Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 17 Horoscope: ನಿಮ್ಮ ಆರೋಗ್ಯದಲ್ಲಿ ಏರುಪೇರು
ವೈದಿಕ ಶಾಸ್ತ್ರದ ಪ್ರಕಾರ ಜನವರಿ 17 (January 17 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಅನಾನುಕೂಲಗಳಿವೆ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ಅಡ್ಡಿಗಳ ನೋಡಬಹುದು. ಸಮಯದೊಳಗೆ ನೀವು ಅಂದುಕೊಂಡಿದ್ದ ಕೆಲಸ ಮುಗಿಸಲು ಮತ್ತಷ್ಟು ಶ್ರಮಹಾಕುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಬಹುದು. ವ್ಯಾಪಾರ ಸಂಬಂಧಿತ ಸಮಸ್ಯೆಯೊಂದು ದೂರಾಗಲಿದೆ. ಗೃಹಿಣಿಯರಿಗೆ ಮಕ್ಕಳ ಸಂಬಂಧಿತ ವಿಚಾರದಲ್ಲಿ ಸಂತಸದ ದಿನವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಮಿಶ್ರಫಲದ ದಿನ. ದಾಂಪತ್ಯ ವಿಚಾರದಲ್ಲಿ ಈ ದಿನ ಮುನಿಸುಗಳು ನಿವಾರಣೆಯಾಗಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಬಹುದು. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮಗೆ ಹೆಗಲೇರಲಿದೆ. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳಿಂದ ತುಂಬಿರಲಿದೆ. ನಿಮ್ಮ ಹಲವು ವಿಚಾರದಲ್ಲಿ ಅಡ್ಡಿಗಳು ಎದುರಾಗುತ್ತೆ. ಅದ್ರಲ್ಲೂ ಹಣಕಾಸಿನ ವಿಚಾರದಲ್ಲಿ ಒತ್ತಡ ಹಾಗೆ ಗೊಂದಲದ ದಿನವಾಗಬಹುದು. ಮನೆಯಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿ ಗಲಾಟೆಗಳಿರಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಅದ್ಭುತ ಲಾಭ ತರಲಿದೆ. ನೀವು ಯಾರಿಂದಾದು ಹಣ ಪಡೆದಿದ್ದರೆ ಇಂದು ಮರಳಿ ನೀಡುವಿರಿ. ಮನೆಗಾಗಿ ನೀವು ಖರ್ಚು ಮಾಡುವಿರಿ. ನಿಮ್ಮ ಹಲವು ಕೆಲಸಗಳನ್ನು ಆಪ್ತರ ಸಹಾಯದ ಮೂಲಕ ನೆರವೇರಿಸಲಿದ್ದೀರಿ. ನಿಮ್ಮ ದೊಡ್ಡ ಕೆಲಸವೊಂದು ಇಂದು ಪೂರ್ಣವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಅದ್ಭುತವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಬಾಕಿ ಉಳಿಸಕೊಳ್ಳುವ ಬದಲಾಗಿ ಮುಗಿಸುವುದು ಉತ್ತಮ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಉದರ ಸಂಬಂಧಿತ ವಿಚಾರದಲ್ಲಿ ನಿಮಗೆ ನೋವಿನ ದಿನ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ಗೃಹಿಣಿಯರಲ್ಲಿ ಇಂದು ಅನಾರೋಗ್ಯ ಕಾಡಬಹುದು. ಮಕ್ಕಳ ವಿಚಾರದಲ್ಲಿ ನಿಮಗೆ ಶ್ರಮದಾಯಕ ದಿನ. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ದುಡುಕಿನ ನಿರ್ಧಾರಕ್ಕೆ ಮುಂದಾಗಬೇಡಿ. ಸಹೋದರರಿಂದ ನಿಮಗೆ ಹಣಕಾಸಿನ ಬೇಡಿಕೆ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಈ ದಿನವು ಮಿಶ್ರಫಲ ತರಲಿದೆ, ನಿಮಗೆ ಅಗತ್ಯವಾಗಿ ಬೇಕಿದ್ದ ವಸ್ತುವೊಂದನ್ನು ಖರೀದಿಸುವಿರಿ. ವಾಹನ ಸಂಬಂಧಿತ ಖರ್ಚುಗಳಿವೆ. ಪ್ರಯಾಣಗಳಿಂದ ತುಂಬಿದ ದಿನವೂ ಹೌದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಬಹಳ ಪ್ರಯಾಣಗಳು ಇವೆ. ದೇವಾಲಯ ಭೇಟಿಯ ಅವಕಾಶಗಳನ್ನು ನಿರಾಕರಿಸಬೇಡಿ. ಗೃಹಿಣಿಯರಲ್ಲಿ ಖರ್ಚುಗಳು ಹೆಚ್ಚಾಗಬಹುದು. ಸ್ವಂತ ಉದ್ಯೋಗದಲ್ಲಿ ನಿಮಗೆ ಆದಾಯ ಹೆಚ್ಚಳ ನೋಡಬಹುದು.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ದಿನ ಅನುಕೂಲವಿದೆ. ಗೃಹಿಣಿಯರಲ್ಲಿ ಖರ್ಚುಗಳಿವೆ. ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿನ ಏರುಪೇರು ಚಿಂತೆಯ ತರಬಹುದು. ದಾಂಪತ್ಯ ವಿಚಾರದಲ್ಲಿ ತಾಳ್ಮೆ ಇರುವುದು ಒಳಿತು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಹಲವು ದಿನದ ಅನಾರೋಗ್ಯ ಮತ್ತೆ ಕಾಣಿಸಿಕೊಳ್ಳಬಹುದು. ನಿಯೋಜಿತ ಕೆಲಸಗಳು ಅಂದುಕೊಂಡಂತೆ ನಡೆಯದೆ ಇರಬಹುದು. ಪ್ರಯಾಣಗಳು ಸಹ ಆಯಾಸ ಹಾಗೆ ಫಲಿತಾಂಶಗಳು ತೃಪ್ತಿ ತರದೆ ಇರಬಹುದು.
ಮೀನ ರಾಶಿ
ನೀವು ವ್ಯಾಪಾರಿಗಳಾಗಿದ್ದರೆ ನಿಮ್ ಬುದ್ದಿವಂತಿಕೆಯ ಕಾರಣ ನಿಮ್ಮ ವ್ಯಾಪಾರ ಪ್ರಗತಿ ನೋಡಬಹುದು. ಈ ರಾಶಿಯವರಲ್ಲಿ ಇಂದು ದೊಡ್ಡ ಬಿಕ್ಕಟ್ಟು ನಿವಾರಣೆಯಾಗಲಿದೆ. ಮನೆಯ ಸಮಸ್ಯೆಗೆ ಪರಿಹಾರ ಸಿಗಲಿದೆ.



Click it and Unblock the Notifications