಚಾರದಲ್ಲಿ ಶುಭದಿನ. ಮನೆಗಾಗಿ ನೀವು ಖರ್ಚುಗಳ ಮಾಡಬಹುದು. ಪ್ರೇಮಿಗಳಿಗೆ ಇಂದು ಶುಭವಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ಕೆಲಸದ ವಿಚಾರವಾಗಿ ನೀವು ಸವಾಲುಗಳನ್ನು ಎದುರಿಸುವಿರಿ. ದಾಂಪತ್ಯ ಅಥವಾ ಮನೆಯ ವಿಚಾರವಾಗಿ ತಾಳ್ಮೆ ಕಳೆದುಕೊಳ್ಳಬೇಡಿ. ಯಾರಿಗಾದರು ಹಣ ನೀಡುವ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಅನುಕೂಲವಿದೆ. ಆಪ್ತರೊಬ್ಬರಿಂದ ನಿಮಗೆ ಶುಭ ಸುದ್ದಿ ಬರಲಿದೆ. ದಿನದ ಅಂತ್ಯದಲ್ಲಿ ನಿಮಗೆ ಹಣಕಾಸಿನ ಲಾಭ ಪಡೆಯಬಹುದು. ಪ್ರೇಮಿಗಳು ಹಾಗೆ ದಾಂಪತ್ಯದಲ್ಲಿ ಸಂತಸದ ದಿನ. ಬಹಳ ದಿನದ ನಿಮ್ಮ ಅನಾರೋಗ್ಯವೊಂದರಿಂದ ನೀವು ಮುಕ್ತಿ ಪಡೆಯಲಿದ್ದೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ಮಹಿಳೆಯರಲ್ಲಿ ಇಂದು ಖರ್ಚುಗಳು ಹೆಚ್ಚಾಗಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಅನೇಕರಲ್ಲಿ ಈ ದಿನವು ಪ್ರಯಾಣ ಮಾಡಬೇಕಾಗುತ್ತದೆ.
ಧನು ರಾಶಿ
ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನವಿರಲಿ. ವ್ಯವಹಾರಿಕೆವಾಗಿ ನಿಮಗೆ ಶುಭಕರ ಸಮಯ ಆಗಿರಲಿದೆ. ದೂರ ಪ್ರಯಾಣಕ್ಕೆ ತೊಂದರೆಯಾಗಬಹುದು. ಹೊಸ ಆದಾಯ ಪಡೆಯುವ ಸಮಯ ಇದು.
ಮಕರ ರಾಶಿ
ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆ ಭಯವಿರುತ್ತದೆ. ದಾಂಪತ್ಯ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಉತ್ತಮ ಫಲಿತಾಂಶ ತರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ. ಅನೇಕ ಕೆಲಸಗಳಲ್ಲಿ ತುಂಬಾ ಗಮನಕೊಟ್ಟು ವ್ಯವಹರಿಸಬೇಕು. ಮನೆಗೆ ಬಂಧುಗಳ ಆಗಮನ ಆಗಲಿದೆ. ನಿಮ್ಮ ಬಹಳ ಸಮಯದ ಸಮಸ್ಯೆಯೊಂದು ಪರಿಹಾರವಾಗಲಿದೆ.
ಮೀನ ರಾಶಿ
ಮೀನ ರಾಶಿ ಜನರು ಇಂದು ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು. ಮನೆಯವರ ಪ್ರೀತಿ, ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ. ಭಾವನಾತ್ಮಕ ವಿಷಯ ಚರ್ಚೆಯಾಗಬಹುದು. ನಿಮ್ಮ ಆಪ್ತರೊಬ್ಬರ ಆರೋಗ್ಯದಲ್ಲಿ ಏರುಪೇರು ಸಂಭವಿಸಿರುವ ಸುದ್ದಿ ನಿಮ್ಮಲ್ಲಿ ಅಸಮಾಧಾನ ತರಬಹುದು.



Click it and Unblock the Notifications