Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 14 Horoscope: ಸಂಕ್ರಾಂತಿ ದಿನ ಯಾರಿಗೆ ಶುಭಕಾಲ
ವೈದಿಕ ಶಾಸ್ತ್ರದ ಪ್ರಕಾರ ಜನವರಿ 14 (January 14 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಮಿಶ್ರಫಲದ ದಿನವಾಗಲಿದೆ. ನಿಮ್ಮ ಹಲವು ಕೆಲಸಗಳ ಅನುಮಾನಗಳಿಂದ ಮಾಡಬೇಡಿ. ನಿಮ್ಮ ಹಲವು ಕೆಲಸದಲ್ಲಿ ಹಣಕಾಸಿನ ಒತ್ತಡಗಳ ನೋಡಬಹುದು. ನಿಮ್ಮ ಮನೆಯ ವಿಚಾರವಾಗಿ ನೀವು ಪ್ರಯಾಣ ಮಾಡುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಆಪ್ತರಿಂದ ನಿಮಗೆ ಸಿಹಿ ಸುದ್ದಿ ಬರಲಿದೆ. ಆಪ್ತರೊಬ್ಬರಿಂದ ಹಣ ಬರುವ ಸಾಧ್ಯತೆಯೂ ಹೆಚ್ಚಾಗಿರಲಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತರಾತುರಿಯ ನಿರ್ಧಾರವನ್ನು ಮಾಡಬೇಡಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನವು ಮಿಶ್ರಫಲ ತರಲಿದೆ. ನೀವು ಅನಗತ್ಯ ವಿಚಾರವಾಗಿ ಪ್ರಯಾಣ ಮಾಡುವ ದಿನವಾಗುತ್ತದೆ. ನಿಮ್ಮ ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಶುಭವಾಗಲಿದೆ. ಆಸ್ಪತ್ರೆ ವಿಚಾರಗಳಲ್ಲಿ ನೀವು ಹಣ ವ್ಯಯಿಸಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಗಳ ತರಲಿದೆ. ನಿಮ್ಮಿಂದಾಗಿ ದೊಡ್ಡ ಒಪ್ಪಂದಗಳು ಏರ್ಪಡಲಿವೆ. ಅದ್ರಲ್ಲೂ ನಿಮ್ಮ ಭವಿಷ್ಯದ ಖರ್ಚುಗಳ ಕುರಿತಾಗಿ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಹಲವರಿಗೆ ಇಂದು ಪ್ರಯಾಣ ಮಾಡುವ ದಿನವಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನವು ಹಲವು ರೀತಿ ಅನುಕೂಲ ತರಲಿದೆ. ಆಪ್ತರೊಬ್ಬರನ್ನು ನೀವು ಭೇಟಿಯಾಗುವಿರಿ. ವ್ಯವಹಾರ ಒಪ್ಪಂದಗಳನ್ನು ಮುಂದೂಡುವುದು ಉತ್ತಮ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಆಪ್ತರೊಬ್ಬರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಅನೇಕರಿಗೆ ಈ ದಿನವು ಸವಾಲುಗಳಿಂದ ತುಂಬಿರುತ್ತದೆ. ಅದ್ರಲ್ಲು ಮನೆಯ ಖರ್ಚುಗಳ ವಿಚಾರದಲ್ಲಿ ನಿಮಗೆ ಗೊಂದಲದ ದಿನವಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಈ ದಿನವು ಹಲವು ಅನುಕೂಲ ತರಬಹುದು. ಉದರ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿದೆ. ದೇವಾಲಯ ಭೇಟಿಯ ಅವಕಾಶಗಳನ್ನು ಮುಂದೂಡಬೇಡಿ. ಸಹೋದರರಿಂದ ನಿಮಗೆ ಹಣಕಾಸಿನ ನೆರವು ಸಿಗಬಹುದು. ಹೂಡಿಕೆಗಳಿಂದ ದೂರವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಅತ್ಯಂತ ಶುಭವಾಗುತ್ತದೆ. ವ್ಯಾಪಾರಿಗಳು ಲಾಭ ನೋಡಬಹುದು. ಹಳೆಯ ಕೆಲಸಗಳು ಪೂರ್ಣ ಮಾಡದೆ ಬಾಕಿ ಉಳಿಸಕೊಂಡಿದ್ದರೆ ಇಂದು ಪೂರ್ಣ ಮಾಡುವಿರಿ. ಯಾರಿಂದಾದರು ಸಾಲ ಪಡೆದಿದ್ದರೆ ಮರಳಿ ಅವರಿಗೆ ನೀಡಬೇಕಾದ ಒತ್ತಡದಲ್ಲಿ ಇರುವಿರಿ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನ ಸಮಸ್ಯೆಗಳಿವೆ. ನಿಮ್ಮ ಮನೆಯಲ್ಲಿನ ಹಣಕಾಸಿನ ಒತ್ತಡದಿಂದ ಅಶಾಂತಿ ಇರಬಹುದು. ಸ್ವಂತ ವ್ಯಾಪಾರ ಮಾಡುತ್ತಿದ್ದ ಮಂದಿ ಈ ಸಮಯದಲ್ಲಿ ನಷ್ಟ ಅನುಭವಿಸಬಹುದು. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ದಿನವು ಅನುಕೂಲಕರವಾಗಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ನಿಮಗಾಗಿ ಹೊಸ ವಸ್ತುವೊಂದನ್ನು ಇಂದು ಖರೀದಿಸಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಹಿರಿಯರ ಸಲಹೆ ನಿರ್ಲಕ್ಷಿಸಬೇಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಉತ್ತಮ ದಿನ. ನೀವು ಹಲವು ದಿನದಿಂದ ಆಸ್ಪತ್ರೆ ಕುರಿತಾದ ವಿಚಾರದಲ್ಲಿ ಓಡಾಟ ಮಾಡುತ್ತಿದ್ದರೆ ಇಂದು ಸುಧಾರಣೆ ನೋಡುವಿರಿ. ನಿರುದ್ಯೋಗಿಗಳಿಗೆ ಇಂದು ಉತ್ತಮ ಅವಕಾಶ ಸಿಗಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ಬದಲಾವಣೆಗಳಿವೆ. ಹಲವು ದಿನದ ಹಣಕಾಸು ಒತ್ತಡ ನಿವಾರಣೆಯಾಗಲಿದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ, ಆಪ್ತರೊಬ್ಬರ ಭೇಟಿ ಮೂಲಕ ಪ್ರಮುಖ ಕೆಲಸವೊಂದನ್ನು ಮಾಡಿ ಮುಗಿಸುವಿರಿ.



Click it and Unblock the Notifications










