Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 19 Horoscope: ಕೆಲಸದ ಸ್ಥಳದಲ್ಲಿ ಒತ್ತಡ, ಖರ್ಚುಗಳು!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 19 (January 19 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮ್ಮ ಕೆಲಸದಲ್ಲಿ ಉದ್ಯೋಗ ಬದಲಾವಣೆ ಅಥವಾ ಬಡ್ತಿ ಸಾಧ್ಯ, ಮತ್ತು ನೀವು ಪರಿಚಯಸ್ಥರಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಹೊಸ ಅವಕಾಗಳ ಪಡೆಯುವಿರಿ. ಅನೇಕರಿಗೆ ಈ ದಿನವು ಪ್ರಯಾಣಗಳ ಮಾಡಬೇಕಾದ ಸಮಯ ಆಗಿರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನ. ನಿಮ್ಮ ಹಲವು ಕೆಲಸಗಳನ್ನು ಇಂದು ಸಮಯದಲ್ಲಿ ಮುಗಿಸಲು ಶ್ರಮದಾಯಕವಾಗಿ ಕೆಲಸದಲ್ಲಿ ಭಾಗಿಯಾಗುವಿರಿ. ಆಪ್ತರೊಬ್ಬರಲ್ಲಿ ಅನಾರೋಗ್ಯ ಕಾಡಬಹುದು.

ಮಿಥುನ ರಾಶಿ
ಈ ದಿನ ನೀವು ಸಭೆಗಳು, ಪ್ರಯಾಣಗಳು, ಆಪ್ತರ ಭೇಟಿಯಂತಹ ಕೆಲಸದಲ್ಲಿ ತೊಡಗಬಹುದು. ಉದ್ಯಮಿಗಳು, ವ್ಯಾಪಾರಿಗಳು ಹೊಸ ವ್ಯವಹಾರಿಕ ಒಪ್ಪಂದಗಳ ಮಾಡಿಕೊಳ್ಳಬಹುದು. ಆರೋಗ್ಯದಲ್ಲಿ ಚೇತರಿಕೆ ನೋಡುವಿರಿ.
ಕರ್ಕಾಟಕ ರಾಶಿ
ಈ ದಿನ ನಿಮಗೆ ಮಿಶ್ರಫಲದಿಂದ ಕೂಡಿರಲಿದೆ. ಭಾವನಾತ್ಮಕ ಸ್ಥಿರತೆ ಮತ್ತು ಕುಟುಂಬ ಸಂತೋಷದ ವಿಶೇಷ ದಿನ. ಕೆಲಸದಲ್ಲಿ ಪ್ರಮುಖ ಗುರಿಗಳನ್ನು ಸಾಧಿಸಲಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ಆಪ್ತರಿಗೆ ನಿಮ್ಮಿಂದ ಸಹಾಯವಿದೆ.
ಸಿಂಹ ರಾಶಿ
ನಾಯಕತ್ವ ಮತ್ತು ಆತ್ಮವಿಶ್ವಾಸದ ವಿಚಾರದಲ್ಲಿ ಈ ದಿನ ಉತ್ತಮವಾಗಿರಲಿದೆ. ಸರ್ಕಾರಿ ಅಥವಾ ಆಡಳಿತಾತ್ಮಕ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯವಹಾರ ನಿರ್ಧಾರಗಳು ತ್ವರಿತ ಫಲಿತಾಂಶಗಳನ್ನು ನೀಡುತ್ತವೆ. ಉದರ ಸಂಬಂಧಿತ ವಿಚಾರವಾಗಿ ನೋವುಗಳು ಬರಬಹುದು. ದಿನದ ಅಂತ್ಯದಲ್ಲಿ ಧನಲಾಭವಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಮನೆಯಲ್ಲಿ ಹಲವು ರೀತಿ ಒತ್ತಡಗಳ ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ವಿವಾದಗಳನ್ನು ತಪ್ಪಿಸಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಸಹಾಯಕ್ಕೆ ಬರಬಹುದು. ಮನೆಗಾಗಿ ಖರ್ಚು ಮಾಡುತ್ತೀರಿ. ಹೊಸ ವಸ್ತು ಕೂಡ ಮನೆ ಸೇರಬಹುದು.
ತುಲಾ ರಾಶಿ
ಪಾಲುದಾರಿಕೆ ಯೋಜನೆಗಳು ಕೆಲಸದಲ್ಲಿ ಯಶಸ್ವಿಯಾಗುತ್ತವೆ ಮತ್ತು ಕಲೆ, ವಿನ್ಯಾಸ ಮತ್ತು ಕಾನೂನು ಕ್ಷೇತ್ರಗಳಲ್ಲಿ ಪ್ರಗತಿ ನಿಶ್ಚಿತ. ಶಾಂತಿಯಿಂದ ತುಂಬಿರುವ ದಿನ. ಹೂಡಿಕೆ ಅಥವಾ ಉಳಿತಾಯದಲ್ಲಿನ ಏರುಪೇರು ನಿಮ್ಮಲ್ಲಿ ಗೊಂದಲಗಳಿಗೆ ಅಥವಾ ಒತ್ತಡಕ್ಕೆ ಕಾರಣವಾಗಬಹುದು.
ವೃಶ್ಚಿಕ ರಾಶಿ
ವ್ಯವಹಾರದಲ್ಲಿ ಹಳೆಯ ಸಾಲಗಳನ್ನು ಮರುಪಡೆಯುವುದು ಅಥವಾ ಬ್ಯಾಂಕಿಂಗ್ ವಿಚಾರದಲ್ಲಿ ಹಿನ್ನಡೆ ನೋಡಬಹುದು. ಉದ್ಯೋಗ ಸಂಬಂಧಿ ಒತ್ತಡ ಹೆಚ್ಚಾಗಲಿದೆ. ಅವಿವಾಹಿತರಿಗೆ ಈ ದಿನವು ದೊಡ್ಡ ಕೆಲಸದ ಸವಾಲುಗಳಿವೆ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಅನುಕೂಲಕರ ವಾತಾವರಣಕ್ಕೆ ಕಾರಣವಾಗಲಿದೆ. ನಿಮ್ಮ ಮನೆಯಲ್ಲಿ ಶುಭ ವಾತಾವರಣ ನೋಡುವಿರಿ. ನಿಮ್ಮ ಒಂದು ನಿರ್ಧಾರವು ಹಲವರಿಗೆ ನೋವು ತರಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ದಿನವು ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಬಹುಬೇಗ ಮುಗಿಸಲು ಪ್ರಯತ್ನಿಸಬಹುದು. ಮಕ್ಕಳ ಅನಾರೋಗ್ಯ ಕಾರಣದಿಂದ ಚಿಂತೆ ಕಾಡಬಹುದು. ಉದ್ಯೋಗ ಸ್ಥಳದಲ್ಲಿನ ಒತ್ತಡ ನಿಮಗೆ ಅಶಾಂತಿ ತರಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶಗಳ ತರಬಹುದು. ಪ್ರೇಮಿಗಳಿಗೆ ಇಂದು ಉತ್ತಮ ದಿನವಾಗುತ್ತಿದೆ. ಕುಟುಂಬಸ್ಥರೊಂದಿಗೆ ನೀವು ಪ್ರಯಾಣ ಮಾಡಬಹುದು. ದೈನಂದಿನ ಕೆಲಸದಲ್ಲಿ ಹಣಕಾಸಿನ ಅಡ್ಡಿ ನೋಡಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಅಂದುಕೊಂಡಂತೆ ಮಾಡುವಿರಿ. ಮನೆಯಲ್ಲಿ ಶಾಂತಿಯ ವಾತಾವರಣ ನೋಡಬಹುದು. ದಾಂಪತ್ಯದಲ್ಲಿನ ಸಮಸ್ಯೆಯೊಂದು ದೂರಾಗಲಿದೆ. ಮನೆಗಾಗಿ ಹೊಸ ವಸ್ತು ಬರಬಹುದು.



Click it and Unblock the Notifications




