Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 16 Horoscope: ನಿಮ್ಮ ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ಇದೆ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 16 (January 16 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಲಿದೆ. ಪ್ರೇಮಿಗಳು ಈ ದಿನ ಮಧುರ ಕ್ಷಣಗಳ ನೋಡುವರು. ಕುಟುಂಬದಲ್ಲಿನ ಚಿಂತೆಗಳು ದೂರಾಗುವ ಸಮಯವಿದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಆಪ್ತರೊಬ್ಬರಿಂದ ಇಂದು ದೊಡ್ಡ ಲಾಭವಿದೆ. ಹಣಕಾಸು ವಿಚಾರವಾಗಿ ನೀವು ಅಂದುಕೊಂಡ ಕೆಲಸ ಮಾಡಿ ಮುಗಿಸುವಿರಿ. ಖರ್ಚುಗಳ ಮೇಲೆ ಹಿಡಿತವಿರಲಿ. ಕುಟುಂಬ ಜೀವನ ಮಧುರವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಯಾರಿಂದಾದರು ನೀವು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಆಪ್ತರೊಬ್ಬರಿಂದ ನಿಮಗೆ ಹಣ ಹರಿದು ಬರಲಿದೆ. ಯಾರಿಗಾದರು ಸಹಾಯ ಮಾಡಬೇಕಾದ ಅವಕಾಶಗಳು ಬಂದರೆ ಪೂರ್ಣ ಮಾಡುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ನಿಮ್ಮಿಂದ ದೊಡ್ಡ ವ್ಯವಹಾರ ಒಪ್ಪಂದಗಳು ನಡೆಯಲಿವೆ. ಮನೆಯ ಆರ್ಥಿಕ ವಿಚಾರದಲ್ಲಿನ ಒತ್ತಡಗಳು ಕಡಿಮೆಯಾಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಬಹಳ ಅನುಕೂಲಕರ ಸಮಯವಾಗುತ್ತಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ. ಅತ್ಯುತ್ತಮ ಪ್ರತಿಫಲ ತರುವ ಸಮಯ. ದಿನದ ಅಂತ್ಯದಲ್ಲಿ ಪ್ರಯಾಣ ಮಾಡುವಿರಿ. ನಿಮ್ಮ ಅನೇಕ ಕನಸುಗಳನ್ನು ಇಂದು ಈಡೇರಿಸಿಕೊಳ್ಳಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಉತ್ತಮ ಸಮಯ. ಯಾರಿಗೂ ಹಣ ಕಾಸಿನ ಸಹಾಯ ಮಾಡದೆ ಇರುವುದು ಉತ್ತಮ. ಪ್ರೇಮಿಗಳು ಇಂದು ಪ್ರಯಾಣ ಮಾಡಬಹುದು. ಪ್ರವಾಸದಂತಹ ಕೆಲಸವು ಸುಖಕರವಾಗಿರಲಿದೆ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ಸಮಯ. ನೀವು ಯಾವುದಾದರು ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿದ್ದರೆ ಅದನ್ನು ಪೂರ್ಣ ಮಾಡುವುದು ಉತ್ತಮ. ಪ್ರಯಾಣ ಮಾಡುವ ನಿಮ್ಮ ಉದ್ದೇಶವೊಂದು ಈಡೇರದೆ ಇರಬಹುದು. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ. ನೀವು ಮಾಡಬೇಕಿದ್ದ ಎಲ್ಲಾ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಿ ಮುಗಿಸುವುದು ಉತ್ತಮ. ಯಾರಿಂದಾದರು ಹಣ ಪಡೆಯುವ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ವ್ಯವಹಾರಗಳಲ್ಲಿ ದುಡುಕಿನ ನಿರ್ಧಾರ ಮಾಡಬೇಡಿ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳಿವೆ. ಹಲವರಲ್ಲಿ ಸಣ್ಣ ಪುಟ್ಟ ಅನಾರೋಗ್ಯಗಳು ಕಾಡಬಹುದು. ಸಂಬಂಧಿಕರಲ್ಲಿ ದುಃಖದ ಅನ್ನಿವೇಶಗಳ ನೋಡುವಿರಿ. ಹಣಕಾಸು ವಿಚಾರಗಳನ್ನು ಆದಷ್ಟು ಗೌಪ್ಯವಾಗಿ ಮುಗಿಸಿಕೊಳ್ಳಿ. ಮನೆಗೊಂದು ವಸ್ತುವನ್ನು ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ದಿನವು ಮಿಶ್ರಫಲವಿದೆ. ಯಾರಿಗಾದರು ನೀವು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪೂರ್ಣ ಮಾಡಿ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಇದ್ದಂತಹ ಸಮಸ್ಯೆಗಳ ಬಗೆಹರಿಸಿಕೊಳ್ಳಬಹುದು.
ಕುಂಭ ರಾಶಿ
ಕುಂಭ ರಾಶಿ ಅವರು ಈ ದಿನ ಪ್ರಯಾಣಗಳ ಮಾಡಬೇಕಾಗುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ದಾಂಪತ್ಯ ವಿಚಾರದಲ್ಲಿದ್ದ ಮನಸ್ತಾಪಗಳನ್ನು ಸರಿ ಪಡಿಸಿಕೊಳ್ಳಲು ಅವಕಾಶಗಳು ಸಿಗಲಿವೆ. ಮನೆಯ ಸದಸ್ಯರೊಬ್ಬರಲ್ಲಿದ್ದ ಅನಾರೋಗ್ಯ ಸಮಸ್ಯೆಯಲ್ಲಿ ಸುಧಾರಣೆ ನೋಡುವಿರಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ಸಮಯ. ಗೃಹಿಣಿಯರಿಗೆ ಧನಲಾಭದ ಸಮಯ. ವಾಹನ ಲಾಭದ ಸಾಧ್ಯತೆ ಅಧಿಕವಾಗಿದೆ. ಪ್ರೇಮಿಗಳ ಪಾಲಿಗೆ ಈ ದಿನ ಮಧುರವಾಗಿರಲಿದೆ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಲಿದೆ.



Click it and Unblock the Notifications