Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 15 Horoscope: ಈ ದಿನ ಯಾರಿಗೆಲ್ಲಾ ಶುಭದಿನ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 15 (January 15 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನೀವು ಇಂದು ದೊಡ್ಡ ಲಾಭಗಳ ಪಡೆಯಬಹುದು. ಅದ್ರಲ್ಲೂ ಇಡೀ ವರ್ಷದ ಯೋಜನಾ ತಯಾರಿಗೆ ಇಂದು ಮುನ್ನುಡಿ ಸಿಗುವ ಸಮಯ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಆಪ್ತರ ಭೇಟಿಯಾಗುವಿರಿ. ಹಣಕಸಿನ ವಿಚಾರದಲ್ಲಿ ಮಿಶ್ರಫಲ ನೋಡಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ. ನಿಮ್ಮ ಹಲವು ವಿಚಾರಗಳಿಂದ ಬೇರೆಯವರಿಗೆ ನೋವು ಉಂಟಾಗುವ ಸಾಧ್ಯತೆಗಳಿವೆ. ಮನೆಯ ಹಣಕಾಸು ಸ್ಥಿತಿ ಸುಧಾರಣೆಯಾಗಲಿದೆ. ವಾಹನ ಚಾಲನೆ ವೇಳೆ ಎಚ್ಚರ ವಹಿಸುವುದು ಸೂಕ್ತ.

ಮಿಥುನ ರಾಶಿ
ಗೃಹಿಣಿಯರಲ್ಲಿ ಈ ದಿನವು ಬಹಳ ಶ್ರಮದಾಯಕವಾಗಿರಲಿದೆ. ನೀವು ಯಾರಿಗಾದರು ಸಾಲ ನೀಡಿದ್ದರೆ ಮರಳಿ ಪಡೆಯುವುದು ಕಷ್ಟವಾಗಲಿದೆ. ಸಂಬಂಧಿಕರ ಭೇಟಿ ಸಾಧ್ಯತೆ ಇದೆ. ನಿಮ್ಮ ಹಲವು ವಿಚಾರಗಳು ಅರ್ಧಕ್ಕೆ ನಿಲ್ಲಬಹುದು. ಪ್ರಯಾಣ ಮಾಡಬೇಕಾಗುತ್ತದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಬೆಂಬಲ, ಪ್ರೋತ್ಸಾಗ ಸಿಗುವಂತಹ ದಿನವಾಗುತ್ತಿದೆ. ನಿಮ್ಮ ಎಲ್ಲಾ ಕೆಲಸಗಳನ್ನು ವೇಗವಾಗಿ ಮುಗಿಸಲು ಪ್ರಯತ್ನಿಸುವಿರಿ. ನಿಮ್ಮ ಹಲವು ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಿ ಮುಗಿಸುವುದು ಉತ್ತಮ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಅನುಕೂಲಕರ. ಯಾರಿಗೂ ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ. ದಿನದ ಅಂತ್ಯದಲ್ಲಿ ಮಾಡುವ ಖರ್ಚುಗಳ ಬಗ್ಗೆ ತಿಳಿವಳಿಕೆ ಅಗತ್ಯ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಉತ್ತಮವಾಗಿರಲಿದೆ. ನೀವು ಯಾರಿಂದಾದರು ಹಣ ಪಡೆದಿದ್ದರೆ ಅದನ್ನು ಮರಳಿ ನೀಡಬೇಕಾದ ಒತ್ತಡಕ್ಕೆ ಸಿಲುಕಬಹುದು. ನಿಮ್ಮ ಸಾಮಾಜ ಮುಖಿ ಕಾರ್ಯಗಳು ಮುಂದುವರೆಯಲಿದೆ, ಮನೆಗೆ ನೀವು ಹೊಸ ವಸ್ತು ಖರೀದಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಇಂದು ಪ್ರಯಾಣದ ದಿನ. ವ್ಯಾಪಾರಿಗಳಿಗೆ ಆದಾಯಕ್ಕಿಂತ ಹೆಚ್ಚು ಹೂಡಿಕೆ ನೋಡಬಹುದು. ನಿಮ್ಮ ಹಲವು ಪ್ರಯತ್ನಗಳಲ್ಲಿ ಇಂದು ಪ್ರತಿಫಲ ಸಿಗಲಿದೆ. ವಾಹನ ವಿಚಾರದಲ್ಲಿ ಶುಭವಿದೆ. ಆರೋಗ್ಯದಲ್ಲಿನ ಏರುಪೇರು ನಿಮಗೆ ಚಿಂತೆ ತರಬಹುದು.
ವೃಶ್ಚಿಕ ರಾಶಿ
ಇಂದು ನಿಮ್ಮ ದಾಂಪತ್ಯ ವಿಚಾರದಲ್ಲಿ ಮುನಿಸುಗಳಿವೆ. ಹಣಕಾಸು ವಿಚಾರವಾಗಿ ಮನಸ್ತಾಪಗಳು ಬರಬಹುದು. ಯಾರಿಗಾದರು ಹಣದ ವಿಚಾರದಲ್ಲಿ ಮಾತು ನೀಡಿದ್ದರೆ ಅದನ್ನು ನಿಭಾಯಿಸುವುದು ಉತ್ತಮ. ವಿದ್ಯಾರ್ಥಿಗಳು ಹಲವು ರೀತಿ ಸಮಸ್ಯೆ ಎದುರಿಸಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಅಚ್ಚರಿ ಫಲಿತಾಂಶ ತರಬಹುದು. ಕೆಲವರಲ್ಲಿ ಈ ದಿನವು ಉತ್ತಮ ವಸ್ತುಗಳಿಗೆ ಖರ್ಚು ತರಬಹುದು, ಹಾಗೆ ಮನೆಯ ಸಂತೋಷಕ್ಕೆ ನೀವು ಕಾರಣರಾಗಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ. ನಿಮ್ಮ ಓಟಾಟಗಳಿಗೆ ಇಂದು ಅಂತ್ಯ ಸಿಗಬಹುದು. ಬ್ಯಾಂಕಿಂಗ್ ವಿಚಾರವು ನಿಧಾನವಾಗಲಿದೆ. ಮಕ್ಕಳ ಅನಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಮಯ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಲಿದೆ. ಯಾರಿಗಾದರು ಹಣ ನೀಡುವುದು ದೊಡ್ಡ ಸವಾಲನ್ನು ಬರಮಾಡಿಕೊಂಡಂತೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಹಲವು ರೀತಿಯಲ್ಲಿ ಮಿಶ್ರಫಲವನ್ನು ತರಲಿದೆ. ಸವಾಲಿನ ಕೆಲಸಗಳಲ್ಲಿ ನಿಮ್ಮೊಂದಿಗೆ ಆಪ್ತರೊಬ್ಬರ ನಿಲ್ಲಲಿದ್ದಾರೆ. ನಿಮಗೆ ಅಗತ್ಯವಾಗಿ ಬೇಕಾದ ಫಲಿತಾಂಶ ಪಡೆಯಬಹುದು. ಪ್ರೇಮಿಗಳಿಗೆ ಈ ದಿನ ಶುಭಕರವಾಗಿರಲಿದೆ.



Click it and Unblock the Notifications




