Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 18 Horoscope: ಯಾರಿಗೂ ಹಣ ನೀಡಬೇಡಿ, ಸಮಸ್ಯೆ ತಂದುಕೊಳ್ಳೋದು ಖಚಿತ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 18 (January 18 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನಿಮಗಿಂದು ಉತ್ತಮ ಅನುಕೂಲಗಳ ತರುವ ದಿನ. ದಿನದ ಆರಂಭ ನಿಧಾನವಾಗಿ ಆರಂಭಗೊಂದಿದ್ದರೂ ದಿನದ ಅಂತ್ಯದಲ್ಲಿ ನಿಮಗೆ ಅನುಕೂಲಕರ ಸಮಯ ಇರಲಿದೆ. ಆಪ್ತರೊಬ್ಬರ ಭೇಟಿಯಾಗುವಿರಿ. ಪ್ರಯಾಣಗಳನ್ನು ಮಾಡುವಿರಿ. ದೊಡ್ಡ ಕೆಲಸಗಳಲ್ಲಿ ನಿಮಗೆ ಬಯಸಿದಂತಹ ಫಲಿತಾಂಶ ಪಡೆಯಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಆಪ್ತರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡುವಿರಿ. ಮನೆಯ ಹಿರಿಯ ಸದಸ್ಯರೊಬ್ಬರಿಗೆ ನೀವು ಹಣ ನೀಡಬೇಕಾತ್ತದೆ. ಕೃಷಿ ಸಂಬಂಧಿತ ವಿಚಾರದಲ್ಲಿ ಲಾಭವಿದೆ. ಮನೆಯ ಹಣಕಾಸಿನ ಸಮಸ್ಯೆಗಳನ್ನು ಮತ್ತೊಬ್ಬರ ಬಳಿ ಚರ್ಚಿಸಿ ಪರಿಹಾರಕ್ಕೆ ಮುಂದಾಗುವಿರಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಅನುಕೂಲಕರ ನಿಮ್ಮ ಹಲವು ಕೆಲಸಗಳನ್ನು ಯಶಸ್ವಿಯಾಗಿ ಮಾಡುವಿರಿ. ವಿಶ್ರಾಂತಿಗೆ ಹೆಚ್ಚು ಒತ್ತು ನೀಡುವಿರಿ. ದಿನದ ಅಂತ್ಯದಲ್ಲಿ ನೀವು ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಆಯಾಸಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.
ಕರ್ಕ ರಾಶಿ
ನಿಮಗಿಂದು ಅನಗತ್ಯ ವಿಚಾರಗಳಿಗೆ ಅಥವಾ ವಸ್ತುಗಳಿಗೆ ಖರ್ಚುಗಳು ಬರಬಹುದು. ಬಹುಸಮಯದ ನಿಮ್ಮ ಕೆಲಸ ಕಾರ್ಯಗಳಲ್ಲಿ ಇದ್ದಂತಹ ಅಡ್ಡಿಗಳು ನಿವಾರಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಈ ದಿನ ಹೆಚ್ಚು ಓದಿನ ಕಡೆ ಗಮನವಿಡಿ. ಗೃಹಿಣಿಯರು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಅನುಕೂಲಕರ ಆಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ಮಾಡುವಿರಿ. ಹಣಕಾಸಿನ ವಿಚಾರದಲ್ಲಿಯೂ ನಿಮಗೆ ಉತ್ತಮ ದಿನವಾಗಿರಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಹುದಿನದ ಬಯಕೆಯೊಂದು ಈಡೇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಸಮಸ್ಯೆಯಿಂದ ಮುಕ್ತಿ ಪಡೆಯುವ ದಿನ. ಅದ್ರಲ್ಲೂ ನೀವು ಎದುರಿಸಿದ್ದ ಕಾಲೋಚಿತ ಅನಾರೋಗ್ಯದಿಂದ ಇಂದು ಮುಕ್ತಿ ಪಡೆಯುವಿರಿ. ತಂದೆ ತಾಯಿಯ ಆರೋಗ್ಯದಲ್ಲೂ ಸುಧಾರಣೆ ನೋಡುವಿರಿ. ಖರ್ಚುಗಳನ್ನು ಕಡಿಮೆ ಮಾಡುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ನಿಮ್ಮ ಹಲವು ವಿಚಾರಗಳು ಧನಾತ್ಮಕವಾಗಿ ಮುಗಿಯಲಿವೆ. ಗೃಹಿಣಿಯರು ಅಡುಗೆ ಮನೆ ಸಂಬಂಧಿತ ಖರ್ಚುಗಳ ಮಾಡುವಿರಿ. ಮನೆಗಾಗಿ ನೀವು ಹೊಸ ವಸ್ತು ಖರೀದಿಯಲ್ಲಿ ದುಡುಕಿನ ನಿರ್ಧಾರ ಮಾಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಅನುಕೂಲಕರ. ಪರಿಣಾಮಕಾರಿಯಾದ ಕೆಲಸಗಳ ಮಾಡುವುದರಿಂದ ದಿನದ ಅಂತ್ಯದಲ್ಲಿ ನಿಮಗೆ ನೆಮ್ಮದಿ ಇರಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮಗೆ ಹಲವು ವಿಚಾರಗಳು ಒತ್ತಡಗಳ ತರಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕಿದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ಸಂಬಂಧಿಕರ ಭೇಟಿಯಾಗುವುದು ನೋಡಬಹುದು. ದೇವಾಲಯ ಭೇಟಿಯಿಂದ ಮನದಲ್ಲಿದ್ದ ಒತ್ತಡ, ದುಗುಡು ಕಡಿಮೆಯಾಗುತ್ತದೆ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರದಿಂದ ಇರಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಅಥವಾ ಒತ್ತಡಗಳು ಬರಬಹುದು. ಪ್ರೇಮಿಗಳಿಗೆ ನೋವಿನ ದಿನವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಿಗೆ ಇಂದು ಧನಲಾಭದ ದಿನ. ಅವಿವಾಹಿತರಲ್ಲಿ ಕೆಲಸಗಳು ಮುಂದೂಡಲ್ಪಡುತ್ತವೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಮಿಶ್ರಫಲವಿದೆ. ನಿಮ್ಮ ಹಣಕಾಸನ್ನು ದೊಡ್ಡ ಕೆಲಸಕ್ಕೆ ವಿನಿಯೋಗಿಸಬಹುದು. ಮಕ್ಕಳ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಅನುಕೂಲಕರ. ನೀವು ಬಹು ಸಮಯದಿಂದ ಮಾಡದೆ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸುವಿರಿ. ಆಪ್ತರ ಭೇಟಿಯಾಗುವಿರಿ. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಲಿದೆ.



Click it and Unblock the Notifications